Bigg Boss: ಕುಟುಂಬಸ್ಥರ ಮಾತು ಕೇಳಿದ್ದರೆ ಭವ್ಯಾ ಹೊರ ಬರುತ್ತಿರಲಿಲ್ಲ- ಹೀಗಂದಿದ್ದು ಯಾರು?

ಕಳೆದ ದಿನ ಗ್ರ್ಯಾಂಡ್ ಫಿನಾಲೆಯಲ್ಲಿ ಉಳಿದ ಸ್ಪರ್ಧಿಗಳಿಗಿಂತ ಅತ್ಯಂತ ಕಡಿಮೆ ಓಟ್ ಪಡೆದಿದ್ದರಿಂದ ಭವ್ಯಾ ಗೌಡ ಔಟ್ ಆಗಿದ್ದಾರೆ. ಆರಂಭದಿಂದಲೂ ತುಂಬಾ ಚೆನ್ನಾಗಿ ಆಡಿಕೊಂಡು ಬಂದಿದ್ದ ಭವ್ಯಾ ಕೊನೆ ಕ್ಷಣದಲ್ಲಿ ಹೊರಬರಬೇಕಾಯಿತು. ಇದಕ್ಕೆ ಕಾರಣ ಏನು? ಭವ್ಯಾ ಎಲ್ಲಿ ಎಡವಿದರು? ಅವರು ವಿನ್ನರ್‌ ರೇಸ್‌ನಲ್ಲಿ ಇರಲು ಯಾಕೆ ಸಾಧ್ಯವಾಗಲಿಲ್ಲ? ಕುಟುಂಬಸ್ಥರ ಮಾತು ಕೇಳಿದ್ದರೆ ಭವ್ಯಾ ವಿನ್ನರ್‌ ರೇಸ್‌ನಲ್ಲಿ ಇರ್ತಾಯಿದ್ರಾ? ಇಂತಹ ಪ್ರಶ್ನೆಗಳು ಹುಟ್ಟುಕೊಂಡಿವೆ.

ಹೌದು.... ಬಿಗ್ ಬಾಸ್ ಮನೆಯಲ್ಲಿ ಪ್ರಸ್ತುತ ಹನುಮಂತ, ತ್ರಿವಿಕ್ರಮ್, ಮಂಜು, ಮೋಕ್ಷಿತಾ ಹಾಗೂ ರಜತ್ ಉಳಿದುಕೊಂಡಿದ್ದಾರೆ. ರಜತ್ ವೈಲ್ಡ್ ಕಾರ್ಡ್ ಸ್ಪರ್ಧಿ. ಹಾಗೆ ನೋಡಿದರೆ ಭವ್ಯಾಗಿಂತಲು ಮೊದಲು ರಜತ್ ಹೊರಬರಬೇಕಿತ್ತು. ಇನ್ನೂ ಮೋಕ್ಷಿತಾ ಮೊದಲಿನಿಂದಲೂ ಸ್ನೇಹಿತರ ಗುಂಪಿನಲ್ಲಿ ಆಡಿಕೊಂಡು ಬಂದವರು. ಮೋಕ್ಷಿತಾ ಅವರಿಗೆ ಹೋಲಿಸಿದರೆ ಭವ್ಯಾ ಅದೆಷ್ಟೋ ಬೆಸ್ಟ್ ಎನ್ನುತ್ತಾರೆ ಭವ್ಯಾ ಕುಟುಂಬಸ್ಥರು. ಹಾಗಾದರೆ ಭವ್ಯಾ ಟಾಪ್ 6 ಆಗಿ ಹೊರಬಂದಿದ್ದು ಯಾಕೆ? ಇನ್ನೂ ಇರಬಹುದಿತ್ತಲ್ವಾ?ಈ ಪ್ರಶ್ನೆಗೆ ಕುಟುಂಬಸ್ಥರ ಮನದಲ್ಲಿ ಬರುವುದು ಒಂದೇ ಉತ್ತರ.

if bhavya gowda listened to her family wouldn t have come out- who said this

ಭವ್ಯಾ ಎಡವಿದ್ದೆಲ್ಲಿ?

ಭವ್ಯಾ ಗೌಡ ಅವರನ್ನು ಕಾಣಲು ಹಿಂದೊಮ್ಮೆ ಅವರ ಸಹೋದರಿ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಆಗ ಸಹೋದರಿ ಭವ್ಯಾ ಅವರಿಗೆ ಒಂದು ಕಿವಿ ಮಾತು ಹೇಳಿದ್ದರು. 'ನೀನು ಅದ್ಭುತವಾಗಿ ಆಟ ಆಡುತಿದಿಯಾ. ಆದರೆ ತ್ರಿವಿಕ್ರಮ್ ಸಹವಾಸ ಬಿಟ್ಟುಬಿಡು. ಇದರಿಂದ ನೀನು ಟಾಪ್ ಅಲ್ಲಿ ಇರೋದು ಗ್ಯಾರಂಟಿ' ಎನ್ನುವ ಸಲಹೆ ನೀಡಿದ್ದರು. ಆದರೆ ಭವ್ಯಾ ಸಹೋದರಿ ಮಾತನ್ನು ಆಲಿಸಲಿಲ್ಲ.

ಪೋಷಕರ ಮಾತನ್ನು ಕೇಳದೇ ತ್ರಿವಿಕ್ರಮ್ ಜೊತೆಗೆ ಸ್ನೇಹವನ್ನು ಮುಂದುವರೆಸಿದರು ಭವ್ಯಾ. ಆ ಸ್ನೇಹ ಪ್ರೀತಿಯಾಗಿ ತಿರುಗಿದೆ. ಹೊರ ಬಂದ ಮೇಲೆ ಅವರಿಬ್ಬರು ಹೇಗೇ ಇರಲಿ. ಆದರೆ ಈಗ ಪ್ರಶ್ನೆ ಅದಲ್ಲ. ಇಬ್ಬರು ಆಟ ಆಡಲು ಹೋದಾಗ ಅದಕ್ಕಷ್ಟೇ ಗಮನ ಕೊಡಬೇಕಿತ್ತು. ಆದರೆ ಭವ್ಯಾ ತ್ರಿವಿಕ್ರಮ್ ಜೊತೆ ಹೆಚ್ಚು ಸಮಯ ಕಳೆಯುತ್ತಾ ತಾವು ಬಿಗ್‌ಬಾಸ್‌ ಮನೆಗೆ ಬಂದ ಉದ್ದೇಶವನ್ನೇ ಮರೆತುಬಿಟ್ಟರು. ಹೀಗಾಗಿ ಬಿಗ್‌ಬಾಸ್‌ ವೀಕ್ಷಕರಿಗೂ ಇವರು ಆಟ ಆಡಲು ಬಂದಿದ್ದಾರಾ ಅಥವಾ ಪ್ರೀತಿ ಮಾಡಲು ಬಂದಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟಿ ಮತಗಳು ಕಡಿಮೆ ಆದವು. ಒಂದು ವೇಳೆ ಭವ್ಯಾ ಪೋಷಕರ ಮಾತು ಕೇಳಿ ತ್ರಿವಿಕ್ರಮ್ ಅವರಿಂದ ಅಂತರ ಕಾಯ್ದುಕೊಂಡಿದ್ದರೆ ವಿನ್ನರ ರೇಸ್‌ನಲ್ಲಿ ಭವ್ಯಾ ಇರೋದು ಮಾತ್ರ ಪಕ್ಕಾ ಇತ್ತು.

ಮೋಕ್ಷಿತಾ- ರಜತ್ ಉಳಿದುಕೊಂಡರು ಹೇಗೆ?

ರಜತ್ ಅವರದ್ದು ಒರಟು ಮಾತು ಇರಬಹುದು. ಆದರೆ ಅದನ್ನು ಅವರು ತಿದ್ದಿಕೊಂಡರು. ಮೋಕ್ಷಿತಾ ಅವರು ಮಂಜು ಹಾಗೂ ಗೌತಮಿ ಅವರೊಂದಿಗೆ ಅಂತರ ಕಾಯ್ದುಕೊಂಡು ಎಲ್ಲರ ಸಲಹೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದರು. ಇದರಿಂದ ಅವರು ಬಿಗ್‌ಬಾಸ್ ಮನೆಯಲ್ಲಿ ಇನ್ನೂ ಕೂಡ ಉಳಿದುಕೊಂಡಿದ್ದಾರೆ.

ಆದರೆ ಇಂದಿನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಜತ್, ಮೋಕ್ಷಿತಾ ಇಲ್ಲವೇ ಮಂಜು ಹೊರ ಬರಬಹುದು ಎನ್ನಲಾಗುತ್ತಿದೆ. ಇಂದಿನ ಸಂಚಿಕೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಇಂದಿನ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು ಹಾಗೂ ರನ್ನರ್ ಯಾರು ಎನ್ನುವುದು ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+