Get Updates
Get notified of breaking news, exclusive insights, and must-see stories!

ಕನ್ನಡ ಸಿನಿಮಾ ಲೋಕಕ್ಕೆ ಹೊಸ ಉಡುಗೊರೆ ನೀಡಿದ ‘ಹೆಬ್ಬುಲಿ ಕಟ್’... Hebbuli Cut

ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ನಟರು ಬಂದು ಹೋಗಿರುವುದೇ ಸಣ್ಣ ಸಣ್ಣ ಸಿನಿಮಾಗಳ ಮೂಲಕ. ಈ ರೀತಿ ಸಮಾಜದ ತಳಹದಿ ಮೇಲೆ ಪ್ರಭಾವ ಬೀರುದ ಸಿನಿಮಾಗಳು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೊಸ ದಿಕ್ಕು ತೋರಿಸಿದ್ದು ಉಂಟು. ಅದೇ ರೀತಿ ಹಲವು ಸಿನಿಮಾಗಳು ಆಯಾ ಕಾಲಘಟ್ಟಕ್ಕೆ ಬಂದಿದ್ದು, ಇದೀಗ ಅಂತಹದ್ದೇ ಮತ್ತೊಂದು ಸಿನಿಮಾ ಕನ್ನಡಿಗರ ಮನಸ್ಸು ಗೆಲ್ಲುತ್ತಿದೆ. ಅಲ್ಲದೆ ಕನ್ನಡ ಸಿನಿಮಾಗಳ ಲೋಕದಲ್ಲಿ ಹೊಸ ಸಂಚಲನ ಕೂಡ ಸೃಷ್ಟಿ ಮಾಡುತ್ತಾ, ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದೆ.

ಹೌದು, ಕನ್ನಡ ಸಿನಿಮಾ ಲೋಕದಲ್ಲಿ ಸಾವಿರಾರು ಸಿನಿಮಾಗಳು ಬಂದಿವೆ. ಆದರೆ ಕನ್ನಡಿಗರ ಎದೆಯಲ್ಲಿ ಉಳಿಯುವ ಸಿನಿಮಾಗಳ ಲೆಕ್ಕ ನೋಡುವುದಾದರೆ ಕೆಲವೇ ಕೆಲವು. ಅದರಲ್ಲೂ ಜಾಗತಿಕ ಮಟ್ಟದಲ್ಲೂ, ಕನ್ನಡ ಸಿನಿಮಾಗಳ ಹವಾ ಜೋರಾಗಿ ಇರುವ ಈ ಸಮಯದಲ್ಲಿ 'ಹೆಬ್ಬುಲಿ ಕಟ್' ಇನ್ನೊಂದು ರೀತಿಯ ಅಲೆ ಎಬ್ಬಿಸುವ ಮೂಲಕ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಹಾಗಾದ್ರೆ ಈ ಸಿನಿಮಾ ಮೂಲಕ ಸಮಾಜಕ್ಕೆ ಸಿಗುವ ಮೆಸೇಜ್ ಏನು? ಮುಂದೆ ಓದಿ.

Hebbuli Cut Movie Is Creating New Wave In Kannada Film Industry

'ಹೆಬ್ಬುಲಿ ಕಟ್' ಹವಾ ಜೋರು!

ನಿಮಗೆಲ್ಲಾ ಗೊತ್ತಿರುವಂತೆ 'ಹೆಬ್ಬುಲಿ' ಸಿನಿಮಾ ಕಿಚ್ಚ ಸುದೀಪ್ ಅವರ ಮುಖ್ಯ ಭೂಮಿಕೆಯಲ್ಲಿ ಮಿಂಚಿ ಸದ್ದು ಮಾಡಿದ್ದ ಚಿತ್ರ. ಇದೇ ಚಿತ್ರದ ಆಧಾರದಲ್ಲಿ 'ಹೆಬ್ಬುಲಿ ಕಟ್' ಇದೀಗ ರಿಲೀಸ್ ಆಗುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಹಾಗೇ 'ಹೆಬ್ಬುಲಿ ಕಟ್' ಸಿನಿಮಾದಲ್ಲಿ ಒಂದು ಗಂಭೀರ ಚರ್ಚೆಯ ವಿಷಯ ಕೂಡ ಇದೆ. ಜಾತಿ ಪದ್ಧತಿ, ಆಧುನಿಕ ಜಗತ್ತಿನಲ್ಲೂ ಗ್ರಾಮೀಣ ಭಾರತದ ಆ ಗಂಭೀರ ಸಮಸ್ಯೆಗಳನ್ನು ತಿಳಿಸಲಾಗಿದೆ.

ನಟ ಪುನೀತ್ ಶೆಟ್ಟಿ ಅಬ್ಬರ!

ಇಂತಹದ್ದೇ ಪ್ರಮುಖ ವಿಚಾರಗಳನ್ನು ಕೇಂದ್ರವಾಗಿ ಇಟ್ಟುಕೊಂಡು 'ಹೆಬ್ಬುಲಿ ಕಟ್' ಸಿನಿಮಾ ಬೆಳ್ಳಿತೆರೆ ಮೇಲೆ ಅಬ್ಬರಿಸುತ್ತಿದೆ. ನಿರ್ದೇಶಕ ಭೀಮರಾವ್ ಅವರು ತುಂಬ ಲವಲವಿಕೆಯಿಂದಲೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದು, ಸಿನಿಮಾ ಪಾತ್ರಗಳು ಕೂಡ ಸಾಕಷ್ಟು ಗಮನ ಸೆಳೆಯುತ್ತಿವೆ. ಉತ್ತರ ಕರ್ನಾಟಕ ಗ್ರಾಮೀಣ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಹೈಸ್ಕೂಲ್ ಓದುತ್ತಿರುವ ಬಾಲಕನೊಬ್ಬನಿಗೆ ತನ್ನ ಹೇರ್ ಸ್ಟೈಲ್ ಬಗ್ಗೆ ಅಪಾರ ಪ್ರೀತಿ ಇರುತ್ತೆ.

ಅಲ್ಲಿಂದ ಏನೆಲ್ಲ ತಿರುವು ಪಡೆಯುತ್ತೆ? ಈ 'ಹೆಬ್ಬುಲಿ ಕಟ್' ಸಿನಿಮಾದಲ್ಲಿ ನಟ ಸುದೀಪ್ ಹೇರ್ ಸ್ಟೈಲ್ ಹೇಗೆ ಫಾಲೋ ಮಾಡುತ್ತಾನೆ ಶಾಲಾ ಬಾಲಕ? ಅನ್ನೋದು ಈ ಕಥೆಯ ಜೀವಾಳ ಆಗಿದ್ದರೂ ಆಧುನಿಕ ಸಮಾಜದ ಅಂಕುಡೊಂಕಗಳನ್ನ ಕೂಡ ತೋರಿಸಲಾಗಿದೆ. ಇದರ ಜೊತೆಗೆ ಪುನೀತ್ ಶೆಟ್ಟಿ ಎಂಬ ನಟನ ಖದರ್ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯವಾಗಿದೆ.

ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಮೌನೇಶ್ ಜೊತೆಗೆ ನಿರ್ದೇಶಕ ಭೀಮರಾವ್ ಅವರು ಸಾಕಷ್ಟು ಪ್ರಯೋಗ ಮಾಡಿದ್ದು, ಮತ್ತೊಂದು ಕಡೆ ಗ್ಯಾರೇಜ್ ಮಾಲೀಕನ ಪಾತ್ರ ನಿಭಾಯಿಸುವ ರಫೀಕ್ ಪಾತ್ರ ಎಲ್ಲರ ಗಮನ ಸೆಳೆದಿದೆ. ನಟ ಪುನೀತ್ ಶೆಟ್ಟಿ ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಾಗೇ ಕನ್ನಡಿಗರು ಬಹಳ ದಿನಗಳ ನಂತರ ಒಂದು ಅದ್ಭುತ ಸಿನಿಮಾದ ದರ್ಶನ ಮಾಡಿಕೊಂಡಿದ್ದಾರೆ. ನಿರ್ದೇಶಕ ಭೀಮರಾವ್ ಅವರ ಪ್ರಯತ್ನಕ್ಕೆ ದೊಡ್ಡ ಗೆಲುವು ಈ ಮೂಲಕ ಸಿಕ್ಕಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+