KGF ರೀತಿ ದುಡ್ಡು ಮಾಡೋಕೆ ಮುಂಬೈ ಸೇರಿದ ಬಾಲಕನ ಕೊನೆ ಸೇರಿದ್ದು.?; ಇಲ್ಲಿದೆ ರೋಚಕ ಕಥೆ
ಸಾಮಾನ್ಯವಾಗಿ ಸಿನಿಮಾಗಳನ್ನು ನೋಡಿ ಪ್ರೇರಿತರಾದವರಿದ್ದಾ. ಇನ್ನೂ ಕೆಲವರು ಅದೇ ರೀತಿ ರಿಯಲ್ ಲೈಫ್‌ನಲ್ಲಿ ಅಲವಡಿಕೆ ಮಾಡಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿರುವವರಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ರೀತಿಯಲ್ಲೇ ರಾಕಿ ಬಾರಿ ಆಗಿ ಬೆಳೆಯಲು ಹೋದ ಪುಟ್ಟ ಬಾಲಕನ ರಣರೋಚಕ ಸ್ಟೋರಿ ಇಲ್ಲಿದೆ ನೀಡಲಾಗಿದೆ ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಸಿನಿ ಸ್ಟಾರ್‌ಗಳನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದ್ದು, ತಮ್ಮ ನೆಚ್ಚಿನ ನಟರಂತೆ ಬಟ್ಟೆ ತೋಡುವುದು, ಏರ್ ಸ್ಟೈಲ್ ಮಾಡಿಸುವುದು, ವಾಹನಗಳನ್ನು ಖರೀದಿ ಕೂಡ ಮಾಡುತ್ತಾರೆ. ಮತ್ತೊಂದು ವಿಚಿತ್ರ ಕೆಟಗರಿಯವರು ಅಭಿಮಾನಿಗಳ ಬಳಗವೂ ಇದ್ದು, ಇವರು ಸಿನಿಮಾವನ್ನು ನಿಜಜೀವನದಲ್ಲಿ ಅಳಡಿಸಿಕೊಳ್ಳುವವರಾಗಿರುತ್ತಾರೆ. ಇಂತಹವರನ್ನು ಸರಿ ದಾರಿಗೆ ತರುವುದು ತುಂಬಾ ಕಷ್ಟ. ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರು ಎಷ್ಟೇ ಬುದ್ಧಿ ಮಾತು ಹೇಳಿದರೂ ಕೇಳದ ಕೆಟಗರಿ ಇವರದ್ದು.

ಅಷ್ಟರ ಮಟ್ಟಿಗೆ ಕೆಲೆ ಸಿನಿಮಾಗಳು ಬೇಗನೇ ಯುವಪೀಳಿಗೆ ಮೇಲೆ ಪರಿಣಾಮ ಬೀರಿಬಿಡುತ್ತವೆ ಎನ್ನುವುದಕ್ಕೆ ಈ ಪುಟ್ಟ ಬಾಕಲನೇ ಕಾರಣ. ಹೌದು.. ಯಶ್ ನಟನೆಯ ಕೆಜಿಎಫ್ ಸಿನಿಮಾ ನೋಡಿ ಬಾಲಕನೊಬ್ಬ ಮನೆಬಿಟ್ಟು ಮುಂಬೈ ಸೇರಿದ ಕಥೆ ಇದೀಹ ಬೆಳಕಿಗೆ ಬಂದಿದ್ದು, ಇದು ಎಲ್ಲಡೆ ಜೋರಾಗಿ ಸದ್ದು ಮಾಡುತ್ತಿದೆ.
2023ರಲ್ಲಿ ಕೆಜಿಎಫ್ ಸಿನಿಮಾ ನೋಡಿ ಪ್ರೇರಣೆಗೊಂಡ ದುಡ್ಡು ಮಾಡಬೇಕೆಂದು ಕಲಬುರಗಿ ಜಿಲ್ಲೆಯ 17 ವರ್ಷದ ಬಾಲಕನೊಬ್ಬ ಮನೆಬಿಟ್ಟು ಬಾಂಬೆಗೆ ಎಂಟ್ರಿ ಕೊಟ್ಟಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಮಗನನ್ನು ಹುಡುಕಲ ಸಾಧ್ಯ ಆಗಲಿಲ್ಲ. ಕೊನೆಗೆ ಆಧಾರ್ ಓಟಿಪಿಗಾಗಿ ಮನೆಗೆ ಕರೆ ಮಾಡಿದಾಗ ತಂದೆ ಮಗನ ಮನವೊಲಿಸಿ ಮನೆಗೆ ವಾಪಸ್ ಕರೆದುಕೊಂಡು ಬಂದ ಘಟನೆ ನಡೆದಿದೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಲಕನ ತಂದೆ ಫೀನಿಕ್ಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಾಲಕನ ತಂದೆ ಕಲಬುರಗಿಯ ಕಾವೇರಿ ನಗರಲ್ಲಿ ಫಿನಿಕ್ಸ್ ಮಸಾಲೆ ಪದಾರ್ಥ ವ್ಯಾಪಾರ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದ ಹಿಂದೆ ಆಟ ಆಡಲು ಹೋಗಿದ್ದ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ಆಗ ತಕ್ಷಣ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿ ಮಗನಿಗಾಗಿ ಹುಡುಕಾಟ ನಡೆಸಿದೆ. ಆದರೆ, ಪತ್ತೆ ಆಗಿರಲಿಲ್ಲ ಎಂದು ಸುದ್ದಿಗೋಷ್ಠಿ ವೇಳೆ ತಂದೆ ಹೇಳಿದ್ದಾರೆ.
ತಾಯಿ ಇಲ್ಲದ ಮಗ ಎಂದು ತುಂಬಾ ಪ್ರೀತಿ, ಕಾಳಜಿಯಿಂದ ಅವನನ್ನು ನೋಡಿಕೊಂಡಿದ್ದೆ. ಆಗ ಮನೆಯಲ್ಲಿ ಬಡತನ ಇದ್ದುದರಿಂದ ಅವರು ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂದು ಕೆಜಿಎಫ್ ಚಿತ್ರದ ನಾಯಕ ರಾಕಿ ರೀತಿಯಲ್ಲಿ ಮುಂಬೈಗೆ ಹೋಗಿ ಹಣ ಸಂಪಾದಿಸುವ ಪ್ರಯತ್ನಸಿದ್ದ ಎಂದು ಫಿನಿಕ್ಸ್ ಹೇಳಿದ್ದಾರೆ.
ಗಾಣಗಾಪುರದ ರೈಲು ನಿಲ್ದಾಣದಿಂದ ರೈಲು ಹತ್ತಿ ಮಗ ಮುಂಬೈ ಸೇರಿದ್ದಾನೆ. ಅಲ್ಲಿ ಕನ್ನಡಿಗರೊಬ್ಬರ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ. ತಿಂಗಳಿಗೆ 12,OOO ರೂಪಾಯಿ ಸಂಬಳ ಎಂದು ಫೀನಿಕ್ಸ್ ಹೇಳಿದ್ದಾರೆ. 'ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ಹೊಸದಾಗಿ ಖಾತೆ ತೆರೆಯಬೇಕಿತ್ತು. ಈ ಹಿನ್ನೆಲೆ ಬೆಂಗಳೂರಿನಲ್ಲಿದ್ದ ಸಹೋದರಿ ಮನೆಗೆ ಹೋಗಿ ಆಧಾರ್ ಕಾರ್ಡ್ ಜೆರಾಕ್ಸ್ ತೆಗೆದುಕೊಂಡಿದ್ದಾನೆ.
ಬಳಿಕ, ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದ ನನ್ನ ಫೋನ್ ನಂಬರ್ ಬದಲಿಸಲು ಪ್ರಯತ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ. ಆಗ ನನ್ನ ನಂಬರ್‌ಗೆ ಓಟಿಪಿ ಬಂದಿತ್ತು. ಓಟಿಪಿ ಸಂಖ್ಯೆ ಕೇಳಲು ಫೋನ್ ಮಾಡಿದ್ದ. 16 ತಿಂಗಳ ಬಳಿಕ ನನ್ನ ಜೊತೆ ಮಾತನಾಡಿದ್ದ. ನಂತರ ಆತನ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದೀನಿ ಎಂದು ಬಾಲಕನ ತಂದೆ ಹೇಳಿದ್ದಾರೆ.
ಸಿನಿಮಾ ಕಥೆ: ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಫ್' ಸಿನಿಮಾ ಎರಡು ಭಾಗಗಳಾಗಿ ತೆರೆಕಂಡಿತ್ತು. ಚಿತ್ರದ ಮೊದಲ ಭಾಗದಲ್ಲಿ ನಾಯಕ ರಾಕಿ(ಯಶ್) ಹಿನ್ನೆಲೆ ಕಟ್ಟಿಕೊಡಲಾಗಿತ್ತು. ತಾಯಿ ಸಾಯುವ ಕೊನೆ ಗಳಿಗೆಯಲ್ಲಿ ಆಕೆ ಮಗನಿಗೆ ನೀನು ಶ್ರೀಮಂತನಾಗು ಪ್ರಬಲನಾಗಿ ಬೆಳೆಯಬೇಕು ಎಂದು ಹೇಳಿರುತ್ತಾಳೆ.
ಅಮ್ಮನ ಮಾತನ್ನು ಈಡೇರಿಸಲು ಸ್ಟ್ರಾಂಗ್ ಆಗಬೇಕೆಂದು ಬಾಲಕ ರಾಕಿ ಮುಂಬೈ ಸೇರುಬಿಡುತ್ತಾನೆ. ಅಲ್ಲಿ ಬೂಟ್ ಪಾಲಿಶ್ ಮಾಡುತ್ತಲೇ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿಕೊಳ್ಳುತ್ತಾನೆ. ಡಾನ್ ಆಗುವ ಕನಸು ಕಂಡ ರಾಕಿ ಒಂದು ಸುಫಾರಿ ಪಡೆದು ಬೆಂಗಳೂರಿಗೆ ಬಂದು ಅದನ್ನು ಈಡೇರಿಸಿಕೊಳ್ಳುತ್ತಾನೆ.
ಬಳಿಕ, ರಾಕಿ ಕೆಜಿಎಫ್ ನರಾಚಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿ, ರಾಕಿ ಭಾಯ್ ಆಗಿ ದೊಡ್ಡ ಮಾಫಿಯಾ ಡಾನ್ ಆಗಿ ಬೆಳೆಯುತ್ತಾನೆ. ಪ್ರಪಂಚದಲ್ಲಿರುವ ಚಿನ್ನ ಎಲ್ಲವೂ ನನಗೆ ಬೇಕೆಂಬ ಹಠ ತೊಡುತ್ತಾನೆ... ಇದೀಗ ಇದೇ ಕಥೆಯನ್ನು ಅನುಸರಿಸಲು ಹೋಗಿ ಬಾಲಕ ಮುಂಬೈ ಸೇರಿದ್ದಲ್ಲದೆ, ಅಲ್ಲಿ 12,000 ರೂಪಾಯಿ ಕೆಲಸಕ್ಕೆ ಸೇರಿಕೊಂಡು ಮತ್ತೆ ತಂದೆಯ ಮನವೊಲಿಕೆ ಮೇರೆಗೆ ಊರಿಗೆ ವಾಪಸಾಗ ಘಟನೆ ನಡೆದಿದೆ.












Click it and Unblock the Notifications