Anchor Anushree: ಹಸೆಮಣೆ ಏರಲು ಸಜ್ಜಾಗಿರುವ ಆ್ಯಂಕರ್ ಅನುಶ್ರೀ ಒಟ್ಟು ಆಸ್ತಿ ಎಷ್ಟು ಗೊತ್ತೇ..?
ಅನುಶ್ರೀ ಕನ್ನಡದ ಜನಪ್ರಿಯ ಮಾತ್ರವಲ್ಲ ಸದಾ ಬ್ಯೂಸಿಯಾಗಿರುವ ನಿರೂಪಕಿ. ಒಂದಲ್ಲ ಒಂದು ಬ್ಯಾಕ್ ಟು ಬ್ಯಾಕ್ ಜೀ ಕನ್ನಡದ ಶೋಗಳನ್ನು ನಡೆಸಿಕೊಡುವ ಅನುಶ್ರೀ, ಇತ್ತ ಸಿನಿಮಾ ಇವೆಂಟ್‌ಗಳಲ್ಲೂ ಬಹುಬೇಡಿಕೆಯ ನಿರೂಪಕಿ. ಯಾವುದೇ ದೊಡ್ಡ ದೊಡ್ಡ ಸಿನಿಮಾಗಳಿದ್ದರೂ ಅಲ್ಲಿಗೆ ಅನುಶ್ರೀಯೇ ಆ್ಯಂಕರ್. ಜೊತೆಗೆ ತಮ್ಮ ಯೂಟ್ಯೂಬ್ ಚಾನೆಲ್ ಕೂಡ ಸಕ್ರಿಯವಾಗಿಟ್ಟುಕೊಂಡಿರುವ ಅನುಶ್ರೀ ಆಗಾಗ ಸಖತ್ ಎಂಟರ್‌ಟೈನಿಂಗ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ಬಾಲ್ಯದಿಂದಲೂ ಕಷ್ಟ ಕಂಡಿರುವ ಅನುಶ್ರೀ ಕೆಲಸವನ್ನು ಪ್ರೀತಿಸಿ ಮಾಡುತ್ತಾರೆ. ಹೀಗಾಗಿ ಅವರು ಮಾಡುವ ಎಲ್ಲಾ ಶೋಗಳು ಕೂಡ ಸೂಪರ್ ಹಿಟ್. ಹೀಗಾಗಿ ಕಾರ್ಯಕ್ರಮದ ಆಯೋಜಕರು ಕೂಡ ನಿರೂಪಣೆ ಎನ್ನುವುದನ್ನು ಅನುಶ್ರೀ ಅವರಿಗೆ ಬಿಟ್ಟುಕೊಟ್ಟಿರುತ್ತಾರೆ. ಸಾಲು ಸಾಲು ಶೋ ಜೊತೆಗೆ ಬೇರೆ ಬೇರೆ ಕೆಲಸಗಳಲ್ಲೂ ಬ್ಯೂಸಿಯಾಗಿರುವ ಅನುಶ್ರೀ ಇತ್ತೀಚಿಗಷ್ಟೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗುಡ್‌ನ್ಯೂಸ್ ಕೊಟ್ಟಿದ್ದರು.

ಇತ್ತೀಚಿಗೆ ತಮ್ಮ ಮದುವೆ ಬಗ್ಗೆ ಒಲವು ತೋರಿದ್ದ ನಿರೂಪಕಿ ಅನುಶ್ರೀ ಮುಂದಿನ ವರ್ಷ ಮದುವೆಯಾಗುವುದು ಖಚಿತವಾಗಿದ್ದು, ದಿನಾಂಕ ಕೂಡ ಬಹುತೇಕ ನಿಗದಿಯಾಗಿದೆ. ಸ್ವತಃ ಅನುಶ್ರೀಯೇ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಒಂದು ಸಿಕ್ರೇಟ್‌ಅನ್ನು ಬಹಿರಂಗ ಪಡಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯರಾದ ನಟಿ ನಯನಾ, ಸೂರಜ್, ಜಗ್ಗಪ್ಪ ಹಾಗೂ ಗಿಲ್ಲಿ ಅವರನ್ನು ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಅತಿಥಿಗಳನ್ನಾಗಿ ಕರೆದು ಚಿಟ್ ಚಾಟ್ ನಡೆಸಿದ್ದರು.
ಈ ವೇಳೆ ಅನುಶ್ರೀ ನಾನು ಅಪ್ಪು ಸರ್ ಫ್ಯಾನ್ ಆಗಿರೋದ್ರಿಂದ ಮಾರ್ಚ್‌ನಲ್ಲಿ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದ್ದಾರೆ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನವೇ ಅನುಶ್ರೀ ಮದುವೆಯಾಗುವ ಸಾಧ್ಯತೆ ಇದೆ. ಅಥವಾ ಮಾರ್ಚ್ 17 ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ದಿನ ಮದುವೆ ದಿನಾಂಕ ಘೋಷಣೆ ಹಾಗೂ ಹುಡುಗನ್ನು ಅನುಶ್ರೀ ಪರಿಚಯ ಮಾಡಿಕೊಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಈಗಾಗಲೇ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿರುವ ಅನುಶ್ರೀ ಸದ್ಯ ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೊತೆ ಅಮ್ಮ ತಮ್ಮನನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಾಲು ಸಾಲು ಶೋ, ಸಿನಿಮಾ ಇವೆಂಟ್‌ಗಳನ್ನು ಬ್ರೇಕ್ ಇಲ್ಲದೇ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಅನುಶ್ರೀ ಅವರ ಆಸ್ತಿ ಎಷ್ಟು ಎನ್ನುವ ಪ್ರಶ್ನೆ ಅನೇಕರಿಗಿದೆ.
ಬಿಡುವೇ ಇಲ್ಲದೇ ಕಷ್ಟಪಟ್ಟು ದುಡಿದ ಅನುಶ್ರೀ ಐಷಾರಾಮಿ ಮನೆ ಮತ್ತು ಕಾರನ್ನು ಹೊಂದಿದ್ದು, ಆಸ್ತಿ ಸುಮಾರು 50 ಕೋಟಿ ರೂಪಾಯಿ ಇರಬಹುದು ಎಂದು ಹೇಳಲಾಗುತ್ತದೆ. ಆದರೆ ಅನುಶ್ರೀ ಬೇರೆಯವರಂತೆ ಎಂದೂ ತಮ್ಮ ಸಂಬಳ, ಆಸ್ತಿ ಹಾಗೂ ಉಳಿತಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.












Click it and Unblock the Notifications