Hanumantha: ಹನುಮಂತನಿಗಾಗಿ ಕಣ್ಣೀರು ಹಾಕಿದ ಗೆಳೆಯ ಧನ್‌ರಾಜ್
ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿರುವ ಹನುಮಂತನಿಗೆ ಅವರ ಗೆಳೆಯ ಧನ್‌ರಾಜ್ ಆಚಾರ್ 'ಎಲ್ಲಿದಿಯಾ ಬೇಗ ಬಾ' ಎಂದು ಕಣ್ಣೀರು ಹಾಕಿ ಕರೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಧನ್‌ರಾಜ್ ತುಂಬಾ ಒಳ್ಳೆಯ ಸ್ನೇಹಿತರು. ಇವರಿಬ್ಬರ ಸ್ನೇಹ ಭಾರೀ ಸುದ್ದಿ ಮಾಡಿತ್ತು. ಇದೀಗ ಧನ್‌ರಾಜ್ ಕಣ್ಣೀರು ಹಾಕುವ ಮೂಲಕ ಹನುಮಂತನನ್ನು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಾಗಾದರೆ ಧನ್‌ರಾಜ್ ಕಣ್ಣೀರು ಹಾಕುತ್ತಾ ಹನುಮಂತನ್ನನ್ನು ಕರೆದಿದ್ದು ಯಾಕೆ?
ಬಿಗ್‌ಬಾಸ್ ಮನೆಯಲ್ಲಿ ತುಂಬಾ ಆತ್ಮೀಯ ಸ್ನೇಹಿತರು ಅಂದರೆ ಅದು ಹನುಮಂತ ಹಾಗೂ ಧನ್‌ರಾಜ್. ಇವರಿಬ್ಬರೂ ಯಾವಾಗಲೂ ಒಟ್ಟಿಗೆ ಬಿಗ್‌ಬಾಸ್ ಮನೆಯಲ್ಲಿ ಕಾಲ ಕಳೆದಿರುವುದು ಹೆಚ್ಚು. ಇವರನ್ನು ನೋಡಿ ಅದೆಷ್ಟೋ ವೀಕ್ಷಕರು ಸ್ನೇಹ ಇದ್ದರೆ ಧನ್‌ರಾಜ್ ಹಾಗೂ ಹನುಮಂತನಂತಿರಬೇಕು ಅಂದಿರುವುದು ಇದೆ. ಅಲ್ಲದೆ ಹನುಮಂತ ಪದೇ ಪದೇ ಗೆಳೆಯ ಗೆಳೆಯ ಎನ್ನುವ ಪದವನ್ನು ಅದೆಷ್ಟೋ ಜನ ಬಳಕೆ ಮಾಡಿ ರೀಲ್ಸ್ ಮಾಡಿರುವುದು ಇದೆ. ಧನ್‌ರಾಜ್‌ಗೆ ಹನುಮಂತ ಆತ್ಮೀಯ ಗೆಳೆಯನಾದರೆ, ಗೋಲ್ಡ್ ಸುರೇಶ್‌ಗೆ ಅಳಿಯ. ಹೀಗೆ ಇವರ ಕಾಮಿಡಿ ಮಾತುಗಳು ಬಿಗ್‌ಬಾಸ್ ಮನೆಯಲ್ಲಿ ಎಲ್ಲರನ್ನು ನಗಿಸಿತ್ತು.

ಹನುಮಂತ ಎಲ್ಲಿದಿಯಾ ಬೇಗ ಬಾ ಎಂದು ಕಣ್ನೀರು ಹಾಕಿದ ಧನ್‌ರಾಜ್
ಬಿಗ್‌ಬಾಸ್ ಮನೆಯಲ್ಲಿ ಮಾತ್ರವಲ್ಲ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಕೂಡ ಧನ್‌ರಾಜ್ ಹಾಗೂ ಹನುಮಂತನ ನಡುವೆ ಸ್ನೇಹ ಹಾಗೇ ಇದೆ. ಅವರಿಬ್ಬರ ನಡುವಿನ ಸ್ನೇಹ ತುಂಬಾ ಗಟ್ಟಿಯಾಗಿದೆ. ಈ ನಡುವೆ ಧನ್‌ರಾಜ್ ಕಣ್ಣೀರು ಹಾಕುತ್ತಾ ಹನುಮಂತ ಎಲ್ಲಿದಿಯಾ ಬೇಗ ಬಾ ಎಂದು ಕರೆ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು.. ಬಿಗ್‌ಬಾಸ್ ವಿಜೇತರಾದ ಬಳಿಕ ಹನುಮಂತ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗುತ್ತಿದ್ದಾರೆ. ಇವರ ಪಂಚಿಂಗ್ ಡೈಲಾಗ್‌ಗಳಿಗೆ ವೀಕ್ಷಕರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಆದರೆ ಈ ವಾರ ಹನುಮಂತ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಧನ್‌ರಾಜ್ ಮಾತ್ರ ಶೋನಲ್ಲಿ ಭಾಗಿಯಾಗಿದ್ದಾರೆ.
ಹೀಗಾಗಿ ಇಡೀ ತಂಡ ಹನುಮಂತನನ್ನು ಮಿಸ್ ಮಾಡಿಕೊಂಡಿದೆ. ಇದರಿಂದಾಗಿ ಗೆಳೆಯ ಹನುಮಂತನಿಲ್ಲದೆ ಬೇಸರಗೊಂಡ ಧನ್‌ರಾಜ್ ಕಾಮಿಡಿಯಾಗಿ ಕಣ್ಣೀರು ಹಾಕುತ್ತಾ 'ಹನುಮಂತ ಎಲ್ಲಿದಿಯಾ ಬೇಗ ಬಾ.. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ತಂಡ ನಿನ್ನನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದೆ' ಎಂದು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಿಕ್ಕಾಪಟ್ಟೆ ಬ್ಯೂಸಿ ಆದ ಹನುಮಂತ
ಈ ವಿಡಿಯೋವನ್ನು ಕಂಡು ಹಲವಾರು ಜನ ಹನುಮಂತನಿಗೆ ಏನಾಯ್ತು, ಧನ್‌ರಾಜ್‌ಗೆ ಏನಾಯ್ತು ಅಂದುಕೊಂಡಿದ್ದಾರೆ. ಆದರೆ ಪೂರ್ಣ ವಿಡಿಯೋ ವೀಕ್ಷಿಸಿದರೆ ಧನ್‌ರಾಜ್ ಕಾಮಿಡಿ ಮಾಡಿದ್ದು ಗೊತ್ತಾಗುತ್ತದೆ. ಇನ್ನೂ ಹನುಮಂತ ಬಿಗ್‌ಬಾಸ್ ಮನೆಯಲ್ಲಿ ವಿಜೇತರಾದ ಬಳಿಕ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದಾರೆ. ಹಲವಾರು ಸ್ಥಳೀಯ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿರುವ ಹನುಮಂತ ಯಾರ ಕೈಗೂ ಸಿಗದಂತಾಗಿದ್ದಾರೆ. ಇದು ಅವರ ಬಿಗ್‌ಬಾಸ್ ಸ್ನೇಹಿತರಿಗೆ ಬೇಸರ ತಂದಿದೆ.
ಯಾಕೆಂದರೆ ಹನುಮಂತ ಎಲ್ಲೇ ಇರಲಿ ಹಾಡು ಕಾಮಿಡಿ ಮಾಡುತ್ತಾ ಹತ್ತಿರವಾಗಿಬಿಡುತ್ತಾರೆ. ಹೀಗಾಗಿ ಹನುಮಂತನ ಹಾಡು ಹಾಗೂ ಮಾತಿಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ಗಳು ಇದ್ದಾರೆ. ಕಲರ್ಸ್ ತಂಡ ಕೂಡ ಹನುಮಂತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಧನ್‌ರಾಜ್ ವೀಡಿಯೋ ನೋಡಿದರೆ ಈ ವಾರಾಂತ್ಯಕ್ಕೆ ಹನುಮಂತ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿಲ್ಲಾ ಅನ್ನೋದು ಸ್ಪಷ್ಟವಾಗುತ್ತದೆ. ಇಂದಿನ ಸಂಚಿಕೆಯಲ್ಲಿ ಇದೆಲ್ಲವೂ ಗೊತ್ತಾಗಲಿದೆ. ಒಟ್ಟಿನಲ್ಲಿ ಗೆಳೆಯ ಧನ್‌ರಾಜ್ ಮಾತ್ರ ಹನುಮಂತನ ಜೊತೆ ಇರುವಾಗಲೂ ಕಾಮಿಡಿ ಇಲ್ಲದೇ ಇದ್ದಾಗಲೂ ಕಾಮಿಡಿ ಮಾಡುತ್ತಲೇ ಇರುತ್ತಾರೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.












Click it and Unblock the Notifications