ಜಾಕಿ...ಕೆರೆಬೇಟೆ..ಫೋಟೋ..: ಈ ವಾರ ತೆರೆಗೆ ಅಪ್ಪಳಿಸಲಿವೆ ಬರೋಬ್ಬರಿ ಆರು ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

ಬೆಂಗಳೂರು, ಮಾರ್ಚ್ 14: ಈ ವಾರ ಕನ್ನಡ ಚಿತ್ರ ಪ್ರೇಮಿಗಳಿಗೆ ಭರ್ಜರಿ ಹಬ್ಬ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ಜಾಕಿ ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದೆ. ಇದರ ಜೊತೆ ಜೊತೆಗೆ ಅನೇಕ ಹೊಸ ಪ್ರಯೋಗಗಳು, ಹೊಸಬರ ಸಿನಿಮಾಗಳು ಕನ್ನಡಿಗರ ಮುಂದಕ್ಕೆ ಬರುತ್ತಿವೆ.

ಈ ವಾರ ಹಲವಾರು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮಾರ್ಚ್ 15 ರಂದು ಪುನೀತ್ ರಾಜ್‌ಕುಮಾರ್ ಅವರ ಜಾಕಿ, ಲಾಕ್‌ಡೌನ್ ಮತ್ತು ವಲಸೆ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಫೋಟೋ, ಮಲೆನಾಡಿನ ಕೆರೆಬೇಟೆ, ಸೋಮು ಸೌಂಡ್ ಇಂಜಿನಿಯರ್ ಸೇರಿದಂತೆ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಅವುಗಳ ವಿವರ ಇಲ್ಲಿದೆ.

Jackie Photo To Somu Sound Engineer 6 Kannada Films Releasing on March 15

ಜಾಕಿ (2010)

ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಸಿನಿಮಾ ಈ ವಾರ ಮರು ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 17 ರಂದು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಿದ್ದು, ಇದರ ಸಂಭ್ರಮಾಚರಣೆಗಾಗಿ ಅಭಿಮಾನಿಗಿಗಾಗಿಯೇ ಜಾಕಿ ಬಿಡುಗಡೆಯಾಗುತ್ತಿದೆ. ಜಾಕಿ ಬಿಡುಗಡೆಯಾದ 14 ವರ್ಷಗಳ ನಂತರ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಭಾವನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹರ್ಷಿಕಾ ಪೂಣಚ್ಚ ಮತ್ತು ರಂಗಾಯಣ ರಘು ಕೂಡ ನಟಿಸಿದ್ದಾರೆ.

ಫೋಟೋ

ಕೊರೊನಾ ಸಮಯದಲ್ಲಿ ಅವೈಜ್ಞಾನಿಕ ಲಾಕ್‌ಡೌನ್‌ ತಂದಿಟ್ಟ ಸವಾಲುಗಳು, ತಂದೆ ಮಗನ ಜರ್ನಿಯನ್ನು 'ಫೋಟೋ' ವಿವರಿಸುತ್ತದೆ. ಯುವ ನಿರ್ದೇಶಕ ಉತ್ಸವ್ ಗೋನಾವರ ನಿರ್ದೇಶಿಸಿದ್ದು, ಫಕೀರಪ್ಪ ಬಂಡಿವಾಡ್ ಅವರೊಂದಿಗೆ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಮಹದೇವ್ ಹಡಪದ್, ಸಂಧ್ಯಾ ಅರಕೆರೆ, ಜಹಂಗೀರ್, ವೀರೇಶ್ ಗೋನಾವರ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ರೈ ಹಿರೇಮಠ್ ಸಂಗೀತ, ದಿನೇಶ್ ದಿವಾಕರನ್ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ. ನಟ ಪ್ರಕಾಶ್ ರಾಜ್ ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ. ಮಾರ್ಚ್ 15 ರಂದು ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಥಿಯೇಟರ್‌ಗಳಲ್ಲಿ 150 ರೂಪಾಯಿಗೆ ನೋಡಬಹುದು.

Jackie Photo To Somu Sound Engineer 6 Kannada Films Releasing on March 15

ಕೆರೆಬೇಟೆ

ಬಹುನಿರೀಕ್ಷಿತ ಕೆರೆಬೇಟೆ ಸಿನಿಮಾ ಮಾರ್ಚ್ 15 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ರಾಜಗುರು ಬಿ. ನಿರ್ದೇಶನದ ಈ ಚಿತ್ರದಲ್ಲಿ ಗೌರಿಶಂಕರ್ ಮತ್ತು ಬಿಂದು ಶಿವರಾಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಸಂಪತ್ ಮೈತ್ರೇಯ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ನಿರ್ಮಿಸಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.

ಸೋಮು ಸೌಂಡ್ ಇಂಜಿನಿಯರ್

ಈ ಹಿಂದೆ ಚಿತ್ರನಿರ್ಮಾಪಕ ದುನಿಯಾ ಸೂರಿ ಅವರ ಕೆಳಗೆ ಕೆಲಸ ಮಾಡಿದ ಅಭಿ ಸೋಮು ಸೌಂಡ್ ಇಂಜಿನಿಯರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಷ್ಟ, ನಿವಿಷ್ಕಾ ಪಾಟೀಲ್, ಜಹಾಂಗೀರ್, ಗಿರೀಶ್ ಜತ್ತಿ ಮತ್ತು ಇತರರು ನಟಿಸಿದ್ದಾರೆ. ಕ್ರಿಸ್ಟೋಫರ್ ಕಿಣಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.

ಹೈಡ್ & ಸೀಕ್

ಪುನಿತ್ ನಾಗರಾಜು ನಿರ್ದೇಶನದಲ್ಲಿ ಹೈಡ್ ಅಂಡ್ ಸೀಕ್ ಸಿನಿಮಾ ತಯಾರಾಗಿದೆ. ಒಬ್ಬ ಪೋಲೀಸ್ ಅಧಿಕಾರಿ, ಕಳ್ಳಸಾಗಣೆ, ಹೀರೋ, ಸಡನ್ ತಿರುವುಗಳು ಸಿನಿಮಾದ ಜೀವಾಳ. ಚಿತ್ರದಲ್ಲಿ ರಾಜೇಶ್ ನಟರಂಗ, ಧನ್ಯ ರಾಮಕುಮಾರ್, ಕೃಷ್ಣ ಹೆಬ್ಬಾಳೆ ನಟಿಸಿದ್ದಾರೆ.

ಚೌ ಚೌ ಬಾತ್

ಕೇಂಜ ಚೇತನ್ ಕುಮಾರ್ ನಿರ್ದೇಶನದ ಚೌ ಚೌ ಬಾತ್ ಒಂದು ಹೈಪರ್ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಸುಶ್ಮಿತಾ ಭಟ್, ಅರುಣಾ ಬಾಲರಾಜ್ ಪ್ರಕಾಶ ಶಾಸ್ತ್ರಿ ಚಿತ್ರದಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+