Dwarakish: ಕರುನಾಡ ಕುಳ್ಳ ದ್ವಾರಕೀಶ್ ಅವರ ಪ್ರಸಿದ್ಧ ಸಿನಿಮಾಗಳು
ಬೆಂಗಳೂರು, ಏಪ್ರಿಲ್. 16: ಕರುನಾಡಿನ ರಾಜಕುಳ್ಳ ಎಂದು ಖ್ಯಾತರಾಗಿದ್ದ ಹಿರಿಯ ನಟ ದ್ವಾರಕೀಶ್ ತಮ್ಮ 81ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಪಾರ ಅಭಿಮಾನಿಗಳು ಮತ್ತು ಸಿನಿಪ್ರಿಯರನ್ನು ಅಗಲಿದ್ದಾರೆ. ನಟರಾಗಿ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕನ್ನಡ ಕಾಲಾಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.
ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ವರನಟ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿ ಮೇರುನಟಟೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನಾಯಕ ನಟನಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆ ಜೊತೆಗೆ ಹಿರಿಯ ನಟರೊಂದಿಗೆ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ದಿವಂಗತ ನಟ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಸಕತ್ ಫೇಮಸ್ ಆಗಿತ್ತು.

19 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ರಾಜ ಕುಳ್ಳ
ನಟ ದ್ವಾರಕೀಶ್ ಒಬ್ಬ ನಿರ್ಮಾಪಕ ಮಾತ್ರವಲ್ಲದೆ ಉತ್ತಮ ನಿರ್ದೇಶಕ ಕೂಡ ಹೌದು. ಕನ್ನಡ ಸಿನಿಮಾರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ದ್ವಾರಕೀಶ್‌ಗೆ ಇದೆ. ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರೂ ಕೂಡ ನಟ, ನಿರ್ದೇಶಕರಾಗಿ ಹೆಸರು ಮಾಡಿದವರು. ಬರೋಬ್ಬರಿ 19 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ನೀ ಬಾರೆದ ಕಾದಂಬರಿ, ನೀ ತಂದ ಕಾಣಿಕೆ, ನಾನ್ ಆದಿಮೈ ಇಲ್ಲೈ, ಆಫ್ರಿಕಾದಲ್ಲಿ ಶೀಲ, ಡ್ಯಾನ್ಸ್ ರಾಜ ಡ್ಯಾನ್ಸ್, ಜೈ ಕರ್ನಾಟಕ, ಕೃಷ್ಣ ನೀ ಕುಣಿದಾಗ, ಶೃತಿ, ಗೌರಿ ಕಲ್ಯಾಣ, ಹೊಸ ಕಳ್ಳ ಹಳೇ ಕುಳ್ಳ, ರಾಯರು ಬಂದರು ಮಾವನ ಮನೆಗೆ, ರಸಿಕ, ಕಿಲಾಡಿಗಳು, ಹೃದಯಾ ಕಳ್ಳರು, ಕಿಡ್ನಾಪ್, ಗಿಡ್ಡು ದಾದಾ, ಕಲ್ಲಾರು, ಶೃತಿ ಹಾಕಿದ ಹೆಜ್ಜೆ, ಮಜ್ನು ಈ ಸಿನಿಮಾಗಳಿಗೆ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ಮಾಪಕನಾಗಿ ನಟ ದ್ವಾರಕೀಶ್
ದ್ವಾರಕೀಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ನಿರ್ಮಾಪಕರಾಗಿ. ಮಮತೆಯ ಬಂಧನ ಸಿನಿಮಾ ಜಂಟಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, 1969 ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಸಿನಿಮಾದಿಂದ ಸ್ವತಂತ್ರ ನಿರ್ಮಾಪಕರಾದರು. ಸಣ್ಣ ಬಜೆಟ್ ಚಿತ್ರಗಳಿಂದ ಹಿಡಿದು 1969 ರಿಂದ 2019ರ ವರೆಗೂ ಸುಮಾರು ಐವತ್ತು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
ಮೇಯರ್ ಮುತ್ತಣ್ಣನ ನಂತರ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ಕಾಲ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ನೀಡಿದರು. ನಿರ್ಮಾಪಕರಾಗಿ ಅನೇಕ ಹೊಸಬರನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ನಟ-ನಟಿಯರಷ್ಟೇ ಅಲ್ಲ ಹೊಸ ನಿರ್ದೇಶಕರು ಮತ್ತು ಇತರ ತಂತ್ರಜ್ಞರಿಗೂ ಅವಕಾಶ ಕೊಟ್ಟಿದ್ದಾರೆ. 2004 ರಲ್ಲಿ ದ್ವಾರಕೀಶ್ ಅವರ ಆಪ್ತಮಿತ್ರ ಸಿನಿಮಾ ಅದ್ಭುತ ಯಶಸ್ಸು ಗಳಿಸಿತು.
ಮಮತೆಯ ಬಂಧನ, ಮೇಯರ್ ಮುತ್ತಣ್ಣ, ಕುಳ್ಳ ಏಜೆಂಟ್, ಕೌಬಾಯ್ ಕುಳ್ಳ, ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರದಲ್ಲಿ ರಾಜ ಕುಳ್ಳ, ಪ್ರೀತಿ ಮಾಡು ತಮಾಷೆ, ಕುಳ್ಳ ಕುಳ್ಳಿ, ಮಂಕು ತಿಮ್ಮ, ಗುರು ಶಿಷ್ಯರು, ಮನೆ ಮನೆ ಕಥೆ, ಪೆದ್ದ ಗೆದ್ದ, ಅದೃಷ್ಟವಂತ, ನ್ಯಾಯ ಎಲ್ಲಿದೆ?, ಗೆದ್ದ ಮಗ, ಆನಂದ ಭೈರವಿ, ಪ್ರಚಂಡ ಕುಳ್ಳ, ಪೊಲೀಸ್ ಪಾಪಣ್ಣ, ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ನೀ ತಂದ ಕಾಣಿಕೆ ,ಮದುವೆ ಮಾಡು ತಮಾಷೆ ನೋಡು, ಬ್ರಹ್ಮ ಗಂಟು, ಆಫ್ರಿಕಾದಲ್ಲಿ ಶೀಲಾ, ಡ್ಯಾನ್ಸ್ ರಾಜ ಡಾನ್ಸ್ , ಒಂದೆ ಗೂಡಿನ ಹಕ್ಕಿಗಳು, ರಾವಣ ರಾಜ್ಯ, ಮಜ್ನು, ಆಪ್ತಮಿತ್ರ, ವಿಷ್ಣುವರ್ಧನ, ಚಾರುಲತಾ, ಆಟಗಾರ, ಚೌಕಾ, ಅಮ್ಮಾ ಐ ಲವ್ ಯು, ಆಯುಷ್ಮಾನ್‌ಭವ ಸೇರಿ ಹಲವು ಸಿನಿಮಾಗಳಿಗೆ ಬಂಡವಾಳ ಹಾಕಿದ್ದಾರೆ.











Click it and Unblock the Notifications