Kiccha Sudeep: ರೊಮಾನ್ಸ್ ಸೀನ್ ಮಾಡುವಾಗ ಎಷ್ಟು ಕಷ್ಟ ಆಗುತ್ತೆ ಗೊತ್ತಾ?: ನಟಿಯರು ಕೊಡೋ ಕಾಟ ಬಿಚ್ಚಿಟ್ಟ ಕಿಚ್ಚ ಸುದೀಪ್
ಮುಂದಿನ ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಅವರು ಗುಡ್ ಬೈ ಹೇಳಿದ್ದು, ಸದ್ಯ ಮ್ಯಾಕ್ಸ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ನಟಿಯರ ಜೊತೆ ರೊಮಾನ್ಸ್ ಮಾಡುವಾಗ ತಮಗೆ ಏನಾಲ್ಲಾ ಕಷ್ಟ ಆಗುತ್ತದೆ ಎನ್ನುವುದನ್ನು ಕಿಚ್ಚ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ನಟಿಯರು ಕೊಡೋ ಕಾಟವನ್ನ ಆ್ಯಂಕರ್ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ಗೆ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಈ ಸಂದರ್ಶನದಲ್ಲಿ ಅನುಶ್ರೀ ಅವರು ಸರ್ ನಿಮಗೆ ತುಂಬಾ ಕಷ್ಟ ಎನ್ನಿಸುವುದು ಯಾವುದು? ಆ್ಯಕ್ಷನ್ನಾ, ರೊಮಾನ್ಸಾ ಅಥ್ವಾ ಡಾನ್ಸಾ ಎಂದು ಪ್ರಶ್ನಿಸಿದ್ದಾರೆ. ಆಗ ಜೋರಾಗಿ ನಕ್ಕಿರೋ ಸುದೀಪ್ ಅವರು ರೊಮಾನ್ಸ್ ಬಗ್ಗೆ ಕ್ಲಾರಿಫಿಕೇಷ್ ಕೊಟ್ಟು ಅದನ್ನು ಮಾಡುವುದು ಎಷ್ಟು ಕಷ್ಟ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.

ರೊಮಾನ್ಸ್ ಅನ್ನೋದು ಎದುರಿಗಿರುವ ಕಾಸ್ಟಿಂಗ್ ಅಂದರೆ ನಟಿಯರ ಮೇಲೆ ಹೋಗತ್ತೆ. ಕೆಲವೊಮ್ಮೆ ನಟಿಯರು ಫ್ರೆಂಡ್ಸ್ ಆಗಿರ್ತಾರೆ, ಈಸಿಯಾಗಿ ನಡೆದು ಹೋಗುತ್ತೆ. ಆದರೆ ಕೆಲವರು ಮೇಕಪ್ ಮೇಲೆ ಸಿಕ್ಕಾಪಟ್ಟೆ ಕಾನ್ಶಿಯಸ್ ಆಗ್ತಿರ್ತಾರೆ. ಅದೇನೂ ತಪ್ಪು ಅನ್ನೋಕೆ ಆಗಲ್ಲ. ಆದರೆ ಆಗ ಸ್ವಲ್ಪ ಕಷ್ಟ ಆಗುತ್ತೆ ಎನ್ನುತ್ತಲೇ ಅವರು ರೊಮಾನ್ಸ್ ಮಾಡಲು ಹೋಗುವಾಗ ಮೇಕಪ್ ಹಾಳಾಗತ್ತೆ, ಕೂದಲು ಹಾಳಾಗತ್ತೆ ಎಂದು ಇಲ್ಲಿ ಮುಟ್ಟಿ, ಅಲ್ಲಿ ಮುಟ್ಟಬೇಡಿ ಎಂದೆಲ್ಲಾ ಹೇಳ್ತಾರೆ, ಆಗ ತುಂಬಾ ಕಷ್ಟವಾಗಿ ಬಿಡುತ್ತೆ ಎಂದು ಕಿಚ್ಚ ಸುದೀಪ್ ಅವರು ತಮಾಷೆಯಾಗಿ ಹೇಳಿದ್ದಾರೆ.
ಡಾನ್ಸ್ ಕುರಿತು ನಟ ಕಿಚ್ಚ ಸುದೀಪ್ ಅವರು ಮಾತನಾಡಿ, ನ್ನಿಂದ ಡಾನ್ಸ್ ಮಾಡಿಸಲೇ ಬೇಕು ಅಂದಾಗ ನಿರ್ದೇಶಕರು ಡಾನ್ಸ್ ಬರದ ನಟರ ವಿಡಿಯೋ ತೋರಿಸಿ, ಇವರು ಹೀಗೆ ಮಾಡ್ತಾರೆ, ನೀವು ಚೆನ್ನಾಗಿ ಮಾಡಬಹುದು ಅಂತ ಹುರಿದುಂಬಿಸ್ತಾರೆ. ಅದರೆ ಅಪ್ಪು ಅವರಂಥವರ ಡಾನ್ಸ್ ನೋಡಿದಾಗ ನಾನು ಡಾನ್ಸ್ ಮಾಡುವ ಗೋಜಿಗೆ ಹೋಗಲ್ಲ. ಆದ್ದರಿಂದ ಡಾನ್ಸ್ ಸೀನ್ ಬಂದಾಗಲೆಲ್ಲಾ ಮೂಡ್ ಡಿಫರೆಂಟ್ ಆಗಿರುತ್ತೆ. ಒಂದು ವೇಳೆ ಯಾವುದಾದರೂ ಸಿನಿಮಾದಲ್ಲಿ ಒಳ್ಳೆಯ ಡಾನ್ಸ್ ಮಾಡಿದ್ದೆ ಅಂದ್ರೆ, ಆಗ ಯಾರೋ ಒಬ್ಬ ಡಾನ್ಸ್ ಬರದ ನಟನ ವಿಡಿಯೋ ತೋರಿಸಿ ಡಾನ್ಸ್ ಮಾಡಿಸಿದ್ದಾರೆ ಎಂದೇ ಅರ್ಥ ಎಂದಿದ್ದಾರೆ.
ಇನ್ನೂ ಬಿಗ್ ಬಾಸ್ ಬಿಟ್ಟ ಕಾರಣದ ಕುರಿತು ಕಿಚ್ಚ ಸುದೀಪ್ ಅವರು ಮಾತನಾಡಿ, ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ. ಎಷ್ಟು ಅಂತ ಮಾಡೋದು, ಸಾಕಾಗಿದೆ. ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್ಬಾಸ್ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್ ಹಾಕಬೇಕು. ಈ ಎಫರ್ಟ್ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ ಏರ್ಪೋರ್ಟ್ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತುಎನ್ನುವ ಮೂಲಕ ಬಿಗ್ಬಾಸ್ ಪಯಣಕ್ಕೆ ಸುದೀಪ್ ಅವರು ವಿದಾಯ ಹೇಳಿದ್ದಾರೆ.












Click it and Unblock the Notifications