Bigg Boss: ಬಿಗ್‌ಬಾಸ್‌ ಮನೆಯಲ್ಲಿ ಡಬಲ್ ಎಲಿಮಿನೇಷನ್: ಟಾಪ್‌ ಸ್ಪರ್ಧಿಗಳು ಔಟ್!

ಬಿಗ್‌ಬಾಸ್‌ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲು ಕೆಲವೇ ದಿನಗಳು ಬಾಕಿ ಉಳಿದಿವೆ. ಫ್ಯಾಮಿಲಿ ರೌಡ್‌ಯಿಂದ ಈ ವಾರ ಶುರುವಾಗಿತ್ತು. ಫ್ಯಾಮಿಲಿ ರೌಂಡ್ ಮುಗಿದು ಈಗ ವೀಕೆಂಡ್ ಬಂದಿದೆ. ವೀಕೆಂಡ್‌ನಲ್ಲಿ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್ ಇದ್ದೇ ಇರುತ್ತದೆ. ಇದರೊಂದಿಗೆ ಒಂದು ಅಥವಾ ಎರಡು ಎಲಿಮಿನೇಷನ್ ಇರುತ್ತೆ. ಹಾಗಾದರೆ ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿಗಳು ಯಾರು?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆದಿದ್ದರಿಂದ ಯಾವುದೇ ಸ್ಪರ್ಧಿಗೆ ವಿಶೇಷವಾಗಿ ಕ್ಲಾಸ್ ತೆಗೆದುಕೊಳ್ಳುವ ಘಟನೆ ನಡೆದಿಲ್ಲ. ಆದರೆ ಪ್ರತಿಯೊಬ್ಬ ಸ್ಪರ್ಧಿಗೂ ಕಿಚ್ಚನ ಕಡೆಯಿಂದ ಒಂದು ಎಚ್ಚರಿಕೆ ಮಾತು ಇದ್ದೇ ಇರುತ್ತದೆ. ಇದರ ಜೊತೆಗೆ ಒಂದು ಎಲಿಮಿನೇಷನ್ ಇರುವುದು ಪಕ್ಕಾ. ಹಾಗಾದರೆ ಈ ವಾರ ಯಾವೆಲ್ಲಾ ಸ್ಪರ್ಧಿಗಳು ಸೇಫ್ ಆಗಿದ್ದಾರೆ? ಯಾರು ಔಟ್ ಆಗಲಿದ್ದಾರೆ?

double elimination in the bigg boss house top contestants out

ಪ್ರಸ್ತುತ ಬಿಗ್‌ಬಾಸ್‌ ಮನೆಯಲ್ಲಿ ಒಂಬತ್ತು ಜನ ಸ್ಪರ್ಧಿಗಳು ಇದ್ದಾರೆ. ತ್ರಿವಿಕ್ರಮ್, ಭವ್ಯಾ, ಮಂಜು, ಚೈತ್ರಾ, ಗೌತಮಿ, ಧನ್‌ರಾಜ್, ಹನುಮಂತ, ರಜತ್, ಮೋಕ್ಷಿತಾ. ಈ ಸ್ಪರ್ಧಿಗಳ ಕುಟುಂಬಸ್ಥರು ಬಿಗ್‌ಬಾಸ್‌ ಮನೆಗೆ ಬಂದು ಹೋಗಿದ್ದಾರೆ. ಈ ರೀತಿಯ ಫ್ಯಾಮಿಲಿ ರೌಂಡ್‌ನಿಂದ ಬಿಗ್‌ಬಾಸ್‌ ಈ ವಾರ ಶುರುವಾಗಿ, ಶಾಂತವಾಗಿ ಕಳೆದಿದೆ.

ರಜತ್ ಈ ವಾರದ ಕ್ಯಾಪ್ಟನ್

ಹೌದು.. ಕಳೆದ ಎಲ್ಲಾ ವಾರಗಳಿಗೆ ಹೋಲಿಸಿದರೆ ಈ ವಾರ ತುಂಬಾ ಶಾಂತವಾಗಿ ಬಿಗ್‌ಬಾಸ್‌ ನಡೆದಿದೆ. ಇದಕ್ಕೆ ಕಾರಣ ಫ್ಯಾಮಿಲಿ ರೌಂಡ್. ಈ ವಾರ ಯಾವುದೇ ರೀತಿಯ ಕಿರುಚಾಟ, ಕೂಗಾಟ ಯಾವುದೂ ಕೂಡ ಇರಲಿಲ್ಲ. ಇನ್ನೂ ಈ ವಾರ ಕ್ಯಾಪ್ಟನ್ ಆಗೋದು ತುಂಬಾ ಮುಖ್ಯವಾಗಿತ್ತು. ಯಾಕೆಂದರೆ ಈ ವಾರ ಕ್ಯಾಪ್ಟನ್ ಆದರೆ ಮುಂದಿನ ವಾರಕ್ಕೆ ಇಮ್ಯೂನಿಟಿ ಸಿಗುತ್ತದೆ. ಹೀಗೆ ಕ್ಯಾಪ್ಟನ್ ಟಾಸ್ಕ್‌ ನಡೆದು ಇದರಲ್ಲಿ ರಜತ್‌ ಅವರು ಟಾಸ್ಕ್‌ ಆಡಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ.

ಕಿಚ್ಚನ ಕೈ ರುಚಿ ಸವಿದ ಸ್ಪರ್ಧಿಗಳು

ಇನ್ನೂ ಪ್ರತೀ ಸೀಸನ್‌ನಲ್ಲೂ ಕಿಚ್ಚಾ ಸುದೀಪ್ ಅವರು ತಾವೇ ಕೈಯಾರೆ ತಯಾರಿಸಿದ ಅಡುಗೆಯನ್ನು ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕಳುಹಿಸಿಕೊಡುತ್ತಾರೆ. ಇದರ ಜೊತೆಗೆ ಸ್ಪೆಷಲ್ ಆಗಿ ಅವರೇ ಬರೆದ ಸಂದೇಶವನ್ನು ಕಳುಹಿಸಿಕೊಡುತ್ತಾರೆ. ಈ ಬಾರಿಯೂ ಬಿಗ್‌ಬಾಸ್‌ನಲ್ಲಿ ಅದೇ ಆಗಿದೆ. ಬಿಗ್‌ಬಾಸ್‌ ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧಿಗೂ ಕಿಚ್ಚ ಸುದೀಪ್ ಅವರು ಸಂದೇಶವನ್ನು ಕಳುಹಿಸಿದ್ದಾರೆ. ಜೊತೆಗೆ ಅವರೇ ತಯಾರಿಸಿದ ಅಡುಗೆ ಸಹ ಬಿಗ್‌ಬಾಸ್‌ ಸ್ಪರ್ಧಿಗಳು ಸವಿದಿದ್ದಾರೆ. ಪ್ರಸ್ತುತ ಇದೆಲ್ಲಾ ನಡೆದು ವೀಕೆಂಡ್ ಬಂದಿದೆ.

ವೀಕೆಂಡ್ ಬಂದರೆ ಕಿಚ್ಚಾ ಸುದೀಪ್ ಅವರು ಬಿಗ್‌ಬಾಸ್‌ ಮನೆಗೆ ಬರುತ್ತಾರೆ. ಇನ್ನೊಂದು ಕಡೆ ಎಲಿಮಿನೇಷನ್ ಇದೆ ಅನ್ನೋ ಭಯ ಕಾಡುತ್ತದೆ. ಹೌದು.. ಈ ವಾರ ಡಬಲ್ ಎಲಿಮಿನೇಷನ್ ಇರುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇಂದು ಆಗಿರುವುದು ಸಿಂಗಲ್ ಎಲಿಮಿನೇಷನ್. ಆದರೆ ಇಲ್ಲಿ ಕಿಚ್ಚ ಸುದೀಪ್ ಸಿಂಗಲ್ ಎಲಿಮಿನೇಷನ್ ಮಾಡಿ ಅಲ್ಲೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಎಲಿಮಿನೇಷನ್‌ನಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ

ಇವತ್ತು ಕಿಚ್ಚಾ ಸುದೀಪ್ ಅವರು ಧನ್‌ರಾಜ್ ಅವರನ್ನು ಮೊದಲು ಸೇವ್ ಮಾಡುತ್ತಾರೆ. ನಂತರ ತ್ರಿವಿಕ್ರಮ್, ಮಂಜು ನಂತರ ಭವ್ಯ, ಆದಾದ ಮೇಲೆ ಗೌತಮಿ, ರಜತ್ ಅವರನ್ನು ಸೇವ್ ಮಾಡ್ತಾರೆ. ಕೊನೆಯಲ್ಲಿ ಹನುಮಂತ ಹಾಗೂ ಚೈತ್ರಾ ಅವರು ಉಳಿದುಕೊಳ್ಳುತ್ತಾರೆ. ಇಲ್ಲಿ ಕಿಚ್ಚಾ ಸುದೀಪ್ ಅವರು ನೀವಿಬ್ಬರು ಬಾಟಮ್ ಅಲ್ಲಿ ಇದಿರಾ ಎಂದು ಒಂದಿಷ್ಟು ಬುದ್ಧಿಮಾತು ಹೇಳಿ ಇಬ್ಬರನ್ನೂ ಸೇವ್ ಮಾಡ್ತಾರೆ. ಇಲ್ಲಿಗೆ ಈ ವಾರ ನೋ ಎಲಿಮಿನೇಷನ್ ವೀಕ್ ಅಂತನೇ ಹೇಳಬಹುದು.

ಹೀಗಾಗಿ ಈ ವಾರ ಎಲಿಮಿನೇಷನ್ ಆಗಿಲ್ಲ. ಇದರಿಂದ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಆಗಬಹುದು ಅಥವಾ ಮುಂದಿನ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಬಿಗ್‌ಬಾಸ್‌ ಮನೆಯಲ್ಲಿ ಯಾವಾಗ ಬೇಕಾದರೂ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ. ಇದರಿಂದ ಮನೆಯ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+