Darshan Thoogudeepa: ‘ದೇವತೆ ಬಟ್ಟೆ ಬಿಚ್ಚಿ’ ಎಂದು ಹೇಳಿದ್ದ ನಟ ದರ್ಶನ್ ತೂಗುದೀಪ್‌ಗೆ ದೇವಿಯ ಶಾಪ ಕಾಡುತ್ತಿದೆ!

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ಎಂಬ ಬಿರುದು ಪಡೆದಿರುವ ದರ್ಶನ್ ತೂಗುದೀಪ್, ಬಾಯಿ ಓಪನ್ ಮಾಡಿದರೆ ಬರೀ ಕೆಟ್ಟ ಕೆಟ್ಟದಾಗಿ ಮಾತನಾಡುತ್ತಾರೆ ಎಂಬ ಆರೋಪಗಳು ಅವರ ವಿರೋಧಿಗಳಿಂದ ಕೇಳಿ ಬರುತ್ತವೆ. ಅದರಲ್ಲೂ ಕೆಲವು ತಿಂಗಳ ಹಿಂದೆ ಇದೇ ದರ್ಶನ್ ತೂಗುದೀಪ, 'ಅದೃಷ್ಟ ದೇವತೆಯ ಬಟ್ಟೆ ಬಿಚ್ಚಿ ರೂಮ್‌ನಲ್ಲಿ ಕೂರಿಸಿಕೊಳ್ಳಬೇಕು' ಎನ್ನುತ್ತಾ ಹಿಂದೂಗಳ ಭಾವನೆ ಕೆರಳಿಸಿದ್ದರು. ಇಂತಿಪ್ಪ ದರ್ಶನ್ ತೂಗುದೀಪ್ ಬಳ್ಳಾರಿ ಜೈಲು ಸೇರಿ ಹೀಗೆ ನರಳಾಡಲು ಕಾರಣ ಇದೇ ದೇವತೆ ಎಂಬ ಮಾತು ಕೇಳಿ ಬಂದಿದ್ದು, ಇದೀಗ ಸಂಚಲನ ಸೃಷ್ಟಿ ಆಗಿದೆ.

ದರ್ಶನ್ ತೂಗುದೀಪ್ ಬಾಯಿ ಸರಿಯಾಗಿ ಇಟ್ಟುಕೊಳ್ಳದ ಕಾರಣ ಈ ಹಂತಕ್ಕೆ ಬಂದಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಕುಡಿದು ಬಂದರೆ ಮುಗೀತು ಕಥೆ ಅನ್ನೋದು ವಿರೋಧಿ ಅಂದ್ರೆ ದರ್ಶನ್ ತೂಗುದೀಪ ವಿರೋಧಿಗಳ ಆರೋಪ. ಇದಕ್ಕೆ ತಕ್ಕಂತೆ ಆಗಾಗ ಕೆಟ್ಟ, ಕೆಟ್ಟ ಆಡಿಯೋ ಮೂಲಕ ದರ್ಶನ್ ತೂಗುದೀಪ್ ಸದ್ದು ಮಾಡಿ ವಿವಾದ ಎಬ್ಬಿಸಿದ್ದರು. ಹೀಗಿದ್ದ ದರ್ಶನ್ ತೂಗುದೀಪ್ ಕೆಲವು ತಿಂಗಳ ಹಿಂದಷ್ಟೇ ಅದೃಷ್ಟ ದೇವತೆ ಬಗ್ಗೆ ಅಸಭ್ಯವಾಗಿಯೇ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾದ್ರೆ ದರ್ಶನ್ ತೂಗುದೀಪ್ ಅಂದು ಅದೃಷ್ಟ ದೇವತೆ ಬಗ್ಗೆ ಹೇಳಿದ್ದೇನು? ದೇವತೆ ಬಟ್ಟೆ ಬಗ್ಗೆ ಮಾತನಾಡಿದ್ದ ದರ್ಶನ್ ತೂಗುದೀಪ್ ಅವರಿಗೆ ದೇವತೆ ಶಾಪ ಕೊಟ್ಟಿದ್ದಾರೆ ಅಂತಾ ಹಿಂದೂಗಳು ಹೇಳುತ್ತಿರುವುದು ಏಕೆ? ಮುಂದೆ ಓದಿ.

Kannada Actor Darshan Thoogudeepa And Goddess Story Explained

ಕನ್ನಡಿಗರು ಹಾಗೂ ಹಿಂದೂಗಳು....

ದರ್ಶನ್ ತೂಗುದೀಪ್ ತಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ನ್ಯೂಸ್ ಚಾನೆಲ್‌ಗಳಿಗೆ ಈ ಬಗ್ಗೆ ಸಂದರ್ಶನ ನೀಡುವ ಸಮಯದಲ್ಲಿ 'ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತಹ ಸಮಯದಲ್ಲಿ ಬಾಗಿಲು ತೆಗ್ದು, ಆಕೆಯನ್ನ ಹಿಡಿದು ರೂಮ್‌ಗೆ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿ ಕೂರಿಸಿಕೊಂಡು ಬಿಡಬೇಕು' ಎಂದಿದ್ದರು ಎಂಬ ಆರೋಪ ಡಿ-ಬಾಸ್ ದರ್ಶನ್‌ನ ವಿರುದ್ಧ ಕೇಳಿಬಂದಿತ್ತು. ಅಲ್ಲದೇ ಈ ಆರೋಪಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿತ್ತು. ಹೀಗಿದ್ದಾಗ, ಸದ್ಯ ದರ್ಶನ್ ತೂಗುದೀಪ್ ದೇವಿಯ ಕೆಂಗಣ್ಣಿಗೆ ಗುರಿಯಾಗಿ ಈಗ ಇಷ್ಟೆಲ್ಲಾ ಸಮಸ್ಯೆ ಎದುರಿಸುವ ಸ್ಥಿತಿ ಬಂದಿದೆ ಎಂದು ಕನ್ನಡಿಗರು ಹಾಗೂ ಹಿಂದೂಗಳು ಹೇಳುತ್ತಿದ್ದಾರೆ.

ದರ್ಶನ್‌ಗೆ ಜೈಲರ್ ಖಡಕ್ ವಾರ್ನಿಂಗ್

ಬಳ್ಳಾರಿ ಜೈಲಿನ ಎದುರು ತನ್ನ ಎರಡೂ ಬೆರಳುಗಳನ್ನ ಅಂದ್ರೆ ಮಧ್ಯದ ಬೆರಳನ್ನು ತೋರಿಸಿ ಅಸಹ್ಯವಾಗಿ ಮೀಡಿಯಾ ಕ್ಯಾಮೆರಾಗೆ ಸನ್ನೆ ಮಾಡಿದ್ದ ದರ್ಶನ್ ತೂಗುದೀಪ್‌ಗೆ ವಾರ್ನಿಂಗ್ ಕೊಡಲಾಗಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಇದೇ ರೀತಿ ಆಡುತ್ತಿದ್ದರೆ ಹೊರ ಹೋಗಲು ಬಿಡಲ್ಲ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನ ಜೈಲರ್, ದರ್ಶನ್ ತೂಗುದೀಪ್ ಜೈಲಿನ ಕೋಣೆಗೆ ನುಗ್ಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ರೀತಿ ಅಹಂಕಾರ ಬಿಡು, ಇಲ್ಲ ಅಂದ್ರೆ ಸರಿಯಾಗಿ ಪಾಠ ಕಲಿಸುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರಂತೆ.

ಒಟ್ನಲ್ಲಿ ದರ್ಶನ್ ತೂಗುದೀಪ್ ಜೀವನದಲ್ಲಿ ಇಷ್ಟೆಲ್ಲಾ ಅನುಭವಿಸಿದ್ದರೂ ಬುದ್ಧಿ ಕಲಿತಿಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಬಳ್ಳಾರಿ ಜೈಲಿನಲ್ಲಿ ಕಿರಿಕ್ ತೆಗೆಯುತ್ತಿದ್ದು, ದರ್ಶನ್ ತೂಗುದೀಪ್ ಇದೇ ರೀತಿ ವರ್ತನೆ ಮುಂದುವರಿಸಿದರೆ ಬೇಲ್ ಅಂದ್ರೆ ಜಾಮೀನನ್ನ ಪಡೆಯುವುದು & ಜೈಲಿಂದ ಹೊರ ಬರುವುದು ಕೂಡ ಕಷ್ಟ ಆಗಲಿದೆ, ಎಂಬ ಅಭಿಪ್ರಾಯ ಇದೀಗ ಕೇಳಿಬಂದಿದೆ.

'ಜಲಗಾರ' ಪದ ಬಳಸಿದ ದರ್ಶನ್?

ದರ್ಶನ್ ತೂಗುದೀಪ ತನ್ನ ಕುಟುಂಬದ ಯಾರ ಜೊತೆಯಲ್ಲೂ ಸರಿಯಾಗಿ ಇರಲಿಲ್ಲ. ಇದೇ ಕಾರಣಕ್ಕೆ ಒಂದು ಬಾರಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ದರ್ಶನ ಕೂಡ ಸೋ ಕಾಲ್ಡ್ ಡಿ-ಬಾಸ್ ಅಲಿಯಾಸ್ ದರ್ಶನ್ ತೂಗುದೀಪನಿಗೆ ಆಗಿತ್ತು ಎಂಬುದು ಅವನ ವಿರೋಧಿಗಳು ಹೇಳುವ ಮಾತು. ಹೀಗಿದ್ದಾಗ ಕೆಲವು ವರ್ಷಗಳ ಹಿಂದೆ ದರ್ಶನ್ ತೂಗುದೀಪ ತಾನೇ ತಾಳಿ ಕಟ್ಟಿ ಸಪ್ತಪದಿ ತುಳಿದ ಹೆಂಡತಿ ಬಗ್ಗೆ ಕೆಟ್ಟ ಕೆಟ್ಟ ಪದ ಬಳಕೆ ಮಾಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಹೀಗೆ ದರ್ಶನ್ ತೂಗುದೀಪ್ ತನ್ನ ಪತ್ನಿಗೆ ಕೆಟ್ಟದಾಗಿ ಬೈದಿದ್ದ ಆರೋಪಕ್ಕೆ ಸಾಕ್ಷಿಯಾಗಿ ಒಂದು ಆಡಿಯೋ ಕೂಡ ವೈರಲ್ ಆಗಿತ್ತು. ಹೀಗೆ ವೈರಲ್ ಆಗಿದ್ದ ಆಡಿಯೋ ಒಳಗೆ 'ಜಲಗಾರ' ಎಂಬ ಪದ ಬಳಕೆ ಮಾಡಿದ್ದಾನೆ ದರ್ಶನ್ ತೂಗುದೀಪ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+