Darshan Thoogudeepa: ದರ್ಶನ್‌ಗೆ ಜಾಮೀನು ಸಿಕ್ಕರೆ ಹೇಗಿರಲಿದೆ ನಟನ ಜೀವನ!
ಬೆಂಗಳೂರು, ಸೆಪ್ಟಂಬರ್ 22: ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮೊದಲ ಬಾರಿಗೆ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಇದೀಗ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ನಾಳೆ ಸೋಮವಾರ (ಸೆ.23) ರಂದು ವಿಚಾರಣೆಗೆ ಬರಲಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ 17 ಮಂದಿ ಸೆರೆವಾಸದಲ್ಲಿದ್ದಾರೆ. ಈ ಪೈಕಿ ನಟ ದರ್ಶನ್ ಜಾಮೀನು ಮನವಿ, ವಿಚಾರಣೆ ಕುರಿತ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಜನರಲ್ಲಿ ಅದರಲ್ಲೂ ನಟನ ಅಭಿಮಾನಿಗಳಲ್ಲಿ ಹೆಚ್ಚು ಕೂತುಹಲ ಮೂಡಿಸಿದೆ.

ಡಿ ಬಾಸ್ ಜೈಲಿನಿಂದ ರಿಲೀಸ್ ಆಗಬೇಕು ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಜಾಮೀನು ಸಿಗದಿದ್ದರೆ ಮತ್ತೆ ಜೈಲೆ ಗತಿಯಾಗಲಿದೆ. ಒಂದು ವೇಳೆ ಸಿಕ್ಕರೆ ಹೊರ ಬರಲಿರುವ ನಟ ದರ್ಶನ್ ಏನೆಲ್ಲ ಮಾಡಬಹುದು. ನಡವಳಿಕೆಯಲ್ಲಿ ಬದಲಾವಣೆ ಆಗಲಿದೆಯೇ?, ಮರಳಿ ಗತ್ತಿನಲ್ಲಿ ತಿರುಗಬಹುದೇ? ಒಂದಷ್ಟು ಬುದ್ಧಿವಂತಿಕೆಯಿಂದ ಹೊಸ ಜೀವನ ಆರಂಭಿಸಬಹುದೆ? ಹೀಗೆ ಅನೇಕ ಪ್ರಶ್ನೆಗಳು ಎಲ್ಲರಲ್ಲಿ ಮೂಡಿವೆ.
ಕುಟುಂಬದ ಜೊತೆ ನಟ ದರ್ಶನ್...!
ಒಂದು ವೇಳೆ ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕು ಹೊರ ಬಂದರೆ ಮೊದಲು ದರ್ಶನ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಬಹದು ಎನ್ನಲಾಗಿದೆ. ಮನೆಯವರ ಮಾತು ಧಿಕ್ಕರಿಸಿ ನಡೆದಿದ್ದ ನಟಿಗೆ ಜೈಲಿನಲ್ಲಿ ಒಂದಷ್ಟು ಪಶ್ಚಾತಾಪವಾಗಿದ್ದರೆ, ಮೊದಲು ಕುಟುಂಬಸ್ಥರೊಂದಿಗೆ ಕೂತು ಮಾತನಾಡಿ, ತನ್ನಿಂದ ಆದ ತಪ್ಪಿಗೆ, ಅಗೌರವಕ್ಕೆ ಕ್ಷಮೆ ಕೇಳಬಹುದು. ದರ್ಶನ್‌ನಿಂದ ದೂರ ವಿರುದ್ಧ ತಾಯಿಯನ್ನು ತಬ್ಬಿ ಕಣ್ಣೀರಡಬಹುದು.
ಅಭಿಮಾನಿಗಳಿಗೆ ಸಂದೇಶ ನೀಡಬಹುದು
ನಟ ದರ್ಶನ್ ಜೈಲಿನಿಂದ ಬಂದ ಬಳಿಕ ಬಾಸ್.. ಬಾಸ್.. ಎಂದು ಜೈಕಾರ ಹಾಕುವ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಖುದ್ದು ಕೃತಜ್ಞತೆ ಸಲ್ಲಿಸಬಹುದು. ನಿಮ್ಮ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ ಮುಂದೆ, ಹೀಗಾಗದಂತೆ ಬದುಕುವೆ, ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ ಎಂದು ಈ ಹಿಂದಿನಂತೆ ಅಭಿಮಾನಿಗಳಿಗೆ, ರಾಜ್ಯ ಜನರಿಗೆ ಕೇಳಬಹುದು. 2011ರಲ್ಲಿ ಪತ್ನಿ ಮೇಲಿನ ಹಲ್ಲೆ ವಿಚಾರವಾಗಿ ಜೈಲಿಗೆ ಹೋಗಿ ಬಂದ ದಾಸ ದರ್ಶನ್ ಇದೇ ರೀತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಆದರೆ ಈ ಬಾರಿ ಸುದ್ದಿಗೋಷ್ಠಿ ಮಾಡುವ ಸಾಧ್ಯತೆ ಕಡಿಮೆ ಇದೆ.

ಇಷ್ಟದ ಊಟಗಳನ್ನೆಲ್ಲ ಸವಿಯಬಹುದು
ನಟ ದರ್ಶನ್ ಜೈಲು ಸೇರಿದಾಗಿನಿಂದ ಮನೆ ಊಟದ ಭಾಗ್ಯ ಸಿಕಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ಸಹ ವಜಾಗೊಂಡಿತ್ತು. ದರ್ಶನ್ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಆಗಿತ್ತು ಅಂತಲೂ ಹೇಳಲಾಗಿದೆ. ಇದರ ಬೆನ್ನಲ್ಲೆ ನಟ ದರ್ಶನ್ ಗೆ ಹೊರಗಿನಿಂದ ಊಟ ಮಾತ್ರವಲ್ಲದೇ, ಸಿಗರೇಟು, ಟೀ ಸೇರಿದಂತೆ ಎಲ್ಲ ರಾಜಾತಿಥ್ಯ ಜೈಲಿನಲ್ಲೇ ಸಿಗುತ್ತಿದೆ ಎಂಬ ತಿಳಿಸುವ ಫೋಟೋ ವೈರಲ್ ಆಯಿತು..
ಹೀಗಾಗಿ ಮನೆ ಊಟ ದರ್ಶನ್‌ಗೆ ಅಪರೂಪವಾಯಿತು. ಆದ್ದರಿಂದ ಜೈಲಿನಿಂದ ಬಂದ ಕೂಡಲೇ ಬೇಕಾದ ಭಕ್ಷ್ಯ ಭೋಜನಗಳನ್ನು, ಬಿರಿಯಾನಿ ಪ್ರಿಯ ನಟ ದರ್ಶನ್ ಎಲ್ಲ ವಿಧದ ಬಿರಿಯಾನಿ ತಿನ್ನಬಹುದು. ಮನೆ ಊಟ ಸವಿಯಬಹುದು. ಕುಟುಂಬದೊಂದಿಗೆ ಸಾಮಾನ್ಯರಂತೆ ಬೆರೆಯಬಹುದು..
ಕೋಟಿ ಕೋಟಿ ಹಣ ಮರಳಿಸಬಹುದು
ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರುವ ಮೊದಲು ಕೆಲವು ಸಿನಿಮಾ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದರು. ಸುಮಾರು ನಾಲ್ಕೈದು ಸಿನಿಮಾಗಳಿಗೆ ಕಾಲ್ ಶೀಟ್ ಕೊಟ್ಟಿದ್ದಲ್ಲದೇ ಕೋಟಿ ಕೋಟಿ ಹಣ ಮುಂಗಡ ಪಡೆದಿದ್ದರು ಎನ್ನಲಾಗಿದೆ. ಸದ್ಯ ಈ ಬಂಧನ ಘಟನೆಯಿಂದಾಗಿ ಹೊಸ ಸಿನಿಮಾ ಆರಂಭವಾಗುವುದು ತಡವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ತನ್ನನ್ನೆ ನಂಬಿದ ನಿರ್ಮಾಪಕರಿಗೆ ಮುಂಗಡ ಹಣ ವಾಪಾಸ್ ಕೊಡಬಹದು.
ಅರ್ಧಕ್ಕೆ ನಿಂತ ಡೆವಿಲ್ ಚಿತ್ರದಲ್ಲಿ ದರ್ಶನ್?
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನ ದಿನ ಮೈಸೂರಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಇದೆ. ಜಾಮೀನು ಪಡೆದ ಬಳಿಕ ಅರ್ಧಕ್ಕೆ ನಿಂತ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು ಮತ್ತೊಮ್ಮೆ 'ಸಾರಥಿ'ಯಂತೆ ಇತಿಹಾಸ ಸೃಷ್ಟಿಸಬೇಕು ಎಂದು ಫ್ಯಾನ್ ಕಾಯುತ್ತಿದ್ದಾರೆ. ಅವರ ಇಷ್ಟದಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡು ಮತ್ತೊಂದು ಕಡೆ ಪ್ರಕರಣದ ವಿಚಾರಣೆಗೆ ಹಾಜರಾಬಹುದು ಎಂದು ಊಹಿಸಲಾಗಿದೆ.
ಜಾಮೀನು ಬಳಿಕ ಸಣ್ಣ ಬ್ರೇಕ್
ನಟ ದರ್ಶನ್ ಹಿಂದೆ ಪತ್ನಿ ಮೇಲೆ ಹಲ್ಲೆ ಮಾಡಿದ್ದ 2011ರಲ್ಲಿನ ಪರಿಸ್ಥಿತಿ ಬೇರೆ ಇತ್ತು. ಅದು ದರ್ಶನ್ ದ ಮೊದಲ ಕಹಿ ಘಟನೆ. ನಂತರ ಸಾರಥಿ ಸಿನಿಮಾ ಹಿಟ್ ಆಯಿತು. ಆದರೆ ಈಗ ಎಲ್ಲವು ಬದಲಾಗಿದೆ. ದರ್ಶನ್ ಮೇಲೆ ಸಾಲು ಸಾಲು ಆರೋಪಗಳಿವೆ. ಪ್ರತ್ಯೇಕ ಪ್ರಕರಣಗಳು ದರ್ಶನ್ ಮೇಲೆ ದಾಖಲಾಗಿವೆ. ಹೀಗಾಗಿ ಕೆಲವು ಕಾಲ ಚಿತ್ರೀಕರಣ ಬಿಟ್ಟು ವೈಯಕ್ತಿಕ ಜೀವನ ಜೀವನ ಸುಧಾರಿಸಿಕೊಳ್ಳಲು ದರ್ಶನ್ ಸಣ್ಣದೊಂದು ಬ್ರೇಕ್ ಪಡೆಯಬಹುದು.
ಬಂಧನ ನಂತರದ ಅಪ್ಡೇಟ್ ನೋಡಿ, ಕೌಂಟರ್ ಕೊಡ್ತಾರಾ?
ನಟ ದರ್ಶನ್ ಬಂಧನ ಬಳಿಕ ಫ್ಯಾನ್ಸ್ ನಡೆದಕೊಂಡ ರೀತಿ, ಬೆಂಬಲ, ದರ್ಶನ್ ಪರ ವಿರೋಧ ಹೇಳಿಕೆ, ಸಂಕಷ್ಟ ಕಾಲದಲ್ಲಿ ತನ್ನ ಪರ ನಿಂತವರು ಯಾರು? ಹೀಗೆ ಕಾನೂನು ಬಗೆಗಿನ ಮಾಧ್ಯಮ ಚರ್ಚೆಗಳು ಒಟ್ಟಾರೆ ಏನೆಲ್ಲ ಬೆಳವಣಿಗೆ ಆಯಿತು ಎಂಬುದು ಕಳೆದ ಮೂರು ತಿಂಗಳಲ್ಲಿ ನಟ ದರ್ಶನ್ಗೆ ಗೊತ್ತಾಗಿಲ್ಲ. ಜಾಮೀನು ಸಿಕ್ಕ ಕೂಡಲೇ ಇದೆಲ್ಲವನ್ನು ಒಂದು ಬಾರಿ ಕೂತು ಅಪ್ಡೇಟ್ ಪಡೆದುಕೊಂಡು ಉತ್ತಮ ಜೀವನದೆಡೆಗೆ ಚಿತ್ತ ಹರಿಸಬಹುದು.
ದರ್ಶನ್‌ನಲ್ಲಿ ದೌಲತ್ತು ಕಡಿಮೆ ಆಗದಿದ್ದಲ್ಲಿ ಮಾಧ್ಯಮಗಳ ಕುರಿತು, ಅಭಿಮಾನಿಗಳ ಪರ ಒಂದಷ್ಟು ಕೌಂಟರ್ ಸಹ ಕೊಡಬಹುದು. ಇದೆಲ್ಲ ಜೀವನದ ಕಹಿ ಘಳಿಗೆ ಎಂದು ಹೇಳಿ, ಕಳೆದ ಬಾರಿಯಂತೆ, ಏನು ಆಗಿಯೇ ಇಲ್ಲ ಎಂಬಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬಹುದು. ಸದ್ಯ ಜಾಮೀನು ಸಿಗಲಿದೆಯೇ ಇಲ್ಲವೇ ಎಂಬ ಕುತೂಹಲ ಇದೆ. ಜಾಮೀನು ಸಿಕ್ಕರೆ ದರ್ಶನ್ ಏನು ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ.












Click it and Unblock the Notifications