ಬಾಲಿವುಡ್ ಬಾದ್ ಷಾ ಶಾರುಖ್‌ಗೆ ಬಿಗ್ ಶಾಕ್? ‘ಡಂಕಿ’ ಸಿನಿಮಾ ಏನಾಯ್ತು?

ನಟ ಶಾರುಖ್ ಖಾನ್ 2023ರಲ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವಂತಾಗಿತ್ತು. ಅದ್ರಲ್ಲೂ ಈ ನಟನ 2 ಸಿನಿಮಾಗಳು, 2023ರಲ್ಲಿ ಭರ್ಜರಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಹೀಗಾಗಿಯೇ ಬಾಲಿವುಡ್ ಬಾದ್ ಷಾ ಶಾರುಖ್ ನಟಿಸಿರುವ ಹೊಸ ಸಿನಿಮಾ 'ಡಂಕಿ' ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಈಗ ಹುಸಿಯಾಗಿ ಹೋಗಿದೆ ಎಂಬ ಮಾತು ಹರಿದಾಡುತ್ತಿದೆ. ಶಾರುಖ್ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತಾ?

ಶಾರುಖ್ ಖಾನ್ ಏನೇ ಮಾಡಿದ್ರೂ ಸೂಪರ್ ಅಂತಾರೆ ಅವರ ಫ್ಯಾನ್ಸ್. ಶಾರುಖ್ ಖಾನ್ ಇಡೀ ಜಗತ್ತಿನ ಹಲವು ದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ಶಾರುಖ್‌ರ ಸಿನಿಮಾ ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತೆ. ಅದೇ ರೀತಿ ಈಗ 'ಡಂಕಿ'ಗಾಗಿ ಕೋಟಿ ಕೋಟಿ ಫ್ಯಾನ್ಸ್ ಕಾಯುತ್ತಿದ್ದರು. ಈಗ 'ಡಂಕಿ' ಮೊದಲ ದಿನದ ಬಾಕ್ಸ್ ಆಫಿಸ್ ಕಲೆಕ್ಷನ್ ರಿಪೋರ್ಟ್ ರಿವೀಲ್ ಆಗಿದ್ದು, ಭಾರಿ ಚರ್ಚೆ ಶುರುವಾಗಿದೆ. ಹಾಗಾದರೆ ಶಾರುಖ್ ನಟನೆಯ ಸಿನಿಮಾ, ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ? ಶಾರುಖ್ ಖಾನ್ ಸಿನಿಮಾ ಹಿಟ್ ಆಯ್ತಾ? ಇಲ್ಲ ಫ್ಲಾಪ್ ಆಯ್ತಾ?

Explore The Shah Rukh Khans Movie Dunki First Day Box Office Collection

ಶಾರುಖ್ ಖಾನ್ ಸಿನಿಮಾ ದುಡಿದಿದ್ದು ಎಷ್ಟು?

ನಟ ಶಾರುಖ್ ಅವರ 'ಡಂಕಿ' ಚಿತ್ರವನ್ನ ಬರೋಬ್ಬರಿ 120 ಕೋಟಿ ರೂಪಾಯಿ ಬಂಡವಾಳ ಹಾಕಿ ನಿರ್ಮಾಣ ಮಾಡಲಾಗಿದೆ. ಹೀಗಾಗಿದ್ದಾಗ ಜಗತ್ತಿನಾದ್ಯಂತ ಸಿನಿಮಾ ರಿಲೀಸ್ ಮಾಡಿ ದೊಡ್ಡ ಮೊತ್ತದ ಕಲೆಕ್ಷನ್ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಸಾವಿರಾರು ಥಿಯೇಟರ್‌ಗಳು ಶಾರುಖ್ ಖಾನ್ ಅವರ ಸಿನಿಮಾ ಸೆಲೆಬ್ರೇಟ್ ಮಾಡಲು ಕಾಯುತ್ತಿದ್ದವು. ಆದರೆ ಆಗಿದ್ದೆಲ್ಲ ಉಲ್ಟಾ, ಶಾರುಖ್ ಅವರ ಸಿನಿಮಾ ಮೊದಲ ದಿನ ನಿರೀಕ್ಷೆಗಿಂತ ಕಡಿಮೆ ಕಲೆಕ್ಷನ್ ಮಾಡಿದೆ. 'ಡಂಕಿ' ಸಿನಿಮಾ ಮೊದಲ ದಿನ ಕೇವಲ 30 ಕೋಟಿ ರೂಪಾಯಿ ದುಡಿದಿದೆ ಎನ್ನಲಾಗಿದೆ.

ಸಾವಿರ ಸಾವಿರ ಕೋಟಿ ದುಡಿದ್ದರು

ಬಾಲಿವುಡ್ ಬಾದ್ ಷಾ ಬಿರುದು ಪಡೆದಿರುವ ಶಾರುಖ್ ಖಾನ್ ಅವರು ಈ ವರ್ಷವೆ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದಾರೆ. 2023ರಲ್ಲಿ ಶಾರುಖ್ ಅವರ ಸಾಧನೆ ಕಂಡು ಅವರ ಅಭಿಮಾನಿಗಳು ಖುಷ್ ಆಗಿದ್ದಾರೆ. 'ಜವಾನ್​' ಮತ್ತು 'ಪಠಾಣ್' ಚಿತ್ರದ ಮೂಲಕ ಅಪ್ಪಟ ಮಾಸ್​ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದ ಶಾರುಖ್ ಖಾನ್ ಕೇವಲ ಒಂದೇ ರೀತಿಯ ಸಿನಿಮಾಗೆ ಅಂಟಿಕೊಂಡಿಲ್ಲ. ಇದರ ಭಾಗವಾಗಿ ಡಿಫರೆಂಟ್ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ.

Explore The Shah Rukh Khans Movie Dunki First Day Box Office Collection

ಆದರೆ ಡಂಕಿ ಚಿತ್ರ ಬಾಕ್ಸ್ ಆಫಿಸ್ ಕಲೆಕ್ಷನ್ ವಿಚಾರದಲ್ಲಿ ಸ್ವಲ್ಪ ಡಲ್ ಆಗಿದೆ. ಆದ್ರೂ ಇದು ಮುಂದೆ ಸರಿ ಹೋಗುತ್ತೆ 'ಡಂಕಿ' ಕೂಡ ಬ್ಲಾಕ್ ಬಸ್ಟರ್ ಲಿಸ್ಟ್ ಸೇರುತ್ತೆ ಅನ್ನೋದು ಅವರ ಅಭಿಮಾನಿಗಳ ನಿರೀಕ್ಷೆ. ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಶಾರುಖ್ ಅವರ 'ಜವಾನ್​' ಮೊದಲ ದಿನ ಭರ್ಜರಿ 75 ಕೋಟಿ ದುಡಿದಿತ್ತು. ಆದ್ರೆ ಈ ವಿಚಾರದಲ್ಲಿ 'ಡಂಕಿ' ಸಿನಿಮಾ ಸ್ವಲ್ಪ ಹಿಂದೆ ಬಿದ್ದಂತಾಗಿದೆ.

ಪ್ರಶಸ್ತಿ ಪಡೆಯುವಲ್ಲೂ ಮುಂದೆ ಇದೆ

ಶಾರುಖ್ ಖಾನ್ & ರಾಜ್‌ ಕುಮಾರ್ ಹಿರಾನಿ ಈ ಕ್ರೇಜಿ ಕಾಂಬಿನೇಷನ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ'. ಶಾರುಖ್ ಖಾನ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಹೊಸ ಹೊಸ ದಾಖಲೆ ಸೃಷ್ಟಿಸೋದಕ್ಕೆ ಎಂಟ್ರಿ ಕೊಟ್ಟಿದ್ದಾರೆ. '3 ಇಡಿಯಟ್ಸ್' ಹಾಗೂ ಲಗೆ ರಹೋ ಮುನ್ನಾಭಾಯಿ ಹಾಗೂ 'ಪಿಕೆ' ಸೇರಿ 'ಸಂಜು' 'ಮುನ್ನಾಭಾಯಿ ಎಂಬಿಬಿಎಸ್' ರೀತಿ ಅತ್ಯುತ್ತಮ ಸಿನಿಮಾ ನೀಡಿದ್ದ ರಾಜ್‌ಕುಮಾರ್ ಹಿರಾನಿ ಇದೇ ಮೊದಲ ಬಾರಿ, ಶಾರುಖ್ ಖಾನ್ ಜೊತೆ ಸೇರಿ 'ಡಂಕಿ' ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಡಂಕಿ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯೂ ಇದೆ. ಹಾಗೇ ಪ್ರಶಸ್ತಿ ಪಡೆಯುವ ಸಿನಿಮಾಗಳ ಸಾಲಿನಲ್ಲೂ ನಿಂತಿದೆ. ಇನ್ನೂ ಕೆಲವು ದಿನ ಸಾಲು ಸಾಲು ರಜೆ ಇರುವುದರಿಂದ ಡಂಕಿ ಬಾಕ್ಸ್ ಆಫಿಸ್‌ನಲ್ಲಿ ಗೆದ್ದು ಬೀಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+