Darshan Thoogudeepa: ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದಂತೆ ‘ಡೆವಿಲ್’ ಸಿನಿಮಾ ಶೂಟಿಂಗ್ ಶುರು?

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೇರಿದಂತೆ ಜೊತೆಗಾರರು ರೇಣುಕಾಸ್ವಾಮಿ ಕೊಲೆಯ ಆರೋಪದಲ್ಲಿ ಜೈಲು ಸೇರಿ ನರಳುತ್ತಿದ್ದಾರೆ. ಅದರಲ್ಲೂ ದರ್ಶನ್ ತೂಗುದೀಪ್ ಹೀಗೆ ಬಳ್ಳಾರಿ ಜೈಲು ಸೇರಿದ ಪರಿಣಾಮ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿರುವ ಸಿನಿಮಾ ನಿಂತು ಹೋಗಿವೆ. ಹೀಗಾಗಿ ನಿರ್ಮಾಪಕರು ಕೂಡ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಈ ಸಮಯದಲ್ಲೇ ಭರ್ಜರಿ ಸುದ್ದಿಯೊಂದು ಸಿಕ್ಕಿದ್ದು, ಸೋಮವಾರ ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುವುದು ಬಹುತೇಕ ಪಕ್ಕಾ ಆಗುತ್ತಿದೆ. ಹೀಗೆ, ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದಂತೆ 'ಡೆವಿಲ್' ಸಿನಿಮಾ ಶೂಟಿಂಗ್ ಶುರು?

ದರ್ಶನ್ ತೂಗುದೀಪ್‌ಗೆ ಎದುರಾಗಿದ್ದ ಸಂಕಷ್ಟಗಳು ಬಹುತೇಕ ಮುಗಿದು ಹೋಗುತ್ತಿದ್ದು, ಈ ನಟ ಇನ್ನೇನು ಬಳ್ಳಾರಿ ಜೈಲಿನಿಂದ ಹೊರಗೆ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದ್ರಲ್ಲೂ ಇಂದು ದರ್ಶನ್ ತೂಗುದೀಪ್ ಪರವಾಗಿ ವಕೀಲರು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಜಾಮೀನು ಅರ್ಜಿ ವಿಚಾರಣೆಗೆ ಸೋಮವಾರ ಸಮಯ ನಿಗದಿ ಮಾಡಿದೆ ಮಾನ್ಯ ನ್ಯಾಯಾಲಯ. ಅಲ್ಲದೆ ಮತ್ತೊಂದು ಕಡೆ ಸೋಮವಾರವೇ ನಟ ದರ್ಶನ್ ತೂಗುದೀಪ್‌ಗೆ ಜಾಮೀನು ಸಿಗಲಿದ್ದು, ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ, ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದಂತೆ 'ಡೆವಿಲ್' ಸಿನಿಮಾ ಶೂಟಿಂಗ್ ಶುರು?

Devil Movie Shooting Will Start Again After Darshan Thoogudeepa Come Out Of Ballari

'ಡೆವಿಲ್' ಸಿನಿಮಾ ಅಬ್ಬರ ಶುರು?

ದರ್ಶನ್ ತೂಗುದೀಪ್ ಅವರ ಸಿನಿಮಾ ಅಂದ್ರೆ ಒಂದೋ.. ಎರಡೋ ಕೋಟಿ ರೂಪಾಯಿಗೆ ಮುಗಿದು ಹೋಗಲ್ಲ. ದರ್ಶನ್ ತೂಗುದೀಪ್ ಅವರ ಒಂದೊಂದು ಸಿನಿಮಾಗು ಹತ್ತಾರು ಕೋಟಿ ರೂಪಾಯಿ ಬಂಡವಾಳ ಬೇಕು. ಅದರಲ್ಲೂ ಮುಂಬರುವ ಹಲವು ಸಿನಿಮಾಗಳಿಗೆ ದರ್ಶನ್ ತೂಗುದೀಪ್ ಅವರ ಪಾತ್ರಕ್ಕಾಗಿ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕುತ್ತಿದ್ದಾರೆ ನಿರ್ಮಾಪಕರು. ಅದರಲ್ಲೂ 'ಡೆವಿಲ್' ಸಿನಿಮಾದ ಫಸ್ಟ್ ಲುಕ್‌ನ ನೋಡಿಯೇ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಫಿಕ್ಸ್ ಆಗಿದ್ದರು!

ದೇಶಾದ್ಯಂತ 'ಡೆವಿಲ್' ಸಂಚಲನ!

'ಡೆವಿಲ್' ಸಿನಿಮಾ ದೇಶಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆಗುವುದು ಗ್ಯಾರಂಟಿ ಎನ್ನಲಾಗಿತ್ತು. ಆದರೆ ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ದರ್ಶನ್ ತೂಗುದೀಪ್ ಅವರನ್ನ ಜೈಲು ಸೇರುವಂತೆ ಮಾಡಿತ್ತು. ಆದರೆ ಇದೀಗ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗುವ ಸಮಯ ಹತ್ತಿರ ಆಗುತ್ತಿದ್ದು, 'ಡೆವಿಲ್' ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಲಿದೆ ಎಂಬ ಸುದ್ದಿ ಹಬ್ಬಿದೆ!

ಹೀಗಾಗಿ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಉಸಿರು ಬಿಗಿ ಹಿಡಿದು ದರ್ಶನ್ ತೂಗುದೀಪ್ ಬಿಡುಗಡೆ ಆಗುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಮತ್ತೊಂದು ಕಡೆ ಈ ಸುದ್ದಿ 'ಡೆವಿಲ್' ಸಿನಿಮಾ ನಿರ್ಮಾಪಕರು ಸೇರಿದಂತೆ ದರ್ಶನ್ ತೂಗುದೀಪ್ ಅವರ ಮುಂದಿನ ಸಿನಿಮಾದ ನಿರ್ಮಾಪಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಹಾಗೇ ಸಾಲು ಸಾಲು ಸಿನಿಮಾಗಳ ಶೂಟಿಂಗ್ ಶುರುವಾಗಿ ಎಲ್ಲಾ ಸರಿ ಹೋಗುವ ನಿರೀಕ್ಷೆಯಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದ್ದಾರೆ.

ಹೆಂಡತಿ ವಿಜಯಲಕ್ಷ್ಮೀ ಜೊತೆಗೆ ಚರ್ಚೆ?

ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ಅವರ ಬಳಿ ಕೂಡ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ್ದಾರಂತೆ. ಅಲ್ಲದೆ ರೇಣುಕಾಸ್ವಾಮಿ ಪತ್ನಿ & ರೇಣುಕಾಸ್ವಾಮಿ ಅಪ್ಪ & ಅಮ್ಮನ ಆರೋಗ್ಯದ ಬಗ್ಗೆ ಕೂಡ ಮಾಹಿತಿ ಪಡೆದಿದ್ದಾರೆ ಅಂತಾ ಹೇಳಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ನೇರವಾಗಿ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ದರ್ಶನ್ ತೂಗುದೀಪ್ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ. ಹಾಗೇ ಈ ಸಮಯದಲ್ಲಿ ಸಹಾಯ ಕೂಡ ಮಾಡಲಿದ್ದಾರೆ ದರ್ಶನ್ ತೂಗುದೀಪ್ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+