Darshan Thoogudeepa: ‘ಏನ್ರಿ ಮಿಡಿಯಾ’ ಅಂತಾ ದೌಲತ್ತು ತೋರಿದ್ದ ಪೊರ್ಕಿಗೆ ಈಗ ಮೀಡಿಯಾಗಳದ್ದೇ ಭಯ!
ದರ್ಶನ್ ತೂಗುದೀಪ್ ಜೀವನದಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ಸದ್ದು ಮಾಡಿದ್ದ ವಿವಾದಾತ್ಮಕ ವ್ಯಕ್ತಿ. ಅದು ಅವರ ಪರ್ಸನಲ್ ಬಿಡು ಗುರೂ ಅಂತಾ ಜನ ಕೂಡ ಹೇಳ್ತಿದ್ರು, ಆದರೆ ಈಗ ನೋಡಿದರೆ ಭಯಾನಕವಾಗಿ ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿರುವ ಆರೋಪ ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ. ಈ ಸ್ಥಿತಿಯಲ್ಲಿ ಇಷ್ಟುದಿನ ಮಾಧ್ಯಮಗಳ ವಿರುದ್ಧ ಎಗರಾಡುತ್ತಿದ್ದ ದರ್ಶನ್ ತೂಗುದೀಪ್‌ಗೆ ಇದೀಗ ಮೀಡಿಯಾ ಕಂಡರೆ ಭಯ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ! ಯಾಕೆ ಗೊತ್ತಾ?
ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್ ರೀತಿ, ವಿವಾದ ಸೃಷ್ಟಿಸಿದ ಸ್ಟಾರ್ ಇಲ್ಲ. ಹೌದು, ದರ್ಶನ್ ತೂಗುದೀಪ್ ಬುದ್ಧಿ ಕಲಿಯಲ್ಲ ಎಂಬುದು ಪದೇ ಪದೇ ಪ್ರೂವ್ ಆಗುತ್ತಿದೆ. ಹಿಂದೆ ತನ್ನ ಸ್ವಂತ ಹೆಂಡತಿಗೆ ಮಾರಣಾಂತಿಕ ಹಲ್ಲೆ ಮಾಡಿ, ಕೈ ಮುರಿಯುವಂತೆ ಬಡಿದು ರಾಕ್ಷಸನಂತೆ ವರ್ತಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಆ ನಂತರ ಶೂಟಿಂಗ್ ಸಮಯ, ಅಭಿಮಾನಿಗಳನ್ನ ಭೇಟಿ ಮಾಡಿದ ಸಮಯದಲ್ಲಿ ಕೂಡ ಇದೇ ರೀತಿ ಹಲ್ಲೆ ಮಾಡಿದ್ದ ಇದೇ ದರ್ಶನ್ ತೂಗುದೀಪ್ ಅನ್ನೋ ಆರೋಪಗಳು ಇವೆ.

ಹೆಸರು ಹಾಳಾಗುತ್ತಿರುವ ಭಯದಲ್ಲಿ ದರ್ಶನ್?
ಈ ಎಲ್ಲಾ ಆರೋಪಗಳನ್ನೂ ಮೀರಿಸುವಂತೆ ಈಗ ಬರ್ಬರವಾಗಿ ವ್ಯಕ್ತಿ ಒಬ್ಬನನ್ನ ಕೊಲೆಯೇ ಮಾಡಿದ್ದಾನಂತೆ ದುರುಳ ಎಂಬ ಆರೋಪ ಕೆಳಿಬಂದಿದೆ. ಈ ಆರೋಪದ ಬಗ್ಗೆ ಸುದ್ದಿ ಮಾಡಿದ ಮಾಧ್ಯಮಗಳ ಬಗ್ಗೆ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ಭಾರಿ ಮಾತನಾಡುವ ಸಮಯದಲ್ಲೇ, ನಟ ದರ್ಶನ್ ತೂಗುದೀಪ್ ಮಾಧ್ಯಮಗಳಿಗೆ ಭಯಪಟ್ಟಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ! ಹಾಗಾದ್ರೆ 'ಏನ್ರೀ ಮಿಡಿಯಾ' ಅಂತಾ ದೌಲತ್ತು ತೋರಿಸಿದ್ದ ಪೊರ್ಕಿಗೆ ಈಗ ಮೀಡಿಯಾಗಳ ಬಗ್ಗೆ ಭಯ ಶುರುವಾಗಿದ್ದು ಹೇಗೆ? ತನ್ನ ನೇಮ್ & ಫೇಮ್ ಹಾಳಾಗುತ್ತಿದೆ ಅಂತಾ ಭಯಪಟ್ಟನಾ ದರ್ಶನ್ ತೂಗುದೀಪ್? ಮುಂದೆ ಓದಿ.
ಮೀಡಿಯಾಗಳಿಗೆ ಹೆದರಿದ ದರ್ಶನ್?
ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾಸ್ವಾಮಿ ಎಂಬ ವ್ಯಕ್ತಿ ಮೇಲೆ ತೋರಿಸಿದ ಕ್ರೌರ್ಯ ಕರ್ನಾಟಕದ ನೆಲದಲ್ಲಿ ಮಾತ್ರ ಅಲ್ಲ, ಇಡೀ ಇಂಡಿಯಾ ತುಂಬಾ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗ ತನ್ನ ವಿರುದ್ಧ ಕೇಳಿಬಂದ ಆರೋಪ & ಪೊಲೀಸರು ಸಲ್ಲಿಕೆ ಮಾಡಿರುವ ಆರೋಪ ಪಟ್ಟಿ ಅಂದ್ರೆ ಚಾರ್ಜ್ ಶೀಟ್ ಮಾಧ್ಯಮಗಳ ಮೂಲಕ ತನ್ನ ಅಭಿಮಾನಿಗಳಿಗೆ ತಲುಪಬಾರದು ಎಂಬುದು ದರ್ಶನ್ ತೂಗುದೀಪ್ ಉದ್ದೇಶ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಇದೀಗ ದರ್ಶನ್ ತೂಗುದೀಪ್ ಮೀಡಿಯಾಗಳಿಗೆ ಹೆದರಿ, ಮಾನ್ಯ ನ್ಯಾಯಾಲಯದ ಮೊರೆಗೆ ಹೋಗಿದ್ದಾನೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಹೀಗಾಗಿ, ಈ ವಿಚಾರ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡಿ ಚರ್ಚೆಗೆ ವೇದಿಕೆ ಒದಗಿಸಿದೆ.












Click it and Unblock the Notifications