Darshan Thoogudeepa: ‘ಕಿಲ್ಲಿಂಗ್ ಸ್ಟಾರ್’ ದರ್ಶನ್ ಕೂಡ ದಲಿತರನ್ನು ನಿಂದಿಸಿದ್ದನಾ? ಜಾತಿ ನಿಂದನೆ ಕೇಸ್ ದಾಖಲಿಸಲು ಸಿದ್ಧತೆ?
ದರ್ಶನ್ ತೂಗುದೀಪ್ ಈಗ 'ಕಿಲ್ಲಿಂಗ್ ಸ್ಟಾರ್' ಆಗಿದ್ದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ದರ್ಶನ್ ತೂಗುದೀಪ ಕಂಬಿ ಎಣಿಸುತ್ತಿದ್ದಾನೆ ಎಂದು ಅವನ ವಿರೋಧಿಗಳು ಹೇಳುತ್ತಾ ಇದ್ದಾರೆ. ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ ಅಲಿಯಾಸ್ 'ಡಿ-ಬಾಸ್' ವಿರುದ್ಧ ಹೊಸ ಆರೋಪವೂ ಕೇಳಿ ಬಂದಿದ್ದು, 'ಕಿಲ್ಲಿಂಗ್ ಸ್ಟಾರ್' ದರ್ಶನ್ ತೂಗುದೀಪ ಕೂಡ ದಲಿತರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ ಎಂದು ದರ್ಶನ್ ವಿರೋಧಿಗಳು ಹೊಸ ಸಾಕ್ಷ್ಯ ತಂದಿದ್ದಾರೆ! ಹಾಗಾದ್ರೆ ಮುನಿರತ್ನಂ ನಾಯ್ಡು ರೀತಿಯಲ್ಲೇ ದರ್ಶನ್ ತೂಗುದೀಪ್ ವಿರುದ್ಧ ಕೂಡ ಜಾತಿ ನಿಂದನೆ ಪ್ರಕರಣ...
ದರ್ಶನ್ ತೂಗುದೀಪ ಬಾಯಿ ಬಿಟ್ಟರೆ ಸಾಕು ಬರೀ ಕೆಟ್ಟ ಕೆಟ್ಟ ಮಾತುಗಳನ್ನ ಆಡುತ್ತಾನೆ. ತನ್ನ ಹೆಂಡತಿ & ಮಗನ ಬಗ್ಗೆಯು ಕೂಡ ಕೊಲೆ ಆರೋಪಿ ದರ್ಶನ್ ತೂಗುದೀಪ ಕೆಟ್ಟ ಪದ ಬಳಕೆ ಮಾಡಿದ್ದ ಎಂಬ ಆರೋಪ ದರ್ಶನ್‌ನ ವಿರೋಧಿಗಳದ್ದು. ಅಲ್ಲದೆ ತನ್ನ ಹೆಂಡತಿ ಬಗ್ಗೆ ಇದೇ ಡಿ-ಬಾಸ್ ಅಲಿಯಾಸ್ ದರ್ಶನ್ ತೂಗುದೀಪ ಕೆಟ್ಟ ಪದ ಬಳಕೆ ಮಾಡಿದ್ದು, ಪೊಲೀಸರ ಎದುರಲ್ಲೇ ನಿನ್ನ ಅದು ಮಾಡ್ತೀನಿ & ಇದು ಮಾಡ್ತೀನಿ ಅಂತಾ ಹೇಳಿದ್ದ ಎಂಬ ಆರೋಪವೂ ಕೇಳಿಬಂದಿತ್ತು. ಇದರ ಜೊತೆಗೆ ದಲಿತರ ಬಗ್ಗೆ ಕೂಡ ದರ್ಶನ್ ತೂಗುದೀಪ್ ನಿಂದನೆ ಮಾಡಿದ ಆರೋಪ ಕೇಳಿಬಂದಿದೆ.

ನಟ ದರ್ಶನ್ ತೂಗುದೀಪ್ ಲಾಕ್?
ನಟ ದರ್ಶನ್ ದಲಿತ ಸಮುದಾಯವನ್ನು ನಿಂದಿಸಿದ್ದೂ ಅಲ್ಲದೆ, ತಾನೇ ತಾಳಿ ಕಟ್ಟಿದ ಹೆಂಡಿತಿ ಬಗ್ಗೆ ದರ್ಶನ್ ತೂಗುದೀಪ ಕೆಟ್ಟ ಕೆಟ್ಟ ಪದ ಬಳಕೆ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಮುನಿರತ್ನಂ ನಾಯ್ಡು ರೀತಿ ದರ್ಶನ್ ತೂಗುದೀಪ್ ವಿರುದ್ಧ ಕೂಡ ಜಾತಿ ನಿಂದನೆ ಕೇಸ್ ದಾಖಲಾಗುತ್ತಾ? ಹಾಗಾದ್ರೆ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಸಿಕ್ಕಿರುವ ಮಹತ್ವದ ಸಾಕ್ಷ್ಯ ಏನು? ದರ್ಶನ್ ತೂಗುದೀಪ್ ವಿರೋಧಿಗಳು ಹೇಳುತ್ತಾ ಇರೋದು ಏನು? ಬನ್ನಿ ತಿಳಿಯೋಣ.
'ಜಲಗಾರ' ಪದ ಬಳಸಿದ ದರ್ಶನ್?
ದರ್ಶನ್ ತೂಗುದೀಪ ತನ್ನ ಕುಟುಂಬದ ಯಾರ ಜೊತೆಯಲ್ಲೂ ಸರಿಯಾಗಿ ಇರಲಿಲ್ಲ. ಇದೇ ಕಾರಣಕ್ಕೆ ಒಂದು ಬಾರಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ದರ್ಶನ ಕೂಡ ಸೋ ಕಾಲ್ಡ್ ಡಿ-ಬಾಸ್ ಅಲಿಯಾಸ್ ದರ್ಶನ್ ತೂಗುದೀಪನಿಗೆ ಆಗಿತ್ತು ಎಂಬುದು ಅವನ ವಿರೋಧಿಗಳು ಹೇಳುವ ಮಾತು. ಹೀಗಿದ್ದಾಗ ಕೆಲವು ವರ್ಷಗಳ ಹಿಂದೆ ದರ್ಶನ್ ತೂಗುದೀಪ ತಾನೇ ತಾಳಿ ಕಟ್ಟಿ ಸಪ್ತಪದಿ ತುಳಿದ ಹೆಂಡತಿ ಬಗ್ಗೆ ಕೆಟ್ಟ ಕೆಟ್ಟ ಪದ ಬಳಕೆ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಹೀಗೆ ದರ್ಶನ್ ತೂಗುದೀಪ್ ತನ್ನ ಪತ್ನಿಗೆ ಕೆಟ್ಟದಾಗಿ ಬೈದಿದ್ದ ಆರೋಪಕ್ಕೆ ಸಾಕ್ಷಿಯಾಗಿ ಒಂದು ಆಡಿಯೋ ಕೂಡ ವೈರಲ್ ಆಗಿತ್ತು. ಹೀಗೆ ವೈರಲ್ ಆಗಿದ್ದ ಆಡಿಯೋ ಒಳಗೆ 'ಜಲಗಾರ' ಎಂಬ ಪದ ಬಳಕೆ ಮಾಡಿದ್ದಾನೆ ದರ್ಶನ್ ತೂಗುದೀಪ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ದರ್ಶನ್ ತೂಗುದೀಪ್ ವಿರುದ್ಧ ಆಕ್ರೋಶ?
'ಜಲಗಾರ' ಎಂಬ ಪದವು ದಲಿತರನ್ನು ಅಂದರೆ, ಸಮಾಜದ ಕೊಳಕನ್ನು ತೊಳೆದು ಕನ್ನಡ ನಾಡನ್ನು ಆರೋಗ್ಯಕರವಾಗಿ ಇಡುವ ನಮ್ಮ ನಾಡಿನ ಹೆಮ್ಮೆಯ ಸಫಾಯಿ ಕರ್ಮಚಾರಿಗಳನ್ನ ಪ್ರತಿನಿಧಿಸುತ್ತದೆ. ಹೀಗಿದ್ದಾಗ ಇಂತಹ ಸಮುದಾಯದ ಬಗ್ಗೆ ಕೂಡ ದರ್ಶನ್ ತೂಗುದೀಪನು ಕೆಟ್ಟ ಕೆಟ್ಟ ಪದ ಬಳಕೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ದರ್ಶನ್ ತೂಗುದೀಪನ ಈ ಆಡಿಯೋ ವಿರುದ್ಧ ಕೂಡ ಜಾತಿ ನಿಂದನೆ ಕೇಸ್ ದಾಖಲು ಮಾಡಿ, ಆ ನಂತರ ಎಫ್‌ಎಸ್‌ಎಲ್‌ಗೂ ದರ್ಶನ್ ಆಡಿಯೋ ಸ್ಯಾಂಪಲ್ ಕಳುಹಿಸಿ ಪರಿಶೀಲನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ದರ್ಶನ್ ತೂಗುದೀಪನ ವಿರುದ್ಧ ಇದೀಗ ಜಾತಿ ನಿಂದನೆ ಕೇಸ್ ದಾಖಲು ಮಾಡಲು ಸಿದ್ಧತೆ ಸಾಗಿದೆ ಎಂಬ ಸುದ್ದಿ, ಸೋಷಿಯಲ್ ಮೀಡಿಯಾಗಳಲ್ಲೂ ಸಂಚಲನ ಸೃಷ್ಟಿ ಮಾಡುತ್ತಿದೆ.












Click it and Unblock the Notifications