ದೆಹಲಿಯಲ್ಲಿ ಕಾಂತಾರ ಚಾಪ್ಟರ್‌-1 ವೀಕ್ಷಿಸಿದ ಹೆಚ್‌.ಡಿ.ಕುಮಾರಸ್ವಾಮಿ, ಏನಂದ್ರು?

ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಕಾಂತಾರ ಚಾಪ್ಟರ್‌-1 (Kantara Chapter 1) ಸಿನಿಮಾವನ್ನು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ವೀಕ್ಷಿಸಿದ್ದಾರೆ. ನವದೆಹಲಿಯಲ್ಲಿ, ನನ್ನ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಮತ್ತು ನಾನು ಕಾಂತಾರ ಚಾಪ್ಟರ್‌-1 ವೀಕ್ಷಿಸುವ ಸೌಭಾಗ್ಯ ಪಡೆದೆವು ಎಂದು ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಾಂತಾರ ಕನ್ನಡ ಅಸ್ಮಿತೆಯ ಭವ್ಯ ಆಚರಣೆ. ನಮ್ಮ ಸಾಂಸ್ಕೃತಿಕ ಸಾರದ ಹೃದಯಸ್ಪರ್ಶಿ ಚಿತ್ರಣ, ಆಳವಾಗಿ ಮನಮುಟ್ಟುವ ಮತ್ತು ಅತ್ಯಂತ ಅಧಿಕೃತ ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ತುಳುನಾಡಿನ ಶ್ರೀಮಂತ ಸಂಪ್ರದಾಯಗಳು, ಆಧ್ಯಾತ್ಮಿಕತೆ ಮತ್ತು ದೈವಿಕ ಪರಂಪರೆಯ ಭವ್ಯ ಅನಾವರಣ. ಈ ಚಿತ್ರವು ಪದಗಳನ್ನು ಮೀರಿದ ಸೃಷ್ಟಿಯಾಗಿದ್ದು, ಕಲ್ಪನೆ ಮತ್ತು ಕಲಾತ್ಮಕತೆಯ ಮೇರುಕೃತಿಯಾಗಿದೆ ಎಂದಿದ್ದಾರೆ. ಈ ಗಮನಾರ್ಹ ಪ್ರಯತ್ನಕ್ಕಾಗಿ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಹೊಂಬಾಳೆ ಫಿಲ್ಮ್ಸ್ ಮತ್ತು ಅವರ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

HD Kumaraswamy Watches Kantara Chapter-1 In Delhi Praises Rishab Shetty Masterpiece

ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನೈಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರವು ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ. ನೀವು ಇಂತಹ ಅತ್ಯುತ್ತಮ ಕೃತಿಗಳನ್ನು ರಚಿಸುವುದನ್ನು ಮುಂದುವರಿಸುತ್ತೀರಿ ಮತ್ತು ಕನ್ನಡ ಚಿತ್ರರಂಗವು ಈ ಜಾಗತಿಕ ಮಟ್ಟದ ಇನ್ನೂ ಅನೇಕ ಚಲನಚಿತ್ರಗಳನ್ನು ನೋಡಲಿ ಎಂದು ನಾನು ಭಾವಿಸುತ್ತೇನೆ ಎಂದು ಅಭಿನಂದನೆ ತಿಳಿಸಿದ್ದಾರೆ.

ಕಲೆಕ್ಷನ್‌ ಎಷ್ಟಾಗಿದೆ?

ರಿಷಬ್‌ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್‌-1' ಬಿಡುಗಡೆಯಾದ ಆರು ದಿನಗಳಲ್ಲಿ ವಿಶ್ವದಾದ್ಯಂತ 400 ಕೋಟಿ ರೂ. ಗಳಿಸಿದೆ. ಚಿತ್ರದ ಹಿಂದಿ ಮತ್ತು ಕನ್ನಡ ಆವೃತ್ತಿಗಳು ಬಲವಾದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುಂದುವರಿದಿದೆ. ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಅಕ್ಟೋಬರ್ 7ರ ಮಂಗಳವಾರದ ವೇಳೆಗೆ ಭಾರತದಲ್ಲಿ 33.5 ಕೋಟಿ ಗಳಿಸಿದೆ. ಇದು ಚಿತ್ರದ ಸೋಮವಾರದ ಕಲೆಕ್ಷನ್‌ಗಿಂತ 2 ಕೋಟಿ ರೂಪಾಯಿ ಹೆಚ್ಚಾಗಿದೆ. ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅವುಗಳಲ್ಲಿ, ಕನ್ನಡ ಮತ್ತು ಹಿಂದಿ ಆವೃತ್ತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕಂಡುಬಂದಿದೆ.

ಹಿಂದಿ ಆವೃತ್ತಿಯು ಆರು ದಿನಗಳಲ್ಲಿ 93.25 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದರೆ, ಕನ್ನಡ ಆವೃತ್ತಿಯು 89.35 ಕೋಟಿ ರೂ ಕಲೆಕ್ಷನ್‌ ಮಾಡಿದೆ. ತೆಲುಗು ಆವೃತ್ತಿಯು ಭಾರತದಲ್ಲಿ 57.4 ಕೋಟಿ ರೂಪಾಯಿ ಗಳಿಸಿದೆ. ಆರು ದಿನಗಳಲ್ಲಿ ಎಲ್ಲ ಭಾಷೆಗಳಲ್ಲಿ ಚಿತ್ರದ ಸಂಗ್ರಹವು ಈಗ 29.25 ಕೋಟಿ ರೂಪಾಯಿ ಆಗಿದೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದಿನೇ ದಿನೇ ಸದ್ದು ಮಾಡುತ್ತಿದೆ.

ಭಾರತದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ (ನಿವ್ವಳ)

ದಿನ 1: 61.85 ಕೋಟಿ ರೂ.
ದಿನ 2: 45.4 ಕೋಟಿ ರೂ.
ದಿನ 3: 55 ಕೋಟಿ ರೂ.
ದಿನ 4: 63 ಕೋಟಿ ರೂ.
ದಿನ 5: 31.5 ಕೋಟಿ ರೂ.
ದಿನ 6: 33.5 ಕೋಟಿ ರೂ.
ಒಟ್ಟು: 290.25 ಕೋಟಿ ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+