Darshan Thoogudeepa: ಮ್ಯಾಜಿಸ್ಟ್ರೇಟ್ ಕೋರ್ಟ್ ಅಲ್ಲಿ ತೀರ್ಮಾನ ಆಗೋ ತನಕ ದರ್ಶನ್‌ಗೆ ಜೈಲೂಟವೇ ಗತಿ!

ಬೆಂಗಳೂರು ಜುಲೈ 19: ಮನೆಯೂಟ ಬೇಕು ಎಂದು ದರ್ಶನ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ದಾಸನಿಗೆ ಜೈಲೂಟ ಫಿಕ್ಸ್ ಆಗಿದೆ.

ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ತೂಗುದೀಪ್ ಊಟ, ಹಾಸಿಗೆ, ಪುಸ್ತಕ ಕೋರಿ ಹೈಕೋರ್ಟ್್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಜಡ್ಜ್ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲಿವರೆಗೂ ಜೈಲು ಊಟ ನೀಡಬೇಕು ಎಂದು ಆದೇಶಿಸಿದ್ದಾರೆ.

High Court rejected home meal for Darshan Thoogudeepa

ಹೈಕೋರ್ಟ್ ನ ನ್ಯಾಯಾಧೀಶರಾದ ಕೃಷ್ಣ ಕುಮಾರ್ ಏಕಸದಸ್ಯ ಪೀಠದಲ್ಲಿ ಈ ಬಗ್ಗೆ ವಾದವಿವಾದಗಳು ಇಂದು ನಡೆದವು. ಈ ವೇಳೆ ನಟ ದರ್ಶನ್ ಪರ ವಕೀಲ ಫಣೀಂದ್ರ ವಾದ ಮಂಡನೆ ಮಾಡಿದರು. ದರ್ಶನ್‌ಗೆ ಮನೆ ಊಟ ನೀಡಬೇಕು ಎಂದು ಫಣೀಂದ್ರ ವಾದಿಸಿದರೆ, ಯಾವುದೇ ಕಾರಣಕ್ಕೂ ಸೌಲಭ್ಯ ಕೊಡಬಾರದು ಎಂದು ಸರ್ಕಾರಿ ಪರ ವಕೀಲರು ವಾದಿಸಿದ್ದಾರೆ.

ವಾದ ವಿವಾದ ಆಲಿಸಿದ ಕೃಷ್ಣ ಕುಮಾರ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಹೀಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅಲ್ಲಿ ತೀರ್ಮಾನ ಆಗೋ ತನಕ ದರ್ಶನ್‌ಗೆ ಜೈಲೂಟವೇ ಅನಿವಾರ್ಯವಾಗಿದೆ.

ದರ್ಶನ್ ಪರ ವಕೀಲ ಫಣೀಂದ್ರ ವಾದವೇನು?

ಊಟ, ಪುಸ್ತಕ, ಹಾಸಿಗೆ ಒದಗಿಸುವಂತೆ ಮನವಿ ಮಾಡಿದ ವಕೀಲ ಫಣೀಂದ್ರ, ಕೊಲೆ ಮಾಡಿ ಆರೋಪಿ ಜೈಲಿಗೆ ಬಂದ್ರೂ, ಸೌಲಭ್ಯ ಕಲ್ಪಿಸಬಹುದಾಗಿದೆ ಎಂದಿದ್ದಾರೆ. ಇದೇ ವೇಳೆ ಕೈದಿಗಳಿಗೆ ಮನೆ ಊಟ ನೀಡುವ ಯಾವುದಾದರು ಆದೇಶ ಇದೆಯೇ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ಫಣೀಂದ್ರ ಅವರು, ಬಾಂಬೆ ಹೈ ಕೋರ್ಟ್ ಆದೇಶ ಪ್ರಸ್ತಾಪಿಸಿದರು. ಹಸ್ಕರ್ ಯೂಸಫ್ ವರ್ಸಸ್ ಮುಂಬೈ ಸರ್ಕಾರ ಕೇಸ್‌ನಲ್ಲಿ ವಿಚಾರಣಾ ಖೈದಿಗೆ ಊಟ, ಹಾಸಿಗೆ, ಬಟ್ಟೆ ಕೊಡುವಂತೆ ಆದೇಶಿಸಿದೆ. ಮ್ಯಾಜಿಸ್ಟ್ರೇಟ್ ಗೆ ಸೌಲಭ್ಯ ಕೊಡುವಂತೆ ಆದೇಶಿಸುವ ಅಧಿಕಾರ ಇದೆ. ನಟ ದರ್ಶನ್ ಗೆ ಎಲ್ಲಾ ಸೌಲಭ್ಯ ಪಡೆಯಲು ಸಂವಿಧಾನ ಬದ್ಧ ಹಕ್ಕಿದೆ. ನಟ ದರ್ಶನ್ ಊಟ ಕೊಡವುದು ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ನಟ ದರ್ಶನ್ ಪರ ವಕೀಲ ಫಣೀಂದ್ರ ಜಡ್ಜ್ ಮುಂದೆ ವಾದಿಸಿದರು.

High Court rejected home meal for Darshan Thoogudeepa

ಪ್ರತಿಯೊಬ್ಬ ಅಂಡರ್ ಟ್ರಾಯಲ್ ಕೈದಿಗೆ ಮನೆ ಆಹಾರ ಪಡೆಯುವ ಹಕ್ಕಿದೆ ಎಂಬುದಕ್ಜೆ ಸಂಬಂಧಿಸಿದ ಯಾವುದಾದರೂ ಹೈಕೋರ್ಟ್‌ನ ಆದೇಶ ತೋರಿಸಿ ಎಂದು ಜಡ್ಜ್ ಕೇಳಿದರು. ಆಗ ಹಿರಿಯ ವಕೀಲ ಫಣೀಂದ್ರ ಅನೇಕ ಜಡ್ಜ್ಮೆಂಟ್ವಗಳು ಇವೆ ಎಂದರು. ಆಶಾರಾಮ್ ಬಾಪು ಪ್ರಕರಣದ ಬಗ್ಗೆ ದರ್ಶನ್ ಪರ ವಕೀಲರ ಉಲ್ಲೇಖ ಮಾಡಿದರು. ನಿಗದಿತ ಸಮಯದಲ್ಲಿ ಖೈದಿ, ತನ್ನ ಖರ್ಚಿನಲ್ಲಿ ಊಟ ಹೊರಗಿನಿಂದ ಪಡೆಯಬಹುದು. ಇನ್ನೂ ಊಟವನ್ನು ಸ್ನೇಹಿತರು, ಕುಟುಂಬಸ್ಥೆ ಬಳಿ ಪಡೆಯಲು ಎಸ್ಪಿ ಜೈಲ್, ಜೈಲ್ ಐಜಿಪಿ ಚೆಕ್ ಮಾಡಬೇಕು ಅಂದಿದೆ ಎಂದು ಹೇಳಿದರು.

ಸರ್ಕಾರಿ ಪರ ವಕೀಲರ ವಾದವೇನು?

ಆದರೆ ಈ ಕೇಸ್ ನಲ್ಲಿ ಮಧ್ಯಂತರ ಆದೇಶ ಕೊಡಲು ಸಾಧ್ಯವಿಲ್ಲ. ವಿಚಾರಣಾಧಿನ ಖೈದಿಗಳ ಬಗ್ಗೆ ಸುದೀರ್ಘ ವಾದ ಕೇಳಬೇಕಿದೆ. ಈ ಸಮಯದಲ್ಲಿ ಊಟ, ಹಾಸಿಗೆ, ಪುಸ್ತಕ ನೀಡುವ ಬಗ್ಗೆ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರಿ ಪರ ವಕೀಲರು ವಾದಿಸಿದ್ದಾರೆ.

ಮೊದಲು ಅವರು ಡಯಟ್ ಪುಡ್ ಕೇಳ್ತಾರೆ. ಆನಂತರ ಸಂಪೂರ್ಣ ಮನೆ ಊಟಕ್ಕೆ ಮನವಿ‌ ಮಾಡ್ತಾ ಇದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ 5 ಸಾವಿರ ಖೈದಿಗಳು ಇದ್ದಾರೆ. ಅವರಿಗೆ ಯಾರಿಗೂ ಪುಡ್ ಪಾಯಿಸನ್ ಆಗಲ್ಲ. ನಟ ದರ್ಶನ್ ಗೆ ಮಾತ್ರ ಪುಡ್ ಪಾಯಿಸನ್ ಆಗುತ್ತಾ..? ಎಂದು ಪ್ರತಿಕ್ರಿಯೆ ನೀಡಿದ್ದಾರೆ.

High Court rejected home meal for Darshan Thoogudeepa

ನ್ಯಾಯಾಧೀಶರ ಆದೇಶವೇನು?

ಇದಕ್ಕೆ ನ್ಯಾಯಾಧೀಶರು ನಾಳೆ ನೀವು ಮ್ಯಾಜಿಸ್ಟ್ರೇಟ್ ಮುಂದೆ ಕೇಸ್ ಫೈಲ್ ಮಾಡಿ. ಪ್ರಾವಿಷನ್ಸ್ ಬಗ್ಗೆ ನೀವು ಸಲ್ಲಿಕೆ ಮಾಡಿ. ಬಳಿಕ ಅದಕ್ಕೆ ಸರ್ಕಾರ ಆಕ್ಷೇಪಣೆ ಸಲ್ಲಿಕೆ ಮಾಡಲಿ. ಮ್ಯಾಜಿಸ್ಟ್ರೇಟ್ ಕಾನೂನಿನ ಅಡಿಯಲ್ಲಿ ನಿರ್ಧಾರ ಮಾಡಲಿ. ನಾಳೆ 24 ನೇ ಎಸಿಎಂಎಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಕೆ ಮಾಡಲಿ ಎಂದು ಜಡ್ಜ್ ಸೂಚಿಸಿದ್ದಾರೆ. ವಾದ ವಿವಾದ ಆಲಿಸಿದ ಕೃಷ್ಣ ಕುಮಾರ್ ಏಕಸದಸ್ಯ ಪೀಠ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+