IMDb ರ‍್ಯಾಂಕಿಂಗ್‌ನಲ್ಲೂ ಧುರಂಧರ್-2 ಹಿಂದಿಕ್ಕಿದ ಟಾಕ್ಸಿಕ್, ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ
ಭಾರತೀಯ ಚಿತ್ರರಂಗದಲ್ಲಿ ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಸಿನಿಮಾ ಎಂದರೆ ಟಾಕ್ಸಿಕ್ (Toxic: A Fairytale for Grown-Ups). ಆರಂಭದಲ್ಲಿ ಕೇವಲ ಇಂಡಸ್ಟ್ರಿ ಮಟ್ಟದ ಮಾತುಕತೆಗಳಲ್ಲಿದ್ದ ಈ ಸಿನಿಮಾ, ಇದೀಗ ಸಾಮಾನ್ಯ ಪ್ರೇಕ್ಷಕರಲ್ಲಿಯೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಇನ್ನು ಐಎಂಡಿಬಿ ರಿಯಲ್‌ಟೈಮ್ ಪಾಪ್ಯುಲಾರಿಟಿ ಟ್ರ್ಯಾಕರ್ ಪ್ರಕಾರ, ಈ ವರ್ಷ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ 'ಟಾಕ್ಸಿಕ್' ಪ್ರಥಮ ಸ್ಥಾನಕ್ಕೇರಿದೆ.
ಧುರಂಧರ್‌ಗೆ ಎರಡನೇ ಸ್ಥಾನ
ಒಟ್ಟಾರೆ ವರದಿ ಪ್ರಕಾರ ಶೇ 32.4ರಷ್ಟು ಪ್ರೇಕ್ಷಕರು ಟಾಕ್ಸಿಕ್ ಪರ ಆಸಕ್ತಿ ತೋರಿದ್ದಾರೆ. ಈ ಒಂದೇ ಸಿನಿಮಾಗೆ ಇಷ್ಟೊಂದು ಮಹತ್ವ ಸಿಕ್ಕಿರುವುದು ಸಿನಿರಂಗದಲ್ಲಿ ಅಚ್ಚರಿ ಮೂಡಿಸಿದೆ. ಟಾಕ್ಸಿಕ್ ನಂತರ ಎರಡನೇ ಸ್ಥಾನದಲ್ಲಿ ಬಾಲಿವುಡ್‌ನ ಧುರಂಧರ್-2 (Dhurandhar 2: The Revenge) ಇದ್ದು, ಶೇ 19.9ರಷ್ಟು ಮಂದಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಅಂತರವೇ 'ಟಾಕ್ಸಿಕ್'ಗೆ ಸಿಕ್ಕಿರುವ ಮುನ್ನಡೆಯ ಪ್ರಮಾಣವನ್ನು ತೋರಿಸುತ್ತದೆ. IMDb ರ‍್ಯಾಂಕಿಂಗ್‌ಗಳು ಕೇವಲ ಪ್ರಚಾರದ ಮೇಲೆ ಅಲ್ಲ, ಬಳಕೆದಾರರ ನೈಜ ಹುಡುಕಾಟ, ಪೇಜ್ ವೀಕ್ಷಣೆ ಆಧಾರಿತವಾಗಿರುವುದರಿಂದ, ಕನ್ನಡ ನಟನ ಸಿನಿಮಾ ಇದೀಗ ದೇಶದೆಲ್ಲೆಡೆ ಮಹತ್ವ ಪಡೆದುಕೊಂಡಿದೆ.

ಈ ಸಿನಿಮಾದ ಮೇಲೆ ಹೆಚ್ಚುತ್ತಿರುವ ಕುತೂಹಲಕ್ಕೆ ಪ್ರಮುಖ ಕಾರಣ ನಟ ಯಶ್ ಅವರ ಕಂಬ್ಯಾಕ್ ಎನ್ನಲಾಗಿದೆ. ಹೌದು, ಕೆಜಿಎಫ್ ಸರಣಿಯ ಯಶಸ್ಸಿನ ಬಳಿಕ ಅವರು ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಬಹಳ ಹೆಚ್ಚಿತ್ತು. ಇದೀಗ 'ಟಾಕ್ಸಿಕ್' ಮೂಲಕ ಅವರು ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೈಲಿ, ದೃಶ್ಯ ವಿನ್ಯಾಸವು ಪ್ರೇಕ್ಷಕರ ಕಲ್ಪನೆಗೂ ಮೀರುವಂತಿವೆ.
ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ಆಗಿರುವುದು ಮತ್ತೊಂದು ಮಹತ್ವ ಪಡೆದುಕೊಂಡಿದೆ. ಮಹಿಳಾ ನಿರ್ದೇಶಕಿ ಮತ್ತು ಪ್ಯಾನ್-ಇಂಡಿಯಾ ಸ್ಟಾರ್ ನಡುವಿನ ಈ ಸಂಯೋಜನೆಯು ಇಂಡಸ್ಟ್ರಿಯಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ. ವಿಭಿನ್ನ ಕಥನ ಶೈಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಣಗೊಂಡಿರುವ 'ಟಾಕ್ಸಿಕ್' ಸಾಮಾನ್ಯ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಇತ್ತೀಚೆಗೆ ಈ ಸಿನಿಮಾದ ವಿತರಣಾ ಹಕ್ಕುಗಳ ವರದಿ ನೋಡುವುದಾದರೆ, ವ್ಯಾಪಾರದ ದೃಷ್ಟಿಯಲ್ಲೂ ಸಿನಿಮಾ ದೊಡ್ಡ ಹೆಜ್ಜೆ ಇಟ್ಟಿದೆ. ಆಂಧ್ರಪ್ರದೇಶ-ತೆಲಂಗಾಣ ಮಾರುಕಟ್ಟೆಯಲ್ಲಿ ಶ್ರೀವೆಂಕಟೇಶ್ವರ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಸುಮಾರು ₹120 ಕೋಟಿ ವಿತರಣಾ ಒಪ್ಪಂದವಾಗಿರುವುದು ಸಿನಿರಂಗವನ್ನು ಆಶ್ಚರ್ಯಕ್ಕೆ ಗುರಿಪಡಿಸಿದೆ. ಇದು ಸಾಮಾನ್ಯವಾಗಿ ತೆಲುಗು ದೊಡ್ಡ ಸ್ಟಾರ್ ಸಿನಿಮಾಗಳಿಗೆ ಮೀಸಲಾಗಿರುವ ಮಟ್ಟದ ಡೀಲ್ ಎನ್ನಲಾಗಿದ್ದು, 'ಟಾಕ್ಸಿಕ್' ಒಂದು ತೆಲುಗುಯೇತರ ಸಿನಿಮಾ ಆಗಿದ್ದರೂ, ಇಂತಹ ಒಪ್ಪಂದ ಪಡೆದಿರುವುದು ಈ ಸಿನಿಮಾ ಹೈಪ್‌ಗೆ ಸಾಕ್ಷಿ ಎನ್ನಲಾಗಿದೆ.
ಅಂತರರಾಷ್ಟ್ರೀಯ ಹಕ್ಕುಗಳನ್ನು ಜಾಗತಿಕ ವಿತರಕ Phars Film ಪಡೆದುಕೊಂಡಿದ್ದು, ಸುಮಾರು ₹105 ಕೋಟಿ ಮುಂಗಡ (ಕಮಿಷನ್ ಆಧಾರದಲ್ಲಿ) ನೀಡಿರುವುದು ಚಿತ್ರದ ಜಾಗತಿಕ ವ್ಯಾಪ್ತಿಯನ್ನು ತೋರಿಸುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಿನಿಮಾಗಳಿಗೆ ಸಿಕ್ಕಿರುವ ಅತಿ ದೊಡ್ಡ ವಿದೇಶಿ ವಿತರಣಾ ಒಪ್ಪಂದಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಪೈಪೋಟಿಗೆ ಬಿದ್ದ ಧುರಂಧರ್
ಟಾಕ್ಸಿಕ್ ಜೊತೆಗೆ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಕೂಡ ಪೈಪೋಟಿ ನೀಡುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರ ಕೈಚಳಕದಲ್ಲಿ ಮೂಡಿಬರುತ್ತಿರುವ ಈ ಸೀಕ್ವೆಲ್ ಕೂಡ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಲವಾದ ನಿರೀಕ್ಷೆ ಹೊಂದಿದೆ. ಮಾರ್ಚ್ 19ರಂದೇ ಎರಡೂ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಬಾಕ್ಸ್‌ಆಫೀಸ್‌ನಲ್ಲಿ ಪೈಪೋಟಿ ಫಿಕ್ಸ್ ಎನ್ನಲಾಗಿದೆ.
ಚಿತ್ರರಂಗದ ವಿಶ್ಲೇಷಕರ ಪ್ರಕಾರ IMDbನಲ್ಲಿ ಕಾಣುತ್ತಿರುವ ಮುನ್ನಡೆ, ಭಾರೀ ವಿತರಣಾ ಒಪ್ಪಂದಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಉಂಟಾಗಿರುವ ಚರ್ಚೆ ಎಲ್ಲವನ್ನೂ ನೋಡಿದರೆ 'ಟಾಕ್ಸಿಕ್' 2026ರ ಅತಿದೊಡ್ಡ ಓಪನರ್‌ಗಳಲ್ಲಿ ಒಂದಾಗುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೆ 2026ರ ಮಾರ್ಚ್‌ನಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಯಾವ ಚಿತ್ರ ಮೇಲುಗೈ ಸಾಧಿಸಲಿದೆ ಎಂಬ ಕುತೂಹಲ ಈಗಲೇ ತಾರಕಕ್ಕೇರಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications