ಅಣ್ಣ ಚಿರು ಬಳಸುತ್ತಿದ್ದ ಬೈಕ್ ರೈಡ್ ಮಾಡಿ ಧ್ರುವ ಸರ್ಜಾ ಭಾವುಕ!
ಸ್ಯಾಂಡಲ್‌ವುಡ್ ನಟರಾದ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ಅವರು ರಾಮ ಲಕ್ಷಣರು ಎಂದೇ ಕರೆಸಿಕೊಂಡಿದ್ದರು. ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಣ್ಣ ಚಿರು ಅಂದ್ರೆ ಪಂಚಪ್ರಾಣ. ಆದರೆ ವಿಧಿಯಾಟಕ್ಕೆ ಚಿರು ಚಿಕ್ಕ ವಯಸ್ಸಲ್ಲೇ ಅಕಾಲಿಕವಾಗಿ ನಿಧನರಾದರು. ಆ ನೋವು ಇಂದಿಗೂ ಧ್ರುವ ಅವರಿಂದ ದೂರವಾಗಿಲ್ಲ. ಅಣ್ಣ ನಿಧನರಾದಾಗ ಧ್ರುವ ಬಿಕ್ಕಿ ಬಿಕ್ಕಿ ಅಳುತ್ತಾ ಗೋಳಾಡಿದ್ದರು. ಈಗ ಚಿರುಗೆ ಇಷ್ಟವಾದ ವಸ್ತುವೊಂದಕ್ಕೆ ಧ್ರುವ ಮರುಜೀವ ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿರು ಸರ್ಜಾಗೆ ಕಾರು, ಬೈಕ್‌ನ ಕ್ರೇಜ್ ಇದ್ದಿದ್ದು ಗೊತ್ತೇ ಇದೆ. ಇನ್ನು ಅಣ್ಣನಿಗೆ ಹೆಚ್ಚು ಪ್ರಿಯವಾದ ಬೈಕ್ ಯಮಹಾ. ಇದರಲ್ಲೇ ಚಿರು-ಧ್ರುವಾ ಫುಲ್ ರೌಂಡ್ಸ್ ಹೊಡೆಯುತ್ತಿದ್ದರು ಎನ್ನಲಾಗಿದೆ. ಚಿರು ನಿಧನದ ಬಳಿಕ ಈ ಬೈಕ್ ಕೂಡ ಮೂಲೆ ಸೇರಿತ್ತು. ಹಲವು ವರ್ಷಗಳಿಂದ ಗ್ಯಾರೇಜ್‌ನಲ್ಲಿದ್ದ ಈ ಬೈಕ್ ಅನ್ನು ರಿಪೇರಿ ಮಾಡಿಸಿ ಹೊರತರಲಾಗಿದೆ. ಅಣ್ಣನಿಗೆ ಇಷ್ಟವಾದ ಬೈಕ್ ನೋಡಿ ಧ್ರುವ ಭಾವುಕರಾಗಿದ್ದಾರೆ.

ಧ್ರುವ ಈ ಬೈಕ್ ಅನ್ನು ಅಣ್ಣನ ನೆನಪು ಎನ್ನುವಂತೆ ಭಾವುಕರಾಗಿ ಫುಲ್ ಚೆಕ್ ಮಾಡಿ ಮುಟ್ಟಿದ್ದಾರೆ. ಬಳಿಕ ತಮ್ಮ ತಂದೆಯೊಂದಿಗೆ ಈ ಬೈಕ್ ಏರಿ ರೌಂಡ್ಸ್ ಹೊಡೆದಿದ್ದಾರೆ. ಇನ್ನು ಇದೇ ಬೈಕ್‌ನಲ್ಲಿ ಚಿರು ಕಾಲೇಜಿಗೆ, ಸಿನಿಮಾ ಥಿಯೇಟರ್‌ಗಳಿಗೆ ಹೋಗುತ್ತಿದ್ದರು. ಮೈಸೂರಿನಿಂದ ಬೆಂಗಳೂರಿಗೂ ಈ ಬೈಕ್‌ನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು ಎನ್ನಲಾಗಿದೆ.
ಬಾಲ್ಯದಿಂದಲೂ ಜೊತೆಗಿದ್ದ ಈ ಬೈಕ್ ಜೊತೆ ಚಿರು ಬಾಂಡಿಂಗ್ ಹೊಂದಿದ್ದರು. ದೊಡ್ಡ ಹೀರೋ ಆಗಿ ಹಣ ಸಂಪಾದಿಸಿದರೂ ಈ ಬೈಕ್ ಅನ್ನು ಚಿರು ಹಾಗೆಯೇ ಉಳಿಸಿಕೊಂಡಿದ್ದರು. ಈಗ ಅಣ್ಣನ ನೆನಪಿನಲ್ಲಿ ಈ ಬೈಕ್‌ಗೆ ಮತ್ತೆ ಮರುಜೀವ ನೀಡಲಾಗಿದ್ದು, ಚಿರು ಈ ಬೈಕ್ ರೈಡ್ ಮಾಡುತ್ತಿದ್ದ ದಿನಗಳನ್ನು ಧ್ರುವ ನೆನೆದಿದ್ದಾರೆ. ಅಣ್ಣಗಿಗಾಗಿ ಈ ಬೈಕ್ ಉಳಿಸಿಕೊಂಡಿರುವ ಧ್ರುವ ಸರ್ಜಾ ರಿಪೇರಿ ಮಾಡಿಸಿ, ತಮ್ಮ ತಂದೆಯನ್ನ ಹಿಂದೆ ಕೂರಿಸಿಕೊಂಡು ಮನೆಯ ಬಳಿ ರೈಡ್ ಮಾಡಿದ್ದಾರೆ. ಚಿರು ತಂದೆ ಕೂಡ ಈ ಬೈಕ್ ರೈಡ್ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಚಿಕ್ಕಂದಿನಿಂದಲೂ ಚಿರುಗೆ ಯಮಹಾ ಬೈಕ್ ಅಂದ್ರೆ ಪ್ರಾಣ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಈ ಬೈಕ್ ಖರೀದಿಸಿ ಕನಸು ನನಸಾಗಿಸಿದ್ದರು. ಇನ್ನು ಅಣ್ಣನೊಂದಿಗೆ ಧ್ರುವ ಕೂಡ ಹಲವು ಬಾರಿ ಈ ಬೈಕ್‌ನಲ್ಲಿ ಸುತ್ತಾಡಿರುವ ನೆನಪುಗಳಿವೆ. ಹೀಗಾಗಿ ಅಣ್ಣನ ಅಗಲಿಕೆ ನಡುವೆಯೂ ಚಿರು ನೆನಪುಗಳು ಜೀವಂತವಾಗಿರಲಿ ಎಂದು ಈ ಬೈಕ್‌ಗೆ ಮರುಜೀವ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications