Golden Star Ganesh: ಸೆಕ್ಯೂರಿಟಿ ಗಾರ್ಡ್ ಮಗ ಗೋಲ್ಡನ್ ಸ್ಟಾರ್ ಆದ ಕಥೆ ಇದು!
ಗೋಲ್ಡನ್ ಸ್ಟಾರ್ ಗಣೇಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಗಣೇಶ್ ಕೋಟಿ ಕೋಟಿ ಬೆಲೆ ಬಾಳುವ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಗಣೇಶ್ ಕೈಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ಕಾರುಗಳು ಇವೆ.. ಹೀಗೆ ಮುಂಗಾರು ಮಳೆ ಖ್ಯಾತಿಯ ನಟ ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ನೂರಾರು ಚರ್ಚೆಗಳು ನಡೆಯುತ್ತವೆ. ಆದರೆ ಇದೇ ಗೋಲ್ಡನ್ ಸ್ಟಾರ್ ಗಣೇಶ್, ಸ್ಟಾರ್ ಆಗುವ ಮೊದಲು ಹೇಗೆಲ್ಲಾ ಕಷ್ಟಪಟ್ಟಿದ್ದರು ಗೊತ್ತೆ? ಸೆಕ್ಯೂರಿಟಿ ಗಾರ್ಡ್ ಮಗ 'ಗೋಲ್ಡನ್ ಸ್ಟಾರ್' ಆದ ಕಥೆ ತಿಳಿಯೋಣ ಬನ್ನಿ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈ ಪಟ್ಟ ಸಿಕ್ಕಿದ್ದು ಸುಲಭವಾಗಿ ಅಲ್ಲ. ತುಂಬಾ ಕಷ್ಟಪಟ್ಟು ನಟ ಗಣೇಶ್ ಮೇಲೆ ಬಂದಿದ್ದಾರೆ. ಉದಯ ಟಿವಿಯ 'ಕಾಮಿಡಿ ಟೈಮ್ಸ್' ಕಾರ್ಯಕ್ರಮದ ಮೂಲಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಫೇಮಸ್ ಆಗಿದ್ದರು. ಆ ನಂತರ 2006 ರಲ್ಲಿ ಮೊದಲ ಬಾರಿಗೆ ಹೀರೋ ಆಗಿ 'ಚೆಲ್ಲಾಟ' ಸಿನಿಮಾ ಮೂಲಕ ಎಂಟ್ರಿ ಪಡೆದಿದ್ದರು. ಹೀಗೆ ಸಿನಿಮಾ ರಂಗಕ್ಕೆ ನಟ ಗಣೇಶ್ ಬರುವ ಮೊದಲು ಅವರ ಮನೆಯಲ್ಲಿ ಕಡು ಬಡತನ ಇತ್ತು. ಗಣೇಶ್ ಅವರ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ. ಹೀಗೆ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ನಟ ಗಣೇಶ್ ಮುಂದೆ ದೊಡ್ಡ ಸ್ಟಾರ್ ಆಗಿಬಿಟ್ಟರು.

ಗಣೇಶ್‌ಗೆ ಸಿಕ್ಕಿತ್ತು ಮತ್ತೊಂದು ಜನ್ಮ!
'ಮುಂಗಾರು ಮಳೆ' ಈ ಪದ ಕೇಳುತ್ತಿದ್ದಂತೆ ಜನಗಳಿಗೆ ಮಳೆ ಬಗ್ಗೆ ನೆನಪು ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಕನ್ನಡ ಸಿನಿಮಾ ರಂಗದಲ್ಲೇ ದೊಡ್ಡ ಹೆಸರು ಮಾಡಿದ್ದ ಚಿತ್ರ 'ಮುಂಗಾರು ಮಳೆ' ಕಣ್ಣ ಎದುರಲ್ಲಿ ಬಂದು ಬಿಡುತ್ತದೆ. ಅದರಲ್ಲೂ 'ಮುಂಗಾರು ಮಳೆ' ಸಿನಿಮಾ ನಟ ಗಣೇಶ್ ಬಾಳಿಗೆ ದೊಡ್ಡ ತಿರುವನ್ನು ನೀಡಿತ್ತು. ಆ ನಂತರ ಸಾಲು ಸಾಲು ಸಿನಿಮಾ ಮಾಡುತ್ತಾ ನಟ ಗಣೇಶ್ ಬೆಳೆದು ನಿಂತರು. ಮುಂಗಾರು ಮಳೆ ಸಿನಿಮಾ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ರಿಲೀಸ್ ಆಗಿ ಮಿಂಚು ಹರಿಸಿತ್ತು. ಅಲ್ಲದೆ ಈ ಸಿನಿಮಾ ಬರೋಬ್ಬರಿ 25 ವಾರಗಳ ಕಾಲ ಥಿಯೇಟರ್ ಸ್ಕ್ರೀನ್ ಮೇಲೆ ಮಿಂಚು ಹರಿಸಿತ್ತು.
ಕದ್ದುಮುಚ್ಚಿ ಗಣೇಶ್ ಮನೆಗೆ ಹೋಗ್ತಿದ್ರು!
ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಕೂಡ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಅವರ ತಂದೆ ಕಂಡರೆ ಸಾಕಷ್ಟು ಭಯ ಇತ್ತಂತೆ. ಅದರಲ್ಲೂ ಗಣೇಶ್ ತಮ್ಮ ಮನಗೆ ಹೋಗಿ ಬರಲು ಸಾಕಷ್ಟು ಬಾರಿ ಭಯ ಪಡುತ್ತಿದ್ದರು ಎಂಬ ಮಾತುಗಳು 15 ವರ್ಷಗಳ ಹಿಂದೆಯೇ ಕೇಳಿಬಂದವು. ಯಾಕಂದ್ರೆ ಗಣೇಶ್ ಅವರ ಅಪ್ಪ ನಟ ಗಣೇಶ್ ವಿರುದ್ಧ ಕೋಪಗೊಂಡಿದ್ದರಂತೆ ಹೀಗಾಗಿಯೇ ರಾತ್ರಿ ವೇಳೆ ಹೋಗಿ ಅಮ್ಮನ ಮುಖ ನೋಡಿಕೊಂಡು ಮಾತನಾಡಿಸಿ ಮರಳಿ ಬೇರೆ ಕಡೆಗೆ ಹೋಗುತ್ತಿದ್ದರಂತೆ ಗಣೇಶ್. ಹೀಗೆ ಗಣೇಶ್ ಸಿನಿಮಾ ರಂಗಕ್ಕೆ ಹೋಗಿದ್ದು ಸ್ವತಃ ಅವರ ತಂದೆಗೆ ಇಷ್ಟ ಇರಲಿಲ್ಲ ಎಂಬ ಮಾತು ಇದೆ.
ಪ್ಯಾನ್ ಇಂಡಿಯಾ ಲೆವೆಲ್ ಹವಾ!
ಗಣೇಶ್ ಅಂದ್ರೆ ಒಂದು ಹವಾ ಇದೆ, ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಿಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇದ್ದರೂ, ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಪ್ಯಾನ್ ಇಂಡಿಯಾ ಹೀರೋ ಸಮಾನ. ಯಾಕಂದ್ರೆ ಗಣೇಶ್‌ಗೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಅದ್ರಲ್ಲೂ 'ಮುಂಗಾರು ಮಳೆ' ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಸಾಧಿಸಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು.
ಹೀಗೆ ತಮ್ಮ ವೃತ್ತಿ ಜೀವನದ ಅತ್ಯಂತ ಉತ್ತುಂಗದ ಸ್ಥಿತಿಗೆ ತಲುಪಿದ್ದಾಗ 2008 ರಲ್ಲಿ ಗಣೇಶ್ ದಿಢೀರ್ ಮದುವೆ ಆಗಿಬಿಟ್ಟರು. ಆ ನಂತರ ಕೂಡ ಸಾಲು ಸಾಲು ಸಿನಿಮಾಗಳನ್ನ ಮಾಡಿ, ತಮ್ಮ ಅಭಿಮಾನಿಗಳನ್ನ ರಂಜಿಸಿದ ಗೋಲ್ಡನ್ ಸ್ಟಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಇಡೀ ಜಗತ್ತಿನಾದ್ಯಂತ ನಟ ಗಣೇಶ್ ಅವರಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಗಣೇಶ್ ಇಂದು ಹವಾ ಎಬ್ಬಿಸಿದ್ದಾರೆ.
ಗಣೇಶ್ ಆಸ್ತಿ ಎಷ್ಟು ಕೋಟಿ?
ಹೀಗೆ 2005ರ ತನಕ ಉದಯ ಟಿವಿಯ 'ಕಾಮಿಡಿ ಟೈಮ್' ಶೋ ನಡೆಸಿಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದ ನಟ ಗಣೇಶ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದ್ದು 2006 ರಲ್ಲಿ. ಇದೇ ವರ್ಷ ಗಣೇಶ್ ಹೀರೋ ಆಗಿ ನಟನೆ ಮಾಡಿದ್ದ 'ಚೆಲ್ಲಾಟ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಚೆಲ್ಲಾಟ' ಗಣೇಶ್ ಅವರ ಬದುಕಿನಲ್ಲಿ ಬ್ಲಾಕ್ ಬಸ್ಟರ್ ಆಗದೇ ಇದ್ದರೂ, ಭಾರಿ ದೊಡ್ಡ ಹೆಸರು ತಂದುಕೊಟ್ಟಿತ್ತು. ಅಲ್ಲದೆ ಮುಂದೆ ಗಣೇಶ್‌ಗೆ 'ಮುಂಗಾರು ಮಳೆ' ಚಾನ್ಸ್ ಹುಡುಕಿಕೊಂಡು ಬರುವಂತೆ ಮಾಡಿತ್ತು. ಹಾಗಾದ್ರೆ ಇಷ್ಟುವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಗಣೇಶ್ ಮಾಡಿರುವ ಆಸ್ತಿ ಎಷ್ಟು ಕೋಟಿ ರೂಪಾಯಿ ಗೊತ್ತೆ?












Click it and Unblock the Notifications