ಪುನೀತ್ ರಾಜ್‌ಕುಮಾರ್ ಸಾವಿಗೆ ಕೊರೊನಾ ವ್ಯಾಕ್ಸಿನ್ ಕಾರಣ?
ಪುನೀತ್ ರಾಜ್‌ಕುಮಾರ್ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿ ಈಗಾಗಲೇ 2 ವರ್ಷವೇ ಕಳೆದಿದೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು, ದೇವರು ಅಂತಲೇ ಪೂಜೆ ಮಾಡುತ್ತಿದ್ದಾರೆ. ಹೀಗಿದ್ದಾಗ ಪವರ್ ಸ್ಟಾರ್ ಪುನೀತ್ ಅವರ ಸಾವಿನ ಬಗ್ಗೆ ಈಗ ಸ್ಫೋಟಕ ಆರೋಪ ಕೇಳಿಬಂದಿದೆ. ಅದ್ರಲ್ಲೂ ಪುನೀತ್ ರಾಜ್‌ಕುಮಾರ್ ಸಾವಿಗೆ ಕೊರೊನಾ ವ್ಯಾಕ್ಸಿನ್ ಕಾರಣ? ಎಂಬ ಗಂಭೀರ ಚರ್ಚೆ ಶುರುವಾಗಿದೆ.
ಹೌದು, ಕೆಲವು ದಿನಗಳಿಂದ ದೇಶದಲ್ಲಿ 'ಕೊರೊನಾ' ವ್ಯಾಕ್ಸಿನ್ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಒದಗಿಸಿದೆ. ಅದರಲ್ಲೂ 'ಕೊರೊನಾ' ವ್ಯಾಕ್ಸಿನ್ ಪೈಕಿ ಒಂದು ಬ್ರಾಂಡ್‌ನ ವ್ಯಾಕ್ಸಿನ್ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಪುನೀತ್ ರಾಜ್‌ಕುಮಾರ್ ಅವರಿಗು ಇದೇ ವ್ಯಾಕ್ಸಿನ್ ನೀಡಲಾಗಿತ್ತು, ಹೀಗಾಗಿ ಅಪ್ಪು ಅವರ ಸಾವಿಗೂ 'ಕೊರೊನಾ' ವ್ಯಾಕ್ಸಿನ್ ಕಾರಣನಾ? ಎಂಬ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಹಾಗಾದ್ರೆ ಅಭಿಮಾನಿಗಳು ಈಗ ಹೇಳುತ್ತಿರುವುದು ಏನು? ಈ ಆರೋಪ ನಿಜಾನಾ? ಮುಂದೆ ಓದಿ.

ಪುನೀತ್ ಸಾವಿಗೆ ವ್ಯಾಕ್ಸಿನ್ ಕಾರಣ?
ಅಂದಹಾಗೆ 'ಕೊರೊನಾ' ವ್ಯಾಕ್ಸಿನ್ ತೆಗೆದುಕೊಂಡರೆ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ ಎಂಬುದಾಗಿ ಈ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ತಿಳಿಸಿತ್ತು. ಹೀಗಿದ್ದಾಗ ಭಾರತದಲ್ಲಿ ಚಿಕ್ಕ ವಯಸ್ಸಿನಲ್ಲೇ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಜೀವ ಬಿಡುತ್ತಿದ್ದು ಇದಕ್ಕೆಲ್ಲಾ 'ಕೊರೊನಾ' ವ್ಯಾಕ್ಸಿನ್ ಕಾರಣ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ. ಈ ಆರೋಪಗಳ ಬೆನ್ನಲ್ಲೇ ಕನ್ನಡಿಗರ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಾವಿಗೆ 'ಕೊರೊನಾ' ವ್ಯಾಕ್ಸಿನ್ ಕಾರಣ ಎಂಬ ಆರೋಪ ಮಾಡಲಾಗುತ್ತಿದೆ. ಈ ಕುರಿತು, ಇದೀಗ ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಮಟ್ಟಿಗಿನ ಚರ್ಚೆ ಆರಂಭವಾಗಿದೆ.
Amid a controversy over the 'side effects' of Covishield vaccine, #SamajwadiParty chief #AkhileshYadav on Wednesday accused the #BJP of putting the lives of people at stake for 'extorting political donations' from a vaccine manufacturer.https://t.co/y3A6axsnBE
— Deccan Herald (@DeccanHerald) May 1, 2024
ಅಭಿಮಾನಿಗಳಿಗೆ ಕಾಡುತ್ತಿದೆ ಸಾವಿನ ನೋವು
ನಮ್ಮನ್ನು ಅಪ್ಪು ಅಗಲಿ ಎರಡು ವರ್ಷ ಉರುಳಿದ್ದರೂ, ಆ ನೋವು ಮಾತ್ರ ಮರೆಯಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಅಪ್ಪು ಸಮಾಧಿ ಎದುರಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡುತ್ತಿದ್ದ ಸಮಾಜ ಮುಖಿ ಕೆಲಸ ನೆನೆಯುತ್ತಿದ್ದಾರೆ. ಹಾಗೇ ಅಪ್ಪು ಕೈಯಿಂದ ಸಹಾಯ ಪಡೆದವರಿಗೆ, ಅವರು ಇಲ್ಲವೆಂಬ ನೋವು ಸಾಕಷ್ಟು ಕಾಡುತ್ತಿದೆ. ಹಾಗೇ ದೂರದ ಊರುಗಳಿಂದ ಇಂದಿಗೂ ಬೆಂಗಳೂರಿನಲ್ಲಿ ಇರುವ ಅಪ್ಪು ಸಮಾಧಿಗೆ ಲೆಕ್ಕವಿಲ್ಲದಷ್ಟು ಜನ ಬರುತ್ತಾರೆ.












Click it and Unblock the Notifications