Meghana Raj: ಮೇಘನಾ ರಾಜ್ ವಯಸ್ಸೆಷ್ಟು, ಯೂಟ್ಯೂಬ್ ಸೇರಿ ಎಷ್ಟು ಕೋಟಿ ಆಸ್ತಿ ಇದೆ!
Meghana Raj: ನಟಿ ಮೇಘನಾ ರಾಜ್ ಅವರು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ನಟಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಇಬ್ಬರೂ ಪ್ರೀತಿ ಮಾಡಿ ಮದುವೆಯಾಗಿದ್ದರು. ಇಬ್ಬರು ಭಿನ್ನ ಸಂಪ್ರದಾಯ ಹಾಗೂ ಧರ್ಮದ ಹಿನ್ನೆಲೆಯಿಂದ ಬಂದವರು. ಆದರೂ ಇಬ್ಬರೂ ಮನೆಯವರನ್ನೆಲ್ಲರನ್ನೂ ಒಪ್ಪಿಸಿ ಪ್ರೇಮ ವಿವಾಹವಾಗಿದ್ದರು. ಆದರೆ, ವಿಧಿ ಎನ್ನುವಂತೆ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದಾಗಲೇ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಇಬ್ಬರೂ ಸುದೀರ್ಘ 10 ವರ್ಷಗಳಿಂದ ಪ್ರೀತಿಸಿದ್ದರು. ಇದೀಗ ಚಿರಂಜೀವಿ ಅವರು ಸಾವನ್ನಪ್ಪಿದ ನಂತರ ಮೇಘಾ ಅವರು ಈಗಷ್ಟೇ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಮೇಘನಾ ರಾಜ್ ಅವರ ವಯಸ್ಸೆಷ್ಟು ಹಾಗೂ ಅವರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಎನ್ನುವ ಡೀಟೆಲ್ಸ್ ಇಲ್ಲಿದೆ.
ಮೇಘನಾರಾಜ್ ಅವರು ಬಹಭಾಷೆ ನಟಿಯಾಗಿ ಅಭಿನಯಿಸಿದ್ದಾರೆ. ಸಿನಿಮಾ ರಂಗದಲ್ಲಿ ತಮ್ಮದೇ ಖ್ಯಾತಿ ಗಳಿಸಿರುವ ಅವರು ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಇನ್ನು ಮೇಘನಾ ಅವರು ಕನ್ನಡದಲ್ಲಿ ಮಾತ್ರವಲ್ಲಿ ಮಲಯಾಳಂ ಹಾಗೂ ತಮಿಳು ಮೂವಿಗಳಲ್ಲೂ ಮಿಂಚಿದ್ದಾರೆ. ಮಲಯಾಳಂ ಭಾಷೆಯಲ್ಲಿ ಅವರು ಹವಾ ಕ್ರಿಯೇಟ್ ಮಾಡಿರುವುದು ಇದೆ. ಅಲ್ಲಿನ ಪ್ರೇಕ್ಷಕರಿಗೆ ಮೇಘಾ ಚಿರಪರಿಚಿತ. ಈ ನಡುವೆ ಮೇಘನಾ ರಾಜ್ ಅವರ ಎರಡನೇಯ ಮದುವೆಯ ಬಗ್ಗೆ ಪದೇ ಪದೇ ಚರ್ಚೆಗಳು ನಡೆಯುತ್ತಿವೆ. ಆದರೆ, ಸಧ್ಯಕ್ಕೆ ಮದುವೆಯ ಬಗ್ಗೆ ಯಾವುದೇ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ ಎಂದು ಈಗಾಗಲೇ ಮೇಘನಾ ರಾಜ್ ಅವರು ಹೇಳಿದ್ದಾರೆ. ಮುಂದುವರಿದು ಮೇಘನಾ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆಯೇ ಅಂತಲೂ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರ ಬಗ್ಗೆ ಈಗಲೂ ಮೇಘನಾ ಅವರು ಭಾವನಾತ್ಮಕವಾಗಿ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಇದೆ. ಸಿಂಗಲ್ ಪೇರೆಂಟ್ಸ್ ಆಗಿ ಅವರು ಅವರು ಅವರ ಪುತ್ರ ರಾಯನ್ ಸರ್ಜಾ ಅವರನ್ನು ಮುದ್ದಾಗಿ ಬೆಳೆಸುತ್ತಿದ್ದಾರೆ. ನಟಿ ಆಗಿ ಫೇಮಸ್ ಆಗಿರುವ ಅವರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ.
ಯೂಟ್ಯೂಬ್ ಆದಾಯ: ಮೇಘನಾ ರಾಜ್ @meghana_raj ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದು ವ್ಲಾಗ್‌ಗಳು, ವೈಯಕ್ತಿಕ ಅಪ್ಡೇಟ್ಸ್ ಹಾಗೂ ಅವರ ಹಾಗೂ ಅವರ ಕುಟುಂಬದವರ ವಿಷಯಗಳನ್ನು ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ. ಈ ಚಾನೆಲ್‌ಗೆ 375,000 ಕ್ಕೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಇದ್ದಾರೆ. 153 ವೀಡಿಯೊಗಳನ್ನು ಮೇಘನಾರಾಜ್ ಅವರು ಹಂಚಿಕೊಂಡಿದ್ದಾರೆ. ತಮ್ಮ ದೈನಂದಿನ ಜೀವನದ ಬಗ್ಗೆ, ದಿನಚರಿ ಮತ್ತು ವಿಶೇಷ ಕಾರ್ಯಕ್ರಮದ ಸಿದ್ಧತೆಗಳನ್ನು ಹಂಚಿಕೊಳ್ಳುತ್ತಾರೆ. ಈ ಚಾನೆಲ್‌ನಿಂದಲೂ ಲಕ್ಷಾಂತರ ರೂಪಾಯಿ ಆದಾಯವಿದೆ ಎನ್ನಲಾಗಿದೆ.
ಮೇಘನಾ ರಾಜ್ ಅವರ ಹೆಸರಿನಲ್ಲಿ ಎಷ್ಟು ಕೋಟಿ ಆಸ್ತಿ ಇದೆ ಎನ್ನುವ ಚರ್ಚೆ ಈಗ ನಡೆದಿದೆ. ಅವರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪ್ರತಿಯೊಂದು ಸಿನಿಮಾಗೂ ಲಕ್ಷಾಂತರ ರೂಪಾಯಿ ಪೇಮೆಂಟ್ ತೆಗೆದುಕೊಳ್ಳುತ್ತಾರೆ. 34 ವರ್ಷದ ಮೇಘನಾ ರಾಜ್ ಅವರು ಸಿನಿಮಾ ರಂಗದಲ್ಲಿ ಮಿಂಚಿದ್ದು. ಅವರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅವರ ಬಳಿ ನಿಖರವಾಗಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಈಚೆಗೆ ಅವರು ಅದ್ಧೂರಿ ಮನೆಗೆ ಹೋದ ಮೇಲೆ ಅವರ ಬಳಿ ಕೋಟ್ಯಾಂತರ ರೂಪಾಯಿ ದುಡ್ಡಿದೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಚೆರ್ಚೆಯಾಗುತ್ತಿದೆ. ಅವರು ಯೂಟ್ಯೂಬ್‌ನ ಮೂಲಕವೂ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಮೇಘನಾ ರಾಜ್ ಮದುವೆ ಚರ್ಚೆ: ಇನ್ನು ಮೇಘನಾ ರಾಜ್ ಅವರ ಮದುವೆಗೆ ಸಂಬಂಧಿಸಿದಂತೆ ಪದೇ ಪದೇ ಚರ್ಚೆಗಳು ನಡೆದಿವೆ. ಮೇಘನಾ ರಾಜ್ ಅವರು ಚಿರು ಒಪ್ಪಿಗೆ ಕೊಟ್ಟರೆ ಎರಡನೇ ಮದುವೆ ಬಗ್ಗೆ ವಿಚಾರ ಮಾಡುತ್ತೀನಿ ಅಂತ ಹೇಳಿದ್ದರು. ಇದಾದ ಮೇಲೆ ಅವರ ಎರಡನೇ ಮದುವೆ ಬಗ್ಗೆ ಚರ್ಚೆ ನಡೆದಿದೆ.












Click it and Unblock the Notifications