Bigg Boss: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಯನ್ನು ಅರೆಸ್ಟ್ ಮಾಡಿದ ಪೊಲೀಸರು...
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಹಲವು ದೇಶಗಳಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಯಾಕಂದ್ರೆ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮದ ಗತ್ತು ಹಾಗೆ ಇದೆ. ಅದರಲ್ಲೂ ಕಿಚ್ಚ ಸುದೀಪ್ ಅವರು 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮಕ್ಕೆ ಡೈಮಂಡ್ ಇದ್ದಂತೆ ಅಂತಾ ಹೊಗಳುತ್ತಾರೆ ಕಿಚ್ಚ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ' ಬಿಗ್ ಬಾಸ್ ಕನ್ನಡ' ಸ್ಪರ್ಧಿಗಳ ಪೈಕಿ ಪದೇ, ಪದೇ ಹಲವರು ಜೈಲಿಗೆ ಹೋದ ಆರೋಪ ಕೇಳಿ ಬರುತ್ತಿದ್ದು, ಈಗ ಮತ್ತೊಬ್ಬರು ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಯನ್ನು ಅರೆಸ್ಟ್ ಮಾಡಿದ ಪೊಲೀಸರು...
ಹೌದು, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಕಳೆದ ಕೆಲವು ದಿನಗಳಿಂದ ಬೇರೆ ಬೇರೆ ವಿಚಾರಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮದ ಮಾಜಿ ಸ್ಪರ್ಧಿಗಳು ಹಲವು ಕಾರಣಗಳಿಗೆ ಜೈಲಿಗೆ ಹೋಗಿ ಬಂದಿದ್ದೂ ಆಗಿದೆ. ಕೆಲವರು ಜೈಲಿಗೆ ಹೋಗಿ ಬಂದ ನಂತರ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂಬ ಆರೋಪ ಕೂಡ ಇದೆ.

ಒಬ್ಬರು ಮಾತ್ರ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ನಡೆಯುವ ಸಮಯದಲ್ಲೇ ಜೈಲಿಗೆ ಹೋಗಿ ಬಂದರು. ಹೀಗಿದ್ದಾಗಲೆ, 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ದೊಡ್ಡ ಸೌಂಡ್ ಮಾಡಿದ್ದ ಮಾಜಿ ಸ್ಪರ್ಧಿಗಳು ಕೂಡ ಜೈಲು ಕಂಬಿ ಎಣಿಸಿದ್ದಾರೆ. ಎಲ್ಲದರ ನಡುವೆಯೇ ಇದೀಗ ಡ್ರೋನ್ ಪ್ರತಾಪ್ ಕೂಡ....
'ಡ್ರೋನ್ ಪ್ರತಾಪ್ ಏನಪ್ಪಾ ನಿನ್ನ ಲೀಲೆ?'
ಕಲರ್ ಕಲರ್ ಕಾಗೆ ಹಾರಿಸಿದ್ದ ಆರೋಪ ಹೊತ್ತಿದ್ದ ಡ್ರೋನ್ ಪ್ರತಾಪ್‌ಗೆ ಜೈಲು ಹೊಸತಲ್ಲ. ಯಾಕಂದ್ರೆ ಹಿಂದೆ ಕೂಡ ಅಂದ್ರೆ ಬಿಗ್‌ಬಾಸ್ ಕನ್ನಡ ಸ್ಪರ್ಧೆಗೆ ಹೋಗುವುದಕ್ಕೂ ಮೊದಲು ಡ್ರೋನ್ ಪ್ರತಾಪ್ ಜೈಲಿಗೆ ಹೋಗಿ ಬಂದಿದ್ದರು. ಅಲ್ಲದೆ ಈ ಬಗ್ಗೆ ಪಶ್ಚಾತ್ತಾಪ ಕೂಡ ಆಗಿತ್ತು. ಅಂದಹಾಗೆ ಡ್ರೋನ್ ಪ್ರತಾಪ್ ಹೆಸರಿನ ಜೊತೆಯಲ್ಲೇ ವಿವಾದಗಳು ಕೂಡ ಬೆರೆತು ಹೋಗಿದೆ ಅಂತಾ ಕಾಣುತ್ತದೆ.
ಯಾಕೆ ಅಂದ್ರೆ, ಡ್ರೋನ್ ಪ್ರತಾಪ್ ಒಂದಾದ ನಂತರ ಒಂದು ಕಾಂಟ್ರವರ್ಸಿ ಮಾಡಿಕೊಂಡು ಪೊಲೀಸರ ಅತಿಥಿ ಆಗುತ್ತಿದ್ದಾರೆ. ಅದರಲ್ಲೂ, ಇದೀಗ ನಿರ್ಜನ ಪ್ರದೇಶದಲ್ಲಿ ಇರುವ ಕೃಷಿ ಹೊಂಡದ ರೀತಿ ನೀರಿನ ಗುಂಡಿಗೆ ಕೆಮಿಕಲ್ ಮಿಶ್ರಣ ಹಾಕಿ, ಬಾಂಬ್ ರೀತಿ ದೊಡ್ಡ ಸ್ಫೋಟ ನಡೆಸಿರುವ ಆರೋಪ ಡ್ರೋನ್ ಪ್ರತಾಪ್ ವಿರುದ್ಧ ಕೇಳಿ ಬಂದಿತ್ತು. ಈ ಕಾರಣಕ್ಕೆ ಇದೀಗ ಪೊಲೀಸರು ಡ್ರೋನ್ ಪ್ರತಾಪ್‌ನ ಅರೆಸ್ಟ್ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಮತ್ತೆ ಪೊಲೀಸರ ಅತಿಥಿ!
ಸೋಡಿಯಂ ಎಂಬ ರಾಸಾಯನಿಕವನ್ನು ಬಳಸಿ, ಅದನ್ನು ನೀರಿಗೆ ಎಸೆದು ಬ್ಲಾಸ್ಟ್ ಮಾಡಿದ್ದ ಆರೋಪ ಡ್ರೋನ್ ಪ್ರತಾಪ್ ವಿರುದ್ಧ ಕೇಳಿ ಬಂದಿತ್ತು. ಸ್ವತಃ ಇದನ್ನ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಜನ ಅದರಲ್ಲೂ ಪರಿಸರ ಪ್ರೇಮಿಗಳು ರೊಚ್ಚಿಗೆದ್ದಿದ್ದರು.
ಹೀಗಾಗಿ, ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್‌ನ ಅರೆಸ್ಟ್ ಮಾಡಿದ್ದಾರೆ. ಈ ರೀತಿ ಕೃತ್ಯ ಎಸಗಿರುವ ಆರೋಪ ಕೇಳಿ ಬಂದ ಹಿನ್ನೆಲೆ ಡ್ರೋನ್ ಪ್ರತಾಪ್ ವಿಚಾರಣೆ ಕೂಡ ನಡೆಸಲಾಗುತ್ತಿದೆ. ಮತ್ತೊಂದು ಕಡೆ, ಈ ರೀತಿ ಡ್ರೋನ್ ಪ್ರತಾಪ್ ಅರೆಸ್ಟ್ ಆಗಿರುವ ವಿಚಾರವು ಸೋಷಿಯಲ್ ಮೀಡಿಯಾ ಸೇರಿ ಇಂಟರ್‌ನೆಟ್ ಪೂರ್ತಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications