Filmfare Awards South (Kannada) 2023: ರಿಷಬ್, ಚೈತ್ರಾ, ನವೀನ್...ಈ ಬಾರಿ ಕಪ್ಪು ಸುಂದರಿ ಯಾರ ಪಾಲು ಗೊತ್ತಾ?
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ 2023 (ಕನ್ನಡ) ವಿಜೇತರ ಪಟ್ಟಿ: ಕೆಲವು ಕಾರಣಗಳಿಂದ ಕಳೆದ ವರ್ಷ ರದ್ದಾಗಿದ್ದ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ (ಕನ್ನಡ) 68 ನೇ ಆವೃತ್ತಿ ಇತ್ತೀಚೆಗೆ ನಡೆದಿದೆ. ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಚಿತ್ರರಂಗದ ಸಾಧನೆಗಳನ್ನು ಗುರುತಿಸಲು ಈ ಅತ್ಯುನ್ನತ ಅವಾರ್ಡ್ ನೀಡಲಾಗುತ್ತದೆ.
ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟರು, ಸಂಗೀತಗಾರರು, ನಿರ್ದೇಶಕರು ಮತ್ತು ತಂತ್ರಜ್ಞರನ್ನು ಶ್ಲಾಘಿಸಲು ಮರಳಿದೆ. ಕಳೆದ ವರ್ಷ ಅನಿರೀಕ್ಷಿತ ಸಂದರ್ಭಗಳಿಂದಾಗಿ ಪ್ರಶಸ್ತಿ ಪ್ರದಾನ ಮಾಡಲಾಗಲಿಲ್ಲ. ಆದರೆ ಕಳೆದ ವರ್ಷದಲ್ಲಿ ಮಿಂಚಿದ ಪ್ರತಿಭೆಗಳನ್ನು ಗೌರವಿಸಲು ಫಿಲ್ಮ್‌ಫೇರ್ ಡಿಜಿಟಲ್ ಮೂಲಕ ವಿಜೇತರನ್ನು ಘೋಷಿಸಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದ ಕಾಂತಾರ ಸಿನಿಮಾ ಇಲ್ಲೂ ಕೂಡ ತನ್ನ ದಾಖಲೆಯನ್ನು ಮುಂದುವರೆಸಿದೆ. ರಕ್ಷಿತ್ ಶೆಟ್ಟಿ, ಯಶ್ ಮತ್ತು ಸುದೀಪ್, ದರ್ಶನ್ ಅವರನ್ನು ಸೋಲಿಸಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಿಷಬ್ ಶೆಟ್ಟಿ ಮತ್ತೊಂದು ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿದ್ದಾರೆ.
ಮತ್ತೊಂದೆಡೆ, ನಟಿ ಚೈತ್ರ ಜೆ ಆಚಾರ್ ಅವರು ತಲೆದಂಡ ಚಿತ್ರದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಬ್ಲ್ಯಾಕ್ ಲೇಡಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಹಾಗಾದರೆ, 68 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ (ಕನ್ನಡ) 2023ನ ಪ್ರಮುಖ ವಿಜೇತರು ಯಾರು ಎಂಬ ಬಗ್ಗೆ ಸಂಪೂರ್ಣ ಪಟ್ಟಿ ಇಲ್ಲಿದೆ.
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ (ಕನ್ನಡ) ವಿಜೇತರು ಕನ್ನಡ- 2023:
ಅತ್ಯುತ್ತಮ ಚಿತ್ರ
ಕಾಂತಾರ
ಅತ್ಯುತ್ತಮ ನಿರ್ದೇಶಕ
ಕಿರಣರಾಜ್ ಕೆ (777 ಚಾರ್ಲಿ)
ಅತ್ಯುತ್ತಮ ಚಲನಚಿತ್ರ (ವಿಮರ್ಶಕರು)
ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)
ಅತ್ಯುತ್ತಮ ನಟ
ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟ (ವಿಮರ್ಶಕರು)
ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)
ಅತ್ಯುತ್ತಮ ನಟಿ
ಚೈತ್ರ ಜೆ ಆಚಾರ್ (ತಲೆದಂಡ)

ಅತ್ಯುತ್ತಮ ನಟಿ (ವಿಮರ್ಶಕರು)
ಸಪ್ತಮಿ ಗೌಡ (ಕಾಂತಾರ)
ಅತ್ಯುತ್ತಮ ಪೋಷಕ ನಟ
ಅಚ್ಯುತ್ ಕುಮಾರ್ (ಕಾಂತಾರ)
ಅತ್ಯುತ್ತಮ ಪೋಷಕ ನಟಿ
ಮಂಗಳಾ ಎನ್ (ತಲೆದಂಡ)
ಅತ್ಯುತ್ತಮ ಸಂಗೀತ ಆಲ್ಬಮ್
ಬಿ ಅಜನೀಶ್ ಲೋಕನಾಥ್ (ಕಾಂತಾರ)
ಅತ್ಯುತ್ತಮ ಸಾಹಿತ್ಯ
ವಿ. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
ಅತ್ಯುತ್ತಮ ಹಿನ್ನೆಲೆ ಗಾಯಕ
ಸಾಯಿ ವಿಘ್ನೇಶ್ (ವರಾಹ ರೂಪ-ಕಾಂತಾರ)
ಅತ್ಯುತ್ತಮ ಹಿನ್ನೆಲೆ ಗಾಯಕಿ
ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ- ವಿಕ್ರಾಂತ್ ರೋಣಾ)












Click it and Unblock the Notifications