Nagara Panchami: ಕೊರಳಲ್ಲಿ ನಿಜವಾದ ಹಾವು ಇಟ್ಟು ಶೂಟಿಂಗ್: ಭಯಾನಕ ಅನುಭವ ನೆನೆದ ಜಗ್ಗೇಶ್
ನಟ ಜಗ್ಗೇಶ್ ಅವರನ್ನು ನವರಸನಾಯಕ ಎಂದು ಕರೆಯಲಾಗುತ್ತದೆ. ಸದ್ಯ ಅವರು ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ತಮ್ಮ ಪಯಣ ಮುಂದುವರಿಸಿದ್ದಾರೆ. ಜಗ್ಗೇಶ್ ಅವರು ಆರಂಭದಲ್ಲಿ ಖಳನಾಯಕನ ಪಾತ್ರದಲ್ಲಿಯೂ ಮಿಂಚಿ ಸೈ ಎನಿಸಿಕೊಂಡಿದ್ದರು. ಆ ನಂತರ ಕಾಮಿಡಿ ಕಿಂಗ್ ಆಗಿ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿದ್ದರು. ತಮ್ಮ ಅಭಿನಯದ ಮೂಲಕ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದ ಅವರು ಶೂಟಿಂಗ್ ಸಮಯದಲ್ಲಿ ಎದುರಾಗಿದ್ದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಇಂದು ನಾಗರಪಂಚಮಿ ಹಿನ್ನೆಲೆ ನಟ ಜಗ್ಗೇಶ್ ಅವರು ಶುಭಾಶಯ ಕೋರಿದ್ದಾರೆ. ಇದೇ ವೇಳೆ ತಮ್ಮ ಸಿನಿಮಾ ಶೂಟಿಂಗ್ ವೇಳೆ ತಮಗೆ ಗೊತ್ತಿಲ್ಲದಂತೆ ನಿಜವಾದ ಹಾವನ್ನು ಕೊರಳಲ್ಲಿ ಇಟ್ಟಿದ್ದ ಭಯಾನಕ ಘಟನೆಯನ್ನು ಅವರು ನೆನೆದಿದ್ದಾರೆ. 1994ರ ಬೇಡಕೃಷ್ಣ ರಂಗಿನಾಟ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದಾಗಿ ವಿವರಿಸಿದ್ದಾರೆ.

ಈ ಸಿನಿಮಾದಲ್ಲಿ ನಾಗರಪಂಚಮಿ ಪ್ರಯುಕ್ತ ಹುತ್ತಕ್ಕೆ ಪೂಜೆ ಮಾಡುವ ದೃಶ್ಯಗಳಿದ್ದು, ಈ ವೇಳೆ ಜಗ್ಗೇಶ್ ಅವರ ಕೊರಳಲ್ಲಿ ನಿಜವಾದ ಹಾವು ಇಟ್ಟು ಶೂಟಿಂಗ್ ಮಾಡಲಾಗಿತ್ತು ಎನ್ನಲಾಗಿದೆ. ಅಂದಿನ ಭಯಾನಕ ಘಟನೆಯನ್ನು ವಿವರಿಸಿರುವ ಜಗ್ಗೇಶ್, 1994ರಲ್ಲಿ ನನ್ನ ಕಲಾ ಬದುಕಲ್ಲಿ ನನಗರಿಯದೆ, ನನ್ನ ಕುತ್ತಿಗೆಗೆ ಹಾವು ಸುತ್ತಿ ಚಿತ್ರೀಕರಿಸಿದ ದೃಶ್ಯವಿದು ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಹಾವು ತೆಗಿರೋ ಎಂದು ಜೀವ ಭಯದಲ್ಲಿ ಹಾವಾಡಿಗನಿಗೆ ಬೈದ ಕೆಟ್ಟಮಾತುಗಳು ಡಬ್ಬಿಂಗ್ ಹಂತದಲ್ಲಿ ಭಯದ ಮಾತುಗಳಾಗಿ ಬದಲಾಗಿದೆ. ಬೇಡಕೃಷ್ಣ ರಂಗಿನಾಟ ನಮ್ಮ ನಿರ್ಮಾಣದ ಚಿತ್ರವಿದು. ಎಲ್ಲರಿಗೂ ನಾಗರಪಂಚಮಿ ಶುಭಕಾಮನೆ ಎಂದು ಜಗ್ಗೇಶ್ ಶುಭಕೋರಿದ್ದಾರೆ.
ನಾಗರ ಪಂಚಮಿ ಹಿನ್ನೆಲೆ
ಇಂದು ಎಲ್ಲೆಡೆ ನಾಗರಪಂಚಮಿ ಹಬ್ಬ ಆಚರಿಸಲಾಗುತ್ತಿದೆ. ಹಬ್ಬಗಳ ಸರಮಾಲೆಯನ್ನೇ ಹೊತ್ತು ತಂದಿರುವ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯಂದು ಅಷ್ಟಸಂಕುಲ ನಾಗದೇವರು ಎಲ್ಲರ ಕಷ್ಟಗಳನ್ನು ನಿವಾರಿಸಿ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಎಲ್ಲೆಡೆ ವಿಶೇಷ ಪೂಜೆಗಳು ನೆರವೇರುತ್ತಿವೆ. ಹಿಂದೂ ಪಂಚಾಂಗದ ಪ್ರಕಾರ, ನಾಗರ ಪಂಚಮಿ ಪ್ರಮುಖ ಹಬ್ಬಗಳ ಆರಂಭವಲ್ಲದೇ ಶ್ರಾವಣ ಮಾಸದ ಪಂಚಮಿಯ ದಿನ ಆಚರಿಸಲಾಗುತ್ತದೆ. ಈ ಹಬ್ಬವು ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿಗೂ ಮುನ್ನ ಬರುವ ಆರಂಭದ ಹಬ್ಬವಾಗಿದೆ. ನಾಗರ ಪಂಚಮಿಯನ್ನು ಮುಖ್ಯವಾಗಿ ಹೆಣ್ಣುಮಕ್ಕಳು ಆಚರಿಸುತ್ತಾರೆ. ಸಹೋದರಿ ನಾಗದೇವತೆಗೆ ಪ್ರಾರ್ಥನೆ ಮಾಡಿದಲ್ಲಿ, ಸಹೋದರರಿಗೆ ರಕ್ಷಣೆ, ಆರೋಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಮದುವೆ ಹಾಗೂ ಸಂತಾನಕ್ಕಾಗಿ ಈ ಹಬ್ಬವನ್ನು ವಿಶೇಷವಾಗಿದೆ.
ಜನಪದ ಮುಂತಾದ ದೇಶೀ ಪುರಾಣಗಳ ಪ್ರಕಾರ, ಮುಂಗಾರಿನ ಸಮಯದಲ್ಲಿ ಬೆಳೆಗಳನ್ನು ಕೀಟಗಳು, ಇಲಿಗಳು ನಾಶಗೊಳಿಸದಂತೆ ಹಾವುಗಳು ಸಹಾಯ ಮಾಡುತ್ತವೆ. ರೈತರ ಬೆಳೆಯನ್ನು ರಕ್ಷಿಸುವ ನಾಗಗಳಿಗೆ ಧನ್ಯವಾದ ಸಲ್ಲಿಸುವ ವಿಧೇಯತೆಯ ಹಬ್ಬವೇ ನಾಗರ ಪಂಚಮಿ. ಪೌರಾಣಿಕ ಕಥೆಯ ಪ್ರಕಾರ ದೇವಶರ್ಮ ಬ್ರಾಹ್ಮಣನ ಮಕ್ಕಳ ದುರಾಸೆ ಕಂಡು ನಾಗರ ಎಲ್ಲರನ್ನೂ ಕೊಂದುಬಿಡುತ್ತೆ. ಬಳಿಕ ತನಗೆ ಆಶ್ರಯ ನೀಡಿದ್ದ ಹೆಣ್ಣಿನ ಅಣ್ಣಂದಿರ ಜೀವ ಮರಳಿ ಪಡೆದ ದಿನವೇ ನಾಗರ ಪಂಚಮಿ ಎಂಬ ಪ್ರತೀಕವೂ ಇದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications