Darshan Thoogudeepa: ಐಯಯ್ಯೋ.. ದರ್ಶನ್ ತೂಗುದೀಪ್ & ಜೊತೆಗಾರರು ಬಳ್ಳಾರಿ ಜೈಲಿಗೆ...
ದರ್ಶನ್ ತೂಗುದೀಪ್ ಕೇಸ್ ಇದೀಗ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ತಲೆನೋವು ತರಿಸಿದೆ. ಮೊದಲೇ ಸಮಸ್ಯೆಗಳ ಸರಮಾಲೆಗೆ ಸಿಲುಕಿ ಪರದಾಡುತ್ತಿರುವ ರಾಜ್ಯ ಸರ್ಕಾರಕ್ಕೆ, ಇದೀಗ ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಮೋಜು & ಮಸ್ತಿ ಮಾಡುತ್ತಿರುವ ವಿಚಾರ ಕಿಚ್ಚು ಹೊತ್ತಿಸಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ದರ್ಶನ್ ತೂಗುದೀಪ್ & ತಂಡವನ್ನು ಪೀಸ್ ಪೀಸ್ ಮಾಡಲು ನಿರ್ಧಾರ ಮಾಡಿದ್ದು, ಸಂಚಲನ ಸೃಷ್ಟಿಸುವ ನಿರ್ಧಾರವನ್ನ ಇದೀಗ ಕೈಗೊಂಡಿದೆ!
ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ದರ್ಶನ್ ತೂಗುದೀಪ್ ಕೇಸ್ ದೊಡ್ಡ ತಲೆನೋವಿನ ಜತೆ ನಿದ್ದೆ ಕೂಡ ಬರದಂತೆ ಮಾಡುತ್ತಿದೆ. ಈಗಾಗಲೇ ಮೈಸೂರಿನ ಮುಡಾ ಕೇಸ್ ಸಿದ್ದರಾಮಯ್ಯ ಅವರ ಸರ್ಕಾರವನ್ನ ಬೆನ್ನು ಬಿಡದೆ ಕಾಡುತ್ತಿದ್ದು, ಈ ಸಮಯದಲ್ಲಿ ದರ್ಶನ್ ತೂಗುದೀಪ್ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ಆರೋಪಿಗಳ ಬೆನ್ನಿಗೆ ನಿಂತಿದೆ ಅಂತಾ ವಿರೋಧ ಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.

ಇದರ ಜೊತೆಗೆ ರಾಷ್ಟ್ರೀಯ ನ್ಯೂಸ್ ಚಾನೆಲ್‌ಗಳಲ್ಲಿ ಇದೇ ವಿಚಾರ ಮುಂದೆ ಇಟ್ಟುಕೊಂಡು, ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸುದ್ದಿ ಪ್ರಕಟಿಸಲಾಗ್ತಿದೆ ಎಂಬ ಆರೋಪ ಕೂಡ ಇದ್ದು, ಈ ಕಾರಣಕ್ಕೆ ಅಲರ್ಟ್ ಆಗಿರುವ ಸಿಎಂ ಸಿದ್ದರಾಮಯ್ಯ & ಗೃಹ ಸಚಿವ ಪರಮೇಶ್ವರ್ ಅವರು ಇದೀಗ ದರ್ಶನ್ & ಗ್ಯಾಂಗ್‌ನ ಪೀಸ್ ಪೀಸ್ ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಈಗ ದರ್ಶನ್ ತೂಗುದೀಪ್ & ಜೊತೆಗಾರರು ಯಾವ ಜೈಲಿಗೆ ಹೋಗಲಿದ್ದಾರೆ? ಮುಂದೆ ಓದಿ.
ಬಳ್ಳಾರಿಗೆ & ಬೆಳಗಾವಿಗೆ ಶಿಫ್ಟ್ ಗ್ಯಾರಂಟಿ?
ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನ ಒಳಗೆ ನೆಮ್ಮದಿಯಾಗಿ ಊಟ & ತಿಂಡಿ ಮಾತ್ರವಲ್ಲ ಎಣ್ಣೆ ಹೊಡೆಯುತ್ತಾ, ಬಿರಿಯಾನಿ ತಿಂದು, ಟೀ ಕುಡಿದು ಸಿಗರೇಟು ಕೂಡ ಸೇದುತ್ತಾ ಮಜಾ ಮಾಡುತ್ತಿದೆ ಎಂಬುದು ಬಿಜೆಪಿ & ಜೆಡಿಎಸ್ ನಾಯಕರ ಆರೋಪ. ಇದೀಗ ಈ ಮುಜುಗರ ತಪ್ಪಿಸಿಕೊಳ್ಳಲು, ಕಾಂಗ್ರೆಸ್ ಸರ್ಕಾರ ಅಂದ್ರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ದರ್ಶನ್ ತೂಗುದೀಪ್ & ಗ್ಯಾಂಗ್‌ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಿ ಕೈತೊಳೆದುಕೊಳ್ಳಲು ಸಜ್ಜಾಗಿದೆ. ಇದೇ ಕಾರಣಕ್ಕೆ ಇದೀಗ ದರ್ಶನ್ & ಸಹಚರರನ್ನ ಇದೀಗ ಬಳ್ಳಾರಿ & ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲು ಅಂತಿಮ ಹಂತದ ತಯಾರಿ ನಡೆದಿದೆ. ಹೀಗೆ ದರ್ಶನ್ ಅವರನ್ನ ಮಾತ್ರ ಒಂಟಿಯಾಗಿ ಬಳ್ಳಾರಿ ಜೈಲಿಗೆ ಹಾಕಲು ಸಿದ್ಧತೆ ನಡೆದಿದೆಯಂತೆ.
ನಟ ದರ್ಶನ್‌ಗೆ ಜಾಮೀನು ಸಿಗಲ್ಲ?
ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಲ್ಲಿ ಕೂಡ, ಸಿಗರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಈಗ ಕಾಡುತ್ತಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ? ಅನ್ನೋದನ್ನ ಕೂಡ ಕಾದು ನೋಡಬೇಕು. ಇದರ ಜೊತೆಯಲ್ಲಿ ವಿಡಿಯೋ ಕಾಲ್ ಕೂಡ ಮಾಡಿದ್ದಾರೆ. ದರ್ಶನ್ ತೂಗುದೀಪ್ ವಿಡಿಯೋ ಕಾಲ್ ಮಾಡಿದ ಬಗ್ಗೆ ಸಾಕ್ಷಿ ಸಿಕ್ಕಿ ಬಿದ್ದಿರುವುದು ಮತ್ತಷ್ಟು ಗಂಡಾಂತರ ತರಿಸಿದೆ. ಹಾಗೇ ಜಾಮೀನು ಸಿಗುವುದು ಕೂಡ ಮತ್ತಷ್ಟು ಕಷ್ಟ ಆಗಲಿದೆ ಎಂಬ ಮಾತು ಕೇಳಿಬಂದಿದೆ. ಈ ನಡುವೆ ಬೇರೆ ಜೈಲಿಗೆ ಶಿಫ್ಟ್ ಮಾಡೋದಕ್ಕೆ ತಯಾರಿಗಳು ಕೂಡ ಸಾಗಿವೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications