ಯಶ್ ನಮ್ಮಣ್ಣ ಅಂತ ಈ ಕಾರಣಕ್ಕೆ ಎಲ್ಲೂ ಹೇಳಿಕೊಳ್ಳಲ್ಲ: ಕೌಟುಂಬಿಕ ಕಲಹದ ಬಗ್ಗೆ ನಟಿ ದೀಪಿಕಾ ಹೇಳಿದ್ದೇನು?
ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ದೀಪಿಕಾ ದಾಸ್ ಇಬ್ಬರೂ ಸಂಬಂಧದಲ್ಲಿ ಅಣ್ಣ-ತಂಗಿ. ಆದರೆ ಇಬ್ಬರೂ ಕೂಡ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಯಶ್ ತಾಯಿ ಪುಷ್ಪಾ ಅವರು ಇತ್ತೀಚಿನ ಸಂದರ್ಶನದಲ್ಲಿ ದೀಪಿಕಾ ದಾಸ್ ಬಗ್ಗೆ ಕೇಳಿದ ಪ್ರಶ್ನೆಗೆ ಕೋಪದಿಂದ ಮಾತನಾಡಿದ್ದರು. ದೀಪಿಕಾ ದಾಸ್ ಕೂಡ ಗರಂ ಆಗಿ ಪುಷ್ಪ ಅವರಿಗೆ ತಿರುಗೇಟು ನೀಡಿದ್ದರು. ಸಂಬಂಧಿಕರೇ ಆದರೂ ಎರಡೂ ಕುಟುಂಬಗಳ ನಡುವೆ ಏನೋ ವೈಮನಸ್ಸಿದೆ. ಇದೇ ಕಾರಣಕ್ಕೆ ಇವರು ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಯಶ್ ದೊಡ್ಡ ಸ್ಟಾರ್ ಆಗಿದ್ದರೂ ದೀಪಿಕಾ ಎಲ್ಲಿಯೂ ನಮ್ಮಣ್ಣ ಎಂದು ಹೇಳಿಕೊಂಡಿರಲಿಲ್ಲ. ಇದಕ್ಕೆ ಕಾರಣವೇನು ಎಂದು ದೀಪಿಕಾ ಕೊಟ್ಟ ಕ್ಲಾರಿಟಿ ಹೀಗಿತ್ತು.
ಯಶ್ ಹಾಗೂ ದೀಪಿಕಾ ಇಬ್ಬರೂ ತಮ್ಮದೇ ಆದ ಹಾದಿಯಲ್ಲಿ ನಟನಾ ವೃತ್ತಿಯಲ್ಲಿ ಮುಂದುವರಿದು ಸೆಲೆಬ್ರಿಟಿಗಳಾಗಿದ್ದಾರೆ. ಯಶ್-ದೀಪಿಕಾ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದು ಕೂಡ ವಿರಳ, ಈ ವಿಚಾರ ಕೂಡ ಇತ್ತೀಚೆಗಷ್ಟೇ ಹೊರಬಂದಿತ್ತು. ಕೆಲ ತಿಂಗಳ ಹಿಂದೆ ಸಂದರ್ಶನದಲ್ಲಿ ಮಾತನಾಡುವಾಗ ದೀಪಿಕಾ ಅವರು ಈ ಬಗ್ಗೆ ಮೌನ ಮುರಿದಿದ್ದರು. ಯಶ್ ಅವರನ್ನ ಯಾಕೆ ನಮ್ಮಣ್ಣ ಎಂದು ಹೇಳಿಕೊಳ್ಳಲ್ಲ? ಎಂದು ಸ್ಪಷ್ಟನೆ ನೀಡಿದ್ದರು.
'ನಿಜ ಹೇಳಬೇಕಂದ್ರೆ ನಮ್ಮಿಬ್ಬರ ನಡುವೆ ಯಾವುದೇ ಜಗಳ ಅಂತ ಏನಿಲ್ಲ. ಒಬ್ಬರಿಗೊಬ್ಬರು ಚೆನ್ನಾಗೇ ಇದ್ದೀವಿ. ಆದರೆ ಪ್ರೊಫೆಶನ್ ಅಂತ ಬಂದಾಗ, ಇಬ್ಬರ ಗುರಿ ಕೂಡ ಬೇರೆ ಬೇರೆ ಇಟ್ಟುಕೊಳ್ಳೋಕೆ ಇಷ್ಟಪಡುತ್ತೇವೆ. ನಾವಿಬ್ಬರೂ ಒಬ್ಬರಿಗೊಬ್ಬರು ಗೌರವ ಕೊಡ್ತೀವಿ. ನನಗೆ ಮೊದಲಿನಿಂದಲೂ ನಾನು ಎಲ್ಲೂ ಕೂಡ ಈ ತರ ಯಶ್ ತಂಗಿ ಅಂತೆ, ದೀಪಿಕಾಗೆ ಯಶ್ ಅಣ್ಣ ಅಂತೆ, ಇವರ ಅಮ್ಮ ಅಂತೆ ಅನ್ನೋದು ನನಗೆ ಇಷ್ಟ ಇರಲಿಲ್ಲ. ಮೊದಲಿನಿಂದಲೂ ಹೀಗೆ ಇದ್ದೆ, ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ' ಎಂದು ದೀಪಿಕಾ ಹೇಳಿದ್ದರು.

'ನಾನು ಏನಾದರೂ ಒಳ್ಳೆಯ ಕೆಲಸ ಮಾಡಿದಾಗ ಅವರು ನನಗೆ ಪ್ರಶಂಸೆ ಕೊಡಲ್ಲ ಅಂತೇನಿಲ್ಲ. ನನಗೆ ಏನಾದ್ರೂ ಹೇಳಬೇಕು ಅಂದ್ರೂ ಅಷ್ಟೇ, ಹೇಳಲ್ಲ ಅಂತ ಏನಿಲ್ಲ. ಆದರೆ ಅದನ್ನ ಎಲ್ಲಿಯೂ ಪಬ್ಲಿಕ್ ಮಾಡಿಕೊಳ್ಳೋಕೆ ನಮಗೆ ಇಷ್ಟ ಇರಲಿಲ್ಲ. ಅದನ್ನು ಬಿಟ್ಟರೆ ನಮ್ಮಿಬ್ಬರ ನಡುವೆ ಬೇರೆ ಏನೂ ಇಲ್ಲ' ಎಂದಿದ್ದರು ದೀಪಿಕಾ.
'ನಮ್ಮಿಂದ ಏನಾದ್ರೂ ಒಳ್ಳೆದಾದ್ರೆ ಜನ ಹೇಗೆ ತಗೋತಾರೋ, ಹಾಗೆಯೇ ಸಮಸ್ಯೆಯಾದಾಗ ನೆಗೆಟಿವ್ ಆಗಿ ತಗೋತಾರೆ ಅನ್ನೋದು ನನ್ನ ಅಭಿಪ್ರಾಯ. ನಮ್ಮಿಂದ ಒಳ್ಳೆಯದು ಆಗದಿದ್ರೂ ಪರವಾಗಿಲ್ಲ, ಕೆಟ್ಟದ್ದು ಆಗಬಾರದು. ನಾನೂ ಒಂದು ದಿನ ಆ ಮಟ್ಟಕ್ಕೆ ಬೆಳೆಯಬೇಕು. ನನಗೂ ಒಳ್ಳೆಯ ಟೈಮ್ ಅಂತ ಬಂದಾಗ ಎಲ್ಲವೂ ಕ್ಲಿಯರ್ ಆಗಿ ಕಾಣಿಸಬಹುದೇನೋ, ಅಲ್ಲಿವರೆಗೆ ನಾವು ನಮ್ಮ ಲೈಫ್‌ನ ತುಂಬಾ ಪ್ರೈವೇಟ್ ಆಗಿ ಇಟ್ಟುಕೊಳ್ಳೋಕೆ ಇಷ್ಟಪಡ್ತೀನಿ' ಎಂದು ಕ್ಲಾರಿಟಿ ಕೊಟ್ಟಿದ್ದರು.
'ಯಶ್ ನನಗೆ ಸ್ಫೂರ್ತಿ'
'ಬಾಲ್ಯದಲ್ಲಿ ಇಬ್ಬರೂ ಬೇರೆ ಬೇರೆ ಜಿಲ್ಲೆಗಳಲ್ಲಿ ಇದ್ದಿದ್ದು, ಶುಭಸಮಾರಂಭಗಲ್ಲಿ ಭೇಟಿಯಾಗ್ತಿದ್ವಿ. ಅವರು ಮೈಸೂರು, ನಾವು ಹಾಸನದಲ್ಲಿದ್ವಿ. ಆಗಾಗ ಭೇಟಿಯಾಗುತ್ತಿದ್ದೆವು. ಯಶ್ ನನಗೆ ತುಂಬಾ ದೊಡ್ಡ ಸ್ಫೂರ್ತಿ, ಅವರ ನಟನೆ, ಗುರಿ ಎಲ್ಲವೂ ನನಗೆ ಪ್ರೇರಣೆ ನೀಡುತ್ತೆ. ಇಬ್ಬರೂ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ಖುಷಿ ಇದೆ' ಎಂದಿದ್ದರು. ಆದರೆ ಇತ್ತೀಚೆಗೆ ಯಶ್ ತಾಯಿ ಪುಷ್ಪ ಅವರು ಸಂದರ್ಶನದಲ್ಲಿ 'ದೀಪಿಕಾ ಏನ್ ದೊಡ್ಡ ನಟಿನಾ?' ಎಂದಿದ್ರು. 'ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ' ಎಂದು ದೀಪಿಕಾ ಪೋಸ್ಟ್ ಮೂಲಕ ಕೌಂಟರ್ ಕೊಟ್ಟಿದ್ದರು.












Click it and Unblock the Notifications