ಶಾರುಖ್ & ತಾಪ್ಸಿ ಫುಲ್ ಮಿಂಚಿಂಗ್, ಹೆಂಗಿದೆ ‘ಡಂಕಿ’ ಫಸ್ಟ್ ಸಾಂಗ್?
ಶಾರುಖ್ ಖಾನ್ ಏನೇ ಮಾಡಿದ್ರೂ ಅದು ಸೂಪರ್ ಅಂತಾರೆ ಅವರ ಅಭಿಮಾನಿಗಳು. ಈ ಸ್ಟಾರ್ ಜಗತ್ತಿನ ಹಲವು ದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಹೀಗಾಗಿ ಶಾರುಖ್ ಸಿನಿಮಾ ಅಂದ್ರೆ ಜಗತ್ತಿನಾದ್ಯಂತ ಕ್ರೇಜ್ ಇರುತ್ತೆ. ಅದೇ ರೀತಿ ಈಗ 'ಡಂಕಿ'ಗಾಗಿ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ 'ಡಂಕಿ'ಯ ಮೊದಲ ಸಾಂಗ್‌ನ ರಿಲೀಸ್ ಮಾಡಿದೆ ಚಿತ್ರತಂಡ.
ಹೌದು, 'ಡಂಕಿ'ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿದೆ. ಶಾರುಖ್ ಖಾನ್ & ರಾಜ್ ಕುಮಾರ್ ಹಿರಾನಿ ಜೋಡಿ ಚಿತ್ರದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ರು. ಇನ್ನು ಅಭಿಮಾನಿಗಳಿಂದ ಟೀಸರ್‌ಗೆ ಕೂಡ ಭರ್ಜರಿ ರಿಯಾಕ್ಷನ್ ಸಿಕ್ಕಿದೆ. ಇನ್ನೇನು ಡಂಕಿ ರಿಲೀಸ್‌ಗು ಕೌಂಟ್‌ಡೌನ್ ಶುರುವಾದ ಹಿನ್ನೆಲೆ ಚಿತ್ರತಂಡ ಪ್ರಮೋಷನ್ ಶುರು ಮಾಡಿದೆ. ಇದೇ ವೇಳೆಗೆ ಇನ್ನೊಂದು ಸರ್ಪ್ರೈಸ್ ಕೂಡ ಕೊಟ್ಟಿದೆ 'ಡಂಕಿ' ಸಿನಿಮಾ ತಂಡ. ಏನದು ಸರ್ಪ್ರೈಸ್? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಹಾಡಿನ ಹಿಂದಿನ ಶಕ್ತಿ ಇವರು!
ಅಂದಹಾಗೆ ಡಂಕಿ ಸಿನಿಮಾ ಮೊದಲ ಸಾಂಗ್ ಇಂದು ರಿಲೀಸ್ ಆಗಿದೆ. ಹಾರ್ಡಿ ಮತ್ತು ಮನು ಪ್ರೇಮ ಗೀತೆ ಅನಾವರಣಗೊಂಡಿದೆ. ಹಾಡಿಗೆ ಶಾರುಖ್ ಖಾನ್ & ತಾಪ್ಸಿ ಹೆಜ್ಜೆ ಹಾಕಿ ಫ್ಯಾನ್ಸ್ ಮನಸ್ಸು ಗೆದ್ದಿದ್ದಾರೆ. ಪ್ರೀತಮ್ ಸಂಗೀತ, ಸ್ವಾನಂದ್ ಕಿರ್ಕಿರೆ & ಐಪಿ ಸಿಂಗ್ ಬರೆದ ಸಾಹಿತ್ಯದ ರೋಮ್ಯಾಂಟಿಕ್ ಹಾಡಿಗೆ ಅರಿಜಿತ್ ಸಿಂಗ್ ಧ್ವನಿ ಇಂಪಾಗಿದೆ. ಹಾಗೂ ಗಣೇಶ್ ಆಚಾರ್ಯರು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಸ್ಟಾರ್ ಡೈರೆಕ್ಟರ್ & ಸೂಪರ್ ಹೀರೋ!
ಬಾಲಿವುಡ್‌ನ ಸ್ಪೆಷಲ್ ಸಿನಿಮಾ ಮೇಕರ್ & 4 ರಾಷ್ಟ್ರ ಪ್ರಶಸ್ತಿ ಗೆದ್ದ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ & ಶಾರುಖ್ ಖಾನ್ ಕಾಂಬೋದಲ್ಲಿ ಬರ್ತಿರುವ 'ಡಂಕಿ' ಸಿನಿಮಾ ಈಗಾಗಲೇ ತನ್ನ ವಿಭಿನ್ನ ಮೇಕಿಂಗ್‌ನಿಂದ ಗಮನ ಸೆಳೆದಿದೆ. ಮುನ್ನಾ ಬಾಯ್ ಎಂಬಿಬಿಎಸ್ ಸೇರಿದಂತೆ ಥ್ರೀ ಇಡಿಯಟ್ಸ್, ಪಿಕೆ & ಸಂಜು ರೀತಿ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾವನ್ನ ನೀಡಿದ್ದ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಮತ್ತೊಮ್ಮೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಈಗ ಸಿನಿಮಾದ ಮೊದಲ ಹಾಡು ಕಣ್ತುಂಬಿಕೊಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.
ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಂಡ ಶಾರುಖ್
ರಾಜ್ ಕುಮಾರ್ ಹಿರಾನಿ ಸಿನಿಮಾಗಳು ಮನರಂಜನೆ ಜತೆ ಸಂದೇಶ ಒಳಗೊಂಡಿರುತ್ತವೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾಗಳನ್ನೇ ನೀಡುತ್ತಾರೆ. ಇಂತಹ ಸ್ಟಾರ್ ನಿರ್ದೇಶಕ ಈಗ ಶಾರುಖ್ ಖಾನ್ ಅವರ ಡಂಕಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾಗೆ ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದರೆ, ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು ಹಾರ್ಡಿ ಪಾತ್ರದಲ್ಲಿ ಶಾರುಖ್ ಮಿಂಚಲಿದ್ದಾರೆ.

'ಡಂಕಿ' ಚಿತ್ರದ ಕಥೆ ಏನು?
ಶಾರುಖ್ ಜೊತೆಗೆ ಸ್ಟಾರ್ಸ್ ದಂಡೇ ಚಿತ್ರಕ್ಕೆ ಸಾಥ್ ನೀಡಿದ್ದು ಇನ್ನು ಚಿತ್ರದಲ್ಲಿ ರಾಜಕುಮಾರ್ ಹಿರಾನಿ ಅವರು ಕಾನೂನು ಬಾಹಿರವಾಗಿ ಕೆನಡಾ & ಅಮೆರಿಕಗೆ ಹೋಗುವ ಜನರ ಕಥೆ ಆಧರಿಸಿ ಡಂಕಿ ಸಿನಿಮಾ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿ ಗೌರಿ ಖಾನ್ & ರಾಜ್‌ಕುಮಾರ್ ಹಿರಾನಿ ಅವರಿಂದ ನಿರ್ಮಾಣ ಆಗ್ತಿದೆ.
ಈ ಸಿನಿಮಾದಲ್ಲಿ ನಾಯಕನಾಗಿ ಶಾರುಖ್ ನಟಿಸಿದ್ದು, ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ. ಹೀಗೆ ಅಭಿಮಾನಿಗಳು ಕೂಡ, ಕುತೂಹಲದಿಂದ ಸಿನಿಮಾ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಇಂದು ಮೊದಲ ಸಾಂಗ್ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಇನ್ನೊಂದು ಸರ್ಪ್ರೈಸ್ ನೀಡಿದೆ.












Click it and Unblock the Notifications