Deepika Das: ಯಶ್‌ ತಂಗಿ ಎಂದು ನಟಿ ದೀಪಿಕಾ ದಾಸ್‌ ಎಲ್ಲಿಯೂ ಹೇಳಿಕೊಂಡಿಲ್ಲ ಯಾಕೆ?

ನಾಗಿಣಿ ಧಾರಾವಾಹಿ ಹಾಗೂ ಬಿಗ್‌ಬಾಸ್ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ದೀಪಿಕಾ ದಾಸ್ ಮದುವೆಯ ನಂತರ ಕೆಲವು ದಿನಗಳು ಕ್ಯಾಮರಾ ಮುಂದೆ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಸದ್ಯ ತಮ್ಮ ವೃತ್ತಿ ಜೀವನ ಅಂದರೆ ನಟನೆಗೆ ಕಮ್‌ಬ್ಯಾಕ್ ಮಾಡಿರುವ ದೀಪಿಕಾ ದಾಸ್ #ಪಾರು ಪಾರ್ವತಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ದೀಪಿಕಾ #ಪಾರು ಪಾರ್ವತಿ ಸಿನಿಮಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.

ಸಿನಿಮಾ ಪ್ರಚಾರದ ಜೊತೆಗೆ ನಟಿ ದೀಪಿಕಾ ದಾಸ್ ಸಂದರ್ಶನಗಳನ್ನು ನೀಡುತ್ತಿದ್ದು, ಇದೀಗ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ನಟಿ ದೀಪಿಕಾ ದಾಸ್ ಕನ್ನಡ ಚಿತ್ರರಂಗದ ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಂಗಿ ಎನ್ನುವುದು ಬಹುತೇಕರಿಗೆ ಗೊತ್ತು. ಆದರೆ ನಟಿ ದೀಪಿಕಾ ದಾಸ್ ಎಲ್ಲಿಯೂ ಈ ವಿಚಾರವನ್ನು ಹೇಳಿಕೊಂಡಿಲ್ಲ. ಜೊತೆಯಲ್ಲಿ ಕಾಣಿಸಿಕೊಂಡಿಲ್ಲ.

Deepika Das Addresses Relationship with Brother Yash No Family Dispute

ಹೀಗಾಗಿ ಇಬ್ಬರೂ ಒಂದೇ ಕ್ಷೇತ್ರದಲ್ಲಿ ಇದ್ದರೂ ಸಹ ದೀಪಿಕಾ ದಾಸ್, ನಟ ಯಶ್‌ ತನ್ನ ಅಣ್ಣ, ನಟಿ ರಾಧಿಕಾ ಪಂಡಿತ್‌ ಅತ್ತಿಗೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಅಲ್ಲದೇ ಎರಡು ಕುಟುಂಬಗಳಲ್ಲಿ ಎಲ್ಲವೂ ಸರಿ ಇಲ್ವಾ? ಎನ್ನುವ ಪ್ರಶ್ನೆ ಕೂಡ ಉದ್ಭವವಾಗಿತ್ತು. ಇದೀಗ ಮೊದಲ ಬಾರಿಗೆ ದೀಪಿಕಾ ದಾಸ್ ಈ ಬಗ್ಗೆ ಮಾತನಾಡಿದ್ದಾರೆ.

ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ನಟಿ ದೀಪಿಕಾ ದಾಸ್, 'ನಮ್ಮ ನಡುವೆ ಜಗಳ ಅಂತಾ ಏನಿಲ್ಲ. ನಾವು ಚೆನ್ನಾಗಿದ್ದೇವೆ. ಇಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿದ್ದೇವೆ. ಆದರೆ ವೃತ್ತಿ ಜೀವನದಲ್ಲಿ ಇಬ್ಬರು ಭಿನ್ನವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತೇವೆ. ನಮ್ಮ ನಡುವೆ ಪರಸ್ಪರ ಗೌರವ ಇದೆ. ನಾನು ಮೊದಲಿನಿಂದಲೂ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ಮಾಡಿದ್ದೆ. ಅಣ್ಣ, ತಂಗಿ, ಅಮ್ಮ ಎನ್ನುವುದೆಲ್ಲಾ ವೃತ್ತಿ ಜೀವನದಲ್ಲಿ ಬರುವುದು ನನಗೆ ಇಷ್ಟ ಇರಲಿಲ್ಲ. ಮೊದಲಿನಿಂದಲೂ ಇದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ಈಗಲೂ ಕೂಡ ಅದನ್ನೇ ಮುಂದುವರಿಸಿಕೊಂಡು ಬಂದಿದ್ದೇನೆ ಅಷ್ಟೇ' ಎಂದರು.

Deepika Das Addresses Relationship with Brother Yash No Family Dispute

'ಇನ್ನು ನಾನು ಒಳ್ಳೆಯ ಶೋ ಮಾಡಿದಾಗ ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ಕೊಡಲ್ಲ ಅಂತೇನಿಲ್ಲ. ಏನಾದರೂ ಹೇಳಬೇಕು ಅಂದರೆ ಹೇಳಲ್ಲ ಅಂತೇನಿಲ್ಲ. ಆದರೆ ಎಲ್ಲಿಯೂ ಕೂಡ ಅದನ್ನು ಪಬ್ಲಿಕ್‌ ಮಾಡಿಕೊಳ್ಳಲು ನಮಗೆ ಇಷ್ಟ ಇಲ್ಲ. ಇದನ್ನು ಹೊರತುಪಡಿಸಿ ಬೇರೆ ಏನೂ ಕಾರಣ ಇಲ್ಲ. ನಮ್ಮಿಂದ ಏನಾದರೂ ಒಳ್ಳೆಯದಾದರೆ ಜನ ಹೇಗೆ ತೆಗೆದುಕೊಳ್ಳುತ್ತಾರೋ, ಅದೇ ರೀತಿ ತಪ್ಪೇನಾದರೂ ಆದಾಗ ನೆಗೆಟಿವ್‌ ಹೋಗುವ ಸಾಧ್ಯತೆ ಕೂಡ ಇರುತ್ತದೆ. ಈ ಒಂದು ದೃಷ್ಟಿಯಿಂದ ನಾನು ನನ್ನಿಂದ ಒಬ್ಬರಿಗೆ ಒಳ್ಳೆಯದು ಆಗದಿದ್ದರೂ ತೊಂದರೆ ಇಲ್ಲ. ಕೆಟ್ಟದಾಗಬಾರದು. ಒಳ್ಳೆಯದು ಕೆಟ್ಟದು ಇಲ್ಲೇ ಇರಲಿ' ಎಂದು ಹೇಳಿದರು.

'ನಾನು ಒಂದು ದಿನ ಆ ಸ್ಥಾನಕ್ಕೆ ಬರಬೇಕು. ನಮಗೂ ಒಂದು ಸಮಯ ಅಂತಾ ಬಂದಾಗ ಬಹುಶಃ ಜನರಿಗೆ ಎಲ್ಲವೂ ಸ್ಪಷ್ಟವಾಗಿ ಕಾಣಬಹುದೇನೋ. ಆದರೆ ಅಲ್ಲಿ ತನ ಜೀವನವನ್ನು ತುಂಬಾ ಪ್ರೈವೇಟ್‌ ಆಗಿ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ನನ್ನ ಹಾಗೂ ಯಶ್‌ ಅವರ ನಡುವೆ ಬಾಲ್ಯದ ನೆನಪು ಅಂತೇನಿಲ್ಲ. ಅವರೇ ಬೇರೆ ಕಡೆಯಲ್ಲಿದ್ದರು, ನಾವು ಬೇರೆ ಕಡೆ ಇದ್ದೇವು. ಆಗಾಗ ಮನೆಯ ಕಾರ್ಯಕ್ರಮದಲ್ಲಿ ಭೇಟಿಯಾಗುತ್ತಿದ್ದೆವು' ಎಂದು ದೀಪಿಕಾ ದಾಸ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+