ಧ್ರುವ ಸರ್ಜಾ ಫ್ಯಾನ್ಸ್ ಹುಡುಕುತ್ತಿದ್ದಾರೆ ಈ ಟೀ ಶರ್ಟ್: ಯಾಕೆ ಗೊತ್ತಾ?

ಕಟ್ಟುಮಸ್ತಾದ ಮೈಕಟ್ಟು, ಉದ್ದ ಕೂದಲಿಗೆ ಆಗಾಗ ಹಾಕಿಕೊಳ್ಳುವ ಜುಟ್ಟು, ಖಡಕ್ ಲುಕ್, ಗಟ್ಟಿ ಮಾತು ಇದೆಲ್ಲಾ ಒಟ್ಟಿಗೆ ಸೇರುದಾಗ ನೆನಪಿಗೆ ಬರುವುದು ನಟ ಧ್ರುವ ಸರ್ಜಾ. ಹೌದು ಸ್ಯಾಂಡಲ್‌ವುಡ್ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರ ಇತ್ತೀಚೆಗೆ ಜೋರಾಗಿದೆ. ಇದೀಗ ಧ್ರುವ ಸರ್ಜಾ ಅವರ ಅಭಿಮಾನಿಗಳು ಟೀ ಶರ್ಟ್‌ವೊಂದನ್ನು ಹುಡುಕುತ್ತಿದ್ದಾರೆ. ಆದರೆ ಅದು ಸಿಗುತ್ತಲೇ ಇಲ್ಲ. ಅಷ್ಟಕ್ಕೂ ಯಾವುದೀ ಟೀ ಶರ್ಟ್? ಧ್ರುವ ಸರ್ಜಾ ಅಭಿಮಾನಿಗಳು ಯಾಕೆ ಇದನ್ನು ಹುಡುಕುತ್ತಿದ್ದಾರೆ ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಆಕ್ಷನ್ ಪ್ರಿನ್ಸ್ ಅಂತ ಕರೆಸಿಕೊಳ್ಳುವ ಧ್ರುವ ಸರ್ಜಾ ಇದೀಗ ಮುಟ್ಟಿದ್ದೆಲ್ಲಾ ಚಿನ್ನ. ಅವರು ಮಾಡಿದ ಸಿನಿಮಾಗಳೆಲ್ಲವೂ ಬಹುತೇಕ ಹಿಟ್ ಆಗಿವೆ. ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ನಟಿಯರೊಂದಿಗೆ ನಟಿಸಿದ ಧ್ರುವ ಸರ್ಜಾ ಹೊಸಬರ ಸಿನಿಮಾಗಳಿಗೂ ಪ್ರೋತ್ಸಾಹ ನೀಡುವುದರಲ್ಲಿ ಸದಾ ಮುಂದಿರುತ್ತಾರೆ.

Dhruva Sarja T-shirt has seen a huge increase in demand

ಹೀಗೆ ಕಳೆದ ಎರಡು ದಿನಗಳ ಹಿಂದೆ ದ್ರುವ ಸರ್ಜಾ ಅವರು ಪ್ರೆಸ್ ಮೀಟ್ ಒಂದಕ್ಕೆ ಹೋಗಿದ್ದರು. 'ಪಪ್ಪಿ' ಎಂಬ ಸಿನಿಮಾವನ್ನು ಧ್ರುವ ಸರ್ಜಾ ಅವರು ಪ್ರೆಸೆಂಟ್ ಮಾಡ್ತಾ ಇದ್ದಾರೆ. ಉತ್ತರ ಕರ್ನಾಟಕದ ಮಂದಿಯೇ ಸೇರಿಕೊಂಡು ಮಾಡಿರುವ ಸಿನಿಮಾ ಇದಾಗಿದ್ದು ಸಖತ್ ಡೈಲಾಗ್‌ಗಳನ್ನು ಒಳಗೊಂಡಿದೆ. ಈಗಾಗಲೇ ಈ ಸಿನಿಮಾ ರೀಲ್ಸ್‌ ಮೂಲಕ ವೈರಲ್ ಆಗುತ್ತಿದೆ.

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಬೆಂಬಲ ನೀಡಲು ಪ್ರೆಸ್ ಮೀಟ್ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಆಗಮಿಸಿದ್ದರು. ಈ ವೇಳೆ ಅವರು ಹಾಕಿದ್ದ ಟೀ ಶರ್ಟ್ ಈಗ ಭಾರೀ ಸುದ್ದಿ ಆಗಿದೆ. ಸರಳವಾಗಿದ್ದರು ಆ ಟೀ ಶರ್ಟ್ ಸಿಕ್ಕಾಪಟ್ಟೆ ದುಬಾರಿ ಅನ್ನೋದು ಚೆಕ್ ಮಾಡಿದಾಗ ಗೊತ್ತಾಗಿದೆ. ಅಷ್ಟೇ ಅಲ್ಲ ಈ ಟೀ ಶರ್ಟ್ ಸಿಗೋದು ಕಷ್ಟವಾಗಿದ್ದು ಧ್ರುವ ಫ್ಯಾನ್ಸ್ ಇದರ ಹುಡುಕಾಟ ನಡೆಸಿದ್ದಾರೆ.

ಹೌದು ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ ಧ್ರುವ ಸರ್ಜಾ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಧ್ರುವ ಸರ್ಜಾ ಎಲ್ಲಿಗೇ ಹೋಗಲಿ ಅಲ್ಲಿ ಅವರ ಅಭಿಮಾನಿಗಳು ಅವರ ಸುತ್ತುವರೆದಿರುತ್ತಾರೆ. ಇನ್ನೂ ಅವರು ಉದ್ದವಾದ ಕೂದಲು, ಅವರು ಆಗಾಗ ಹಾಕಿಕೊಳ್ಳುವ ಜುಟ್ಟು, ಬಟ್ಟೆ, ಚಪ್ಪಲಿ, ಶೂಗಳನ್ನು ಫ್ಯಾನ್ಸ್ ಫಾಲೋ ಮಾಡುತ್ತಾರೆ.

Dhruva Sarja T-shirt has seen a huge increase in demand

ಧ್ರುವ ಹಾಕಿಕೊಳ್ಳುವ ಬಟ್ಟೆಯ ಬ್ರ್ಯಾಂಡ್‌ಗಳನ್ನೂ ಫಾಲೋ ಮಾಡೋ ಅಭಿಮಾನಿಗಳಿದ್ದಾರೆ. ಹೀಗೆ ಧ್ರುವ ಹಾಕಿದ್ದ ಟೀ ಶರ್ಟ್ ಈಗ ಸುದ್ದಿಯಾಗಿದೆ. ಅಷ್ಟಕ್ಕೂ ಧ್ರುವ ಸರ್ಜಾ ಧರಿಸಿದ ಟೀ ಶರ್ಟ್ ಬೆಲೆ ಹತ್ತು ಸಾವಿರ ರೂಪಾಯಿ. ಇದು Michael Kors ಎಂಬ ಬ್ರ್ಯಾಂಡ್‌ನದ್ದು. ಇದು Ajio Luxನಲ್ಲಿ ಲಭ್ಯವಿದೆ.

ಆದರೆ ಈ ಟೀ ಶರ್ಟ್ ಸ್ಟಾಕ್ ಖಾಲಿಯಾಗಿದ್ದು ಧ್ರುವ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದರೂ ಇದೇ ಬ್ರ್ಯಾಂಡ್ ಟೀ ಶರ್ಟ್ ಖರೀದಿ ಮಾಡಲು ಫ್ಯಾನ್ಸ್ ಶುರು ಮಾಡಿದ್ದು ಆನ್‌ಲೈನ್‌ನಲ್ಲಿ ಸರ್ಚ್ ಮಾಡುತ್ತಿದ್ದಾರೆ.

ಹಾಗೆ ನೋಡಿದರೆ ಟೀ ಶರ್ಟ್‌ನಲ್ಲಿ ವಿಶೇಷವಾದದ್ದು ಏನೂ ಇಲ್ಲ. ಬಿಳಿ ಬಣ್ಣದ ಟೀ ಶರ್ಟ್ ಅದಾಗಿದ್ದು ರೌಂಡ್ ನೆಕ್ ಕಾಲರ್‌ ಅನ್ನು ಹೊಂದಿದೆ. Michael Kors ಎಂಬ ಬ್ರ್ಯಾಂಡ್ ಸ್ಟಿಕ್ಕರ್ ಟೀ ಶರ್ಟ್ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಂಟಿಸಲಾಗಿದೆ. ಇದನ್ನು ಧ್ರುವ ಸರ್ಜಾ ಹಾಕಿದ್ದಾರೆ ಅನ್ನೋದು ಬಿಟ್ಟರೆ ಇದರಲ್ಲಿ ಅಂತಹ ಹೇಳಿಕೊಳ್ಳುವ ವಿಶೇಷತೆ ಏನೂ ಕೂಡ ಇಲ್ಲ. ಸಾಮಾನ್ಯವಾಗಿದ್ದರು ಇದರ ಬೆಲೆ 10,000 ರೂಪಾಯಿ ಇದೆ. ಧ್ರುವ ಸರ್ಜಾ ಈ ಟೀ ಶರ್ಟ್ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಇದು ಎಲ್ಲರ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+