Pavithra Gowda: ಇಂದು ಕೋಟಿ ಕೋಟಿ ಒಡತಿಯಾದ ಪವಿತ್ರಾ ಗೌಡ.. ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಬೆಂಗಳೂರು, ಜೂನ್. 21: ಆಪ್ತ ಸ್ನೇಹಿತನಿಂದ ತನ್ನ ಬಗ್ಗೆ ಕೆಟ್ಟದಾಗಿ ಮೆಸೇಜ್ ಹಾಕಿದವನ ಹತ್ಯೆಗೆ ಕಾರಣರಾಗಿವ ನಟಿ ಪವಿತ್ರಾ ಗೌಡ ಕೋಟಿ ಕೋಟಿಗಳ ಒಡತಿ. ತನ್ನದೆ ಸ್ವಂತ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋ ಹೊಂದಿರುವ ಅವರ ಐಷಾರಾಮಿ ಜೀವನ ಈಗ ನಾಡಿನ ಜನರ ಎದುರು ಬಹಿರಂಗಗೊಂಡಿದೆ.
ಈ ನಟಿ ಪವಿತ್ರಾ ಗೌಡ ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಮನೆ ಕೆಲಸಕ್ಕೆ ಅವರ ಬಳಿ ಸಹಾಯಕರ ದಂಡೆ ಇದೆ. ಆದರೆ, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಾಣಲು ಈಕೆ ಮಾಡಿದ್ದು ಹರಸಾಹಸ. ಜನರೇ ಕೇಳೇ ಇಲ್ಲದ ಸಿನಿಮಾಗಳಲ್ಲಿ ನಟಿಸಿರುವ ಈ ಪವಿತ್ರಾ ಗೌಡ ತಮ್ಮ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎನ್ನುವುದನ್ನು ನಿರ್ದೇಶಕರೇ ಬಹಿರಂಗ ಪಡಿಸಿದ್ದಾರೆ.

ಸಿನಿಮಾಗೆ ನಟಿ ಪವಿತ್ರಾ ಗೌಡ ಸೆಲೆಕ್ಟ್ ಆಗಿದ್ದು ಹೇಗೆ?
ಸದ್ಯ ಇಡೀ ರಾಜ್ಯದಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಪವಿತ್ರಾ ಗೌಡ ಮತ್ತು ನಟ ದರ್ಶನ್ ತೂಗುದೀಪ ಹೆಸರು. ಕನ್ನಡ ಸಿನಿರಂಗದಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿರುವ ಪವಿತ್ರಾ ಗೌಡ ಹೆಚ್ಚು ಸುದ್ದಿಯಾಗಿದ್ದು ಮಾತ್ರ ನಟ ದರ್ಶನ್ ಜೊತೆಗಿನ ಸಂಬಂಧ ಮತ್ತು ವಿಜಯಲಕ್ಷ್ಮಿ ಜೊತೆಯ ಸೋಶಿಯಲ್ ಮಿಡಿಯಾ ವಾರ್‌ಗಳಿಂದ ಮಾತ್ರ.
ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗುವ ಆಸೆ ಹೊತ್ತು ಬಂದ ಪವಿತ್ರಾ ಗೌಡ ಮೊದಲ ಸಿನಿಮಾ 'ಅಗಮ್ಯ'. ಈ ಸಿನಿಮಾದ ನಿರ್ದೇಶಕ ಉಮೇಶ್ ಅವರು ಚೊಚ್ಚಲ ಚಿತ್ರಕ್ಕೆ ಪವಿತ್ರಾ ಗೌಡ ಆಯ್ಕೆ ಆಗಿದ್ದು ಹೇಗೇ? ಅವರು ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬ ಬಗ್ಗೆ ಖಾಸಗಿ ಚಾನೆಲ್‌ಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಮಾತಾನಾಡಿದ್ದಾರೆ.

ಲಕ್ಷ ಲಕ್ಷ ಕೇಳುವವರ ಮಧ್ಯೆ ಸಾವಿರಕ್ಕೆ ಒಪ್ಪಿದ್ದರು!
ಒಂದು ದಶಕಗಳ ಬಳಿಕ ಖಾಸಗಿ ಚಾನೆಲ್‌ಗಳ ಜೊತೆಗೆ ತಮ್ಮಾನುಭವಗಳನ್ನು ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಗೌಡ, "ಆ ಸಮಯದಲ್ಲಿ ನಮ್ಮದು ಚಿಕ್ಕ ಬಜೆಟ್ ಸಿನಿಮಾ, ಬೇರೆ ಯಾವ ನಟಿಯರ ಡೇಟ್ಸ್ ಮತ್ತು ಸಂಭಾವನೆ ಮ್ಯಾಚ್ ಆಗುತ್ತಿರಲಿಲ್ಲ. ಲಕ್ಷ ಲಕ್ಷ ಅಂತ ಬೇರೆ ನಾಯಕಿಯರು ಕೇಳುವಷ್ಟು ಸಂಭಾವನೆ ಕೊಡಲು ಆಗುತ್ತಿರಲಿಲ್ಲ. ಹೀಗಾಗಿ ಐದು, ಹತ್ತು ಲಕ್ಷ ಕೇಳುವ ನಾಯಕಿಯರ ನಡುವೆ ಕೇವಲ ಇಪತ್ತು ಸಾವಿರ ಸಂಭಾವನೆ ಕೊಟ್ಟು ಪವಿತ್ರಾ ಗೌಡ ಅವರನ್ನು ಸಿನಿಮಾಗೆ ತೆಗೆದುಕೊಂಡೆವು" ಎಂದಿದ್ದಾರೆ.
ನಟಿ ಪವಿತ್ರಾ ಗೌಡ ಅವರಿಗೆ ನಟನೆ ಬರುತ್ತಿರಲಿಲ್ಲ ಎಂದಿರುವ ನಿರ್ದೇಶಕ ಉಮೇಶ್ ಮಾತನಾಡಿ ಪವಿತ್ರಾ ಗೌಡಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಟಿಯಾಗುವ ಯಾವ ಲಕ್ಷಣಗಳು ಇರಲಿಲ್ಲ. ಮುಖ ಮಾತ್ರ ಚೆನ್ನಾಗಿತ್ತು. ಅವರನ್ನು ತುಂಬಾ ಸಲಿ ಗದರಿದ್ದೆ. ಹೊಡಿಯೋಕೂ ಹೋಗಿದ್ದೆ. ಸಿನಿಮಾಗೆ ಅವರಿಗೆ ಕೊಟ್ಟ ಸಂಭಾವನೆ 20 ಸಾವಿರ ರೂಪಾಯಿ ಎಂದು ತಿಳಿಸಿದ್ದಾರೆ.
"ಸಿನಿಮಾ ಶುರುವಾಗಿ ಆರೇಳು ತಿಂಗಳಲ್ಲಿ ಅವರ ಬಳಿ ಕಾರು ಬಂತು. ಸಿನಿಮಾ ಯಶಸ್ಸು ಆಗಿರಲಿಲ್ಲ. ಇನ್ನು, ಸಿನಿಮಾ ರಂಗಕ್ಕೆ ಬಂದು ಎರಡು ವರ್ಷದಲ್ಲೇ ದೊಡ್ಡ ಮನೆ, ಕಾರು, ಹಣ ಆಸ್ತಿ ಎಲ್ಲವೂ ಬಂತು. ಅವರು ಆದಷ್ಟು ಬೇಗ ಎಲ್ಲರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಚಿತ್ರರಂಗದ ಎಲ್ಲರ ಪರಿಚಯ ಅವರಿಗಿತ್ತು. ಆದರೆ, ದರ್ಶನ್ ಮತ್ತು ಪವಿತ್ರಾ ಗೌಡಗೆ ಪರಿಚಯ ಇರುವುದು ನಮಗೆ ಮೊದಲು ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications