ಮಿಲನಾ ನಾಗರಾಜ್‌ ಮೊದಲ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ..?

ಜನರು ನಮ್ಮನ್ನು ಒಪ್ಪಿಕೊಳ್ಳುವುದು ಹಾಗೂ ಪ್ರಶಂಸಿಸುವುದಕ್ಕಿಂತ ದೊಡ್ಡ ಅವಾರ್ಡ್ ಯಾವುದೂ ಇಲ್ಲ ಎಂದು ನಾನು ನಂಬುತ್ತೇನೆ. ಸಿನಿಮಾಗಳಿಗೆ ಬರುವ ಅವಾರ್ಡ್‌ಗಳು ನಮ್ಮ ಕೆಲಸ ಶ್ರಮವನ್ನು ಪ್ರಶಂಸಿಸಿದಂತೆ. ಇದು ಖಂಡಿತಾ ಖುಷಿಯಾಗುತ್ತದೆ. ಆದರೆ ನಮಗೆ ಬರುವ ಅವಾರ್ಡ್‌ಗಳೇ ಎಲ್ಲಾ ಅಲ್ಲ. ಆ ಕ್ಷಣದ ಖುಷಿ ಅದು ಎಂದು ನಟಿ ಮಿಲನಾ ನಾಗರಾಜ್‌ ಹೇಳಿದ್ದಾರೆ.

ಅರಾಮ್ ಅರವಿಂದ ಸ್ವಾಮಿ ಚಿತ್ರದ ಪ್ರೋಮೋಷನ್‌ನ್‌ ಹಿನ್ನೆಲೆಯಲ್ಲಿ ರ್ಯಾಪಿಡ್‌ ರಶ್ಮಿ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಹಣದ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಒಂದು ಹಂತಕ್ಕೆ ದುಡ್ಡು ಮಾಡುವವರೆಗೂ ದುಡ್ಡು ತುಂಬಾ ಮುಖ್ಯ ಅನಿಸುತ್ತದೆ. ದುಡ್ಡು ಎಲ್ಲವನ್ನೂ ತಂದುಕೊಡುತ್ತದೆ ಅನಿಸುತ್ತದೆ. ದುಡ್ಡೇ ಎಲ್ಲಾ ಅಂತಾ ಬಹುಶಃ ದುಡ್ಡು ಮಾಡುವವರೆಗೂ ಅನಿಸುತ್ತದೆ. ಅದು ಒಂದು ಹಂತಕ್ಕೆ ಬಂದಾಗ ದುಡ್ಡೇ ಎಲ್ಲಾ ಅಲ್ಲ ಅಂತಾನೂ ಅನಿಸುತ್ತದೆ ಎಂದರು.

How Much Did Actress Milana Nagaraj Get Paid For Her First Movie

ಮುಂಚೆ ಹೇಗೆ ನಾನು ಕೃಷ್ಣ ಕೆಲಸ ಮಾಡುತ್ತಿದ್ದೇವೋ..ಈಗಲೂ ಹಾಗೇ ಕೆಲಸ ಮಾಡುತ್ತಿದ್ದೇವೆ. ಹಣದಿಂದ ನಮ್ಮ ಕೆಲಸ ಏನೂ ಬದಲಾವಣೆ ಆಗಿಲ್ಲ. ದುಡ್ಡು ನಮಗೆ ಒಂದು ಹಂತಕ್ಕೆ ಆರಾಮಕೊಟ್ಟಿದೆ ನಮಗೆ. ಆದರೆ ದುಡ್ಡು ಎಲ್ಲವನ್ನೂ ಕೊಡುತ್ತದೆ ಅಂತಾ ನಾನು ನಂಬಲ್ಲ ಎಂದ ಮಿಲನಾ, 2013ರಲ್ಲಿ ನನ್ನ ಮೊದಲ ಸಿನಿಮಾಗೆ ನಾನು ಮೂರು ಲಕ್ಷ ಸಂಭಾವನೆ ಪಡೆದಿದ್ದೆ ಎಂದು ತಮ್ಮ ಮೊದಲ ಸಂಬಳದ ಸಿಕ್ರೇಟ್‌ಅನ್ನು ರಿವೀಲ್‌ ಮಾಡಿದ್ದಾರೆ.

ಯಾವುದೇ ಕ್ಷೇತ್ರದಲ್ಲಿ ಒಂದು ಗೆಲುವು ಅಂತಾ ಸಿಕ್ಕಮೇಲೆ ಅದಕ್ಕೂ ಮೀರಿದ ಗೆಲವು ಸಿಗುವವರೆಗೂ ಜನ ಅದನ್ನೇ ಮಾತನಾಡುತ್ತಾರೆ. ಆ ಸಿನಿಮಾ ನಮಗೆ ಎಷ್ಟು ಖುಷಿ ಕೊಟ್ಟಿದೆ ಅದಕ್ಕೆ ನಾವು ಗೌರವ ಕೊಡಬೇಕು. ಆದರೆ ಸ್ಪಲ್ಪ ವರ್ಷ ಆದ ಮೇಲೂ ಜನ ಅದನ್ನೇ ಹೇಳುತ್ತಾರೆ ಅಂದರೆ ನೀವು ಇನ್ನೂ ಚೆನ್ನಾಗಿ ಕೆಲಸ ಮಾಡಬೇಕು ಅಂತಾ. ನೀವು ಇನ್ನೂ ಅಲ್ಲೇ ಇದ್ದೀರಾ ಅಂತಾ. ಜನ ಯಾಕೆ ಇನ್ನೂ ನಿಮ್ಮ ಹಳೆ ಕೆಲಸವನ್ನೇ ಹೇಳುತ್ತಾರೆ ಅಂದರೆ ನೀವು ಅದನ್ನೂ ಮೀರಿದ ಕೆಲಸ ಮಾಡುಬೇಕು ಅಂತಾ ಅರ್ಥ ಎಂದು ಹೇಳಿದರು.

ಇನ್ನು ತಮ್ಮ ಜೀವನದಲ್ಲಿ ಪ್ರಾಮುಖ್ಯತೆಗಳ ಬಗ್ಗೆ ಮಾತನಾಡಿದ ಮಿಲನಾ, ಜೀವನದಲ್ಲಿ ಪ್ರಾಮುಖ್ಯತೆಗಳು ಎನ್ನುವುದು ಇರುತ್ತದೆ. ನನಗೆ ಎಲ್ಲವೂ ಮುಖ್ಯವೇ. ಏನಾದರೂ ಒಂದು ಕೆಲಸ ಮಾಡಿದರೆ ಅದಕ್ಕೆ ನೂರಕ್ಕೆ ನೂರು ಶ್ರದ್ಧೆ ಸಮಯ ಎಲ್ಲವನ್ನೂ ಕೊಡಬೇಕು ಎಂದು ನಾನು ನಂಬುತ್ತೇನೆ. ತಾಯ್ತನವನ್ನು ನಾನು ಎಷ್ಟರ ಮಟ್ಟಿಗೆ ಅನುಭವಿಸುತ್ತಿದ್ದೇನೆ, ಅದೇ ರೀತಿ ನನ್ನ ಸಿನಿಮಾ ಕೂಡ ಸಮಾನವಾಗಿರುತ್ತದೆ. ಇದು ಎಷ್ಟರ ಮಟ್ಟಿಗೆ ಸರಿ ಅನಿಸುತ್ತದೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+