Bigg Boss Kannada: ಬಿಗ್ ಬಾಸ್‌ನಲ್ಲಿ ಸುದೀಪ್‌ಗೆ ಅವಮಾನ? ವಾರ್ನಿಂಗ್ ಕೊಟ್ಟ ಮಾಜಿ ಸ್ಪರ್ಧಿ
ಬಿಗ್ ಬಾಸ್ ಕನ್ನಡ ಸತತ 11 ಆವೃತ್ತಿಗಳಲ್ಲಿ ನಿರೂಪಕರಾಗಿ ಯಶಸ್ವಿಯಾಗಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ನಿರೂಪಕನಾಗಿ ಇದೇ ನನ್ನ ಕೊನೆ ಆವೃತ್ತಿ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಮತ್ತು ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಾರಣವೇನು ಎಂದು ಸುದೀಪ್ ಬಹಿರಂಗಪಡಿಸದೇ ಇದ್ದರೂ, ಇದೇ ತನ್ನ ಕೊನೆಯ ಆವೃತ್ತಿ ಎಂದು ಖಚಿತ ಪಡಿಸಿದ್ದಾರೆ.
ಬಿಗ್ ಬಾಸ್‌ಗೆ ಸುದೀಪ್ ಗುಡ್ ಬೈ ಹೇಳಿದ ಬೆನ್ನಲ್ಲೇ ಮಾಜಿ ಸ್ಪರ್ಧಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಅವರ ಜಾಗದಲ್ಲಿ ಮತ್ತೊಬ್ಬರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಬಹುತೇಕ ಮಾಜಿ ಸ್ಪರ್ಧಿಗಳ ಅಭಿಪ್ರಾಯವಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಕಾರ್ಯಕ್ರಮ ನಿರ್ದೇಶಕರ ವಿರುದ್ಧ ಕೋಪಗೊಂಡಿದ್ದಾರೆ.

ಸುದೀಪ್‌ಗೆ ಅವಮಾನ ಆಯ್ತಾ?
ಬಿಗ್ ಬಾಸ್ ಕಾರ್ಯಕ್ರಮದಿಂದ ಸುದೀಪ್ ಹೊರಬರುವ ನಿರ್ಧಾರ ಘೋಷಣೆ ಬೆನ್ನಲ್ಲೇ ರೂಪೇಶ್ ರಾಜಣ್ಣ ಮಾಡಿರುವ ಟ್ವೀಟ್ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. "ಬಿಗ್ ಬಾಸ್ ಎನ್ನುವ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್, ಬಿಗ್ ಬಾಸ್ ನಿರೂಪಣೆಯನ್ನು ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು, ಅಸಲಿ ವಿಷಯ ನಾಳೆ ಮಾತಾಡ್ತೀನಿ." ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) October 13, 2024
ಕೆಲವು ಕನ್ನಡ ದ್ರೋಹಿಗಳ
ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ.
ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ
ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು
ಅಸಲಿ ವಿಷಯ ನಾಳೆ ಮಾತಾಡ್ತೀನಿ.@Chakravarthy_dj
ರೂಪೇಶ್ ರಾಜಣ್ಣ ಎಕ್ಸ್ ಪೋಸ್ಟ್ ನೋಡಿದ ಸುದೀಪ್ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಕಾಡಲು ಆರಂಭಿಸಿವೆ. ಅಸಲಿ ವಿಚಾರ ಬೇರೆನೆ ಇದ್ದು, ಇದೇ ಕಾರಣಕ್ಕೆ ಸುದೀಪ್ ಕಾರ್ಯಕ್ರಮದಿಂದ ಹೊರಬರಲು ನಿರ್ಧರಿಸಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.
ಅಭಿಮಾನಿಗಳಿಗೆ ಬೇಸರ
ಕಿಚ್ಚ ಸುದೀಪ್ ಬಿಗ್ ಬಾಸ್‌ನಿಂದ ಹೊರ ಬರ್ತಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ನಿಮಗಾಗಿಯೇ ಬಿಗ್ ಬಾಸ್ ನೋಡ್ತಿದ್ದೆವು, ನೀವೆ ಇಲ್ಲ ಎಂದ ಮೇಲೆ ಬಿಗ್ ಬಾಸ್ ನೋಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಸುದೀಪ್ ಹೊರಬರಲು ಅಸಲಿ ಕಾರಣವೇನು ಎನ್ನುವುದನ್ನು ರೂಪೇಶ್ ರಾಜಣ್ಣ ಇಂದು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ನಿರ್ದೇಶಕರಿಂದ ಏನಾದರೂ ಸುದೀಪ್‌ಗೆ ಅವಮಾನವಾಗಿದ್ದರೆ, ಕಾರ್ಯಕ್ರಮದ ಮೇಲೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.












Click it and Unblock the Notifications