Happy Birthday Yash: ರಾಕಿಂಗ್ ಸ್ಟಾರ್‌ ಯಶ್ ಬರ್ತಡೇ ಸಂಭ್ರಮಾಚರಣೆ ಹೇಗಿದೆ ?

ರಾಕಿಂಗ್ ಸ್ಟಾರ್‌ ಯಶ್ ಅವರ ಅಭಿಮಾನಿಗಳು ಇಂದು (ಜನವರಿ 8) ಸಂಭ್ರಮಾಚರಣೆಯಲ್ಲಿ ಇದ್ದಾರೆ. ಕೆಜಿಎಫ್ ನಂತರ ರಾಕಿಭಾಯ್ ಟಾಕ್ಸಿಕ್‌ ಸಿನಿಮಾ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್‌ ಅವರ ಬರ್ತಡೇ ಸಂಭ್ರಮಾಚರಣೆ ಜೋರಾಗಿದೆ. ಕುಟುಂಬದೊಂದಿಗೆ ಯಶ್ ಅವರು ಜನ್ಮದಿನ ಆಚರಿಸಿಕೊಂಡಿದ್ದು, ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಬರ್ತಡೇಗೂ ಮುನ್ನವೇ ಯಶ್ ಅವರು ಅವರ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿದ್ದರು.

ಯಾರೂ ಸಹ ನನ್ನ ಮನಸ್ಸಿಗೆ ನೋವುಂಟು ಮಾಡುವಂತೆ ಮಾಡಬೇಡಿ ಅಂತ ಹೇಳಿದ್ದರು. ಕಳೆದ ಬಾರಿ ದುರಂತ ನಡೆದ ಹಿನ್ನಲೆಯಲ್ಲಿ ಯಶ್ ಅವರು ಈ ರೀತಿಯ ಮನವಿಯೊಂದನ್ನು ಮಾಡಿದ್ದರು. ಅವರ ಅಭಿಮಾನಿಗಳು ಸಹ ಯಶ್‌ಮಾತಿಗೆ ಬೆಲೆ ಕೊಟ್ಟು ನಡೆದುಕೊಳ್ಳುತ್ತಿದ್ದಾರೆ. ಯಶ್‌ ಬರ್ತಡೇ ಸಂಭ್ರಮಾಚರಣೆ ಹೆಂಗಿದೆ.

Happy Birthday Yash How is Rocking Star Yashs Birthday Celebration Going

ಯಶ್‌ ಅವರ ಬರ್ತಡೇ ಸಂಭ್ರಮಾಚರಣೆ ಜೋರಾಗಿದೆ. ಬರ್ತಡೇಗೆ ಊರಲ್ಲಿ ಇರುವುದಿಲ್ಲ ಎಂದು ಮೊದಲೇ ಅವರು ಹೇಳಿದ್ದರು. ಸಿನಿಮಾದ ಕೆಲಸದಿಂದ ನಾನು ಊರಲ್ಲಿ ಇರಲ್ಲ. ನನ್ನ ಹುಟ್ಟು ಹಬ್ಬಕ್ಕೆ ನೀವು ತೋರಿಸುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಅನ್ನೋದು ನನ್ನ ಪ್ರೀತಿಯ ಮನವಿ ಅಂತ ಯಶ್ ಹೇಳಿಕೊಂಡಿದ್ದರು. ಅದರಂತೆ ಅವರು ಸಿನಿಮಾ ಶೂಟಿಂಗ್‌ ಸೆಟ್‌ನಲ್ಲೇ ಫ್ಯಾಮಿಲಿ ಹಾಗೂ ಆಪ್ತರೊಂದಿಗೆ ಬರ್ತಡೇ ಆಚರಿಸಿದ್ದಾರೆ. ಯಶ್‌ ಅವರ ಬರ್ತಡೇ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು. ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಫ್ಯಾಮಿಲಿ ಫೋಟೋ: ನಟ ಯಶ್ ಹಾಗೂ ನಟಿ, ಯಶ್ ಪತ್ನಿ ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಫೋಟೋ ಮತ್ತೆ ವೈರಲ್‌ ಆಗಿದೆ. ಯಶ್‌ ಫ್ಯಾಮಿಲಿ ಮ್ಯಾನ್‌. ಹಬ್ಬ ಹಾಗೂ ಸಂಭ್ರಮದ ಕಾರ್ಯಕ್ರಮಗಳಲ್ಲಿ ಯಶ್‌,ರಾಧಿಕಾ ಹಾಗೂ ಅವರ ಮಕ್ಕಳು ಇರುವ ಫೋಟೋಗಳು ವೈರಲ್‌ ಆಗುವುದು ಇದೆ. ಅದನ್ನು ಫ್ಯಾನ್ಸ್‌ ಹೆಚ್ಚಾಗಿ ಇಷ್ಟಪಡುತ್ತಾರೆ. ಬರ್ತಡೇ ದಿನ ಸಹ ಫ್ಯಾಮಿಲಿ ಫೋಟೋ ವೈರಲ್‌ ಆಗಿದೆ.

Happy Birthday Yash How is Rocking Star Yashs Birthday Celebration Going

ಈ ಫೋಟೋದಲ್ಲಿ ಯಶ್ ಅವರೊಂದಿಗೆ ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳು ಆಯ್ರಾ ಹಾಗೂ ಯಥರ್ವ್, ಟಾಕ್ಸಿಕ್ ಚಿತ್ರದ ನಿರ್ಮಾಪಕ ವೆಂಕಟೇಶ್ ಅವರು ಇದ್ದಾರೆ.

ಕೆಜಿಎಫ್ ನಂತರ ಹೆಚ್ಚಾಯ್ತು ಹವಾ: ಯಶ್ ಕನ್ನಡ ಚಿತ್ರರಂಗದ ಪ್ರಮುಖ ನಟ ಹಾಗೂ ಜನಪ್ರಿಯ, ಹೊಸ ಸ್ಟೈಲ್ ಮೂಲಕ ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಅವರು ಬೆಳೆದಿದ್ದು, ದೇಶದಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಕೆಜಿಎಫ್‌ನ ನಂತರ ಅವರ ಹವಾ ರಾಷ್ಟ್ರ ಮಟ್ಟದಲ್ಲಿ ಹೆಚ್ಚಾಗಿದೆ. ಉತ್ತರ ಭಾರತದಲ್ಲಿ ರಾಕಿಭಾಯ್‌ ಅಂತಲೂ ಯಶ್‌ ಫೇಮಸ್‌ ಆಗಿದ್ದಾರೆ.

ಬರ್ತಡೇ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ಭಾಷೆಗಳಲ್ಲಿನ ಅಭಿಮಾನಿಗಳು ಸಹ ಯಶ್‌ ಅವರಿಗೆ ಅವರವರ ಭಾಷೆಯಲ್ಲಿ ವಿಶ್‌ ಮಾಡುತ್ತಿದ್ದಾರೆ.

TheNameIsYash ಟ್ರೆಂಡ್: ಸೋಷಿಯಲ್‌ ಮೀಡಿಯಾದಲ್ಲಿ @TheNameIsYash, #yash #ToxicTheMovie #happybirthdayyash ಎನ್ನುವ ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡ್‌ಆಗಿವೆ. ಯಶ್‌ ಅವರ ಅಭಿಮಾನಿಗಳು ಈ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಯಶ್‌ ಅವರಿಗೆ ಬರ್ತಡೇ ವಿಶ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+