ಸಂಕ್ರಾಂತಿ ಸಂಭ್ರಮದಲ್ಲಿ 'ದಿ' ಸಿನಿಮಾ ಹಾಡು ರಿಲೀಸ್!
ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಈಗ ಹೊಸಬರ ಆಗಮನದಿಂದ ಹೊಸತನ ಶುರುವಾಗಿದೆ. ವೆರೈಟಿ, ವೆರೈಟಿ ಕಥಾಹಂದರ ಇರುವ ಸಿನಿಮಾ ಮೂಲಕ ಯುವ ತಂಡ, ಪ್ರೇಕ್ಷಕರ ಎದುರು ಹಾಜರಾಗ್ತಿದ್ದಾರೆ. ಅದೇ ರೀತಿ ಹೊಸಬರ ಸಿನಿಮಾ 'ದಿ' ಕೂಡ ಈಗ ಸದ್ದು ಮಾಡುತ್ತಿದೆ. ತನ್ನ ಮೊದಲ ಹಾಡಿನ ಮೂಲಕ ಸಂಕ್ರಾಂತಿ ಹಬ್ಬವನ್ನೂ ಈ ಸಿನಿಮಾ ತಂಡ ಸಂಭ್ರಮಿಸಿದೆ.
'ದಿ' ಚಿತ್ರ ಮೂಲಕ, ವಿನಯ್ ನಾಯಕನಾಗಿ & ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ವರ್ಷ ಅನುಭವ ಇರುವ ಅವರು ದಿ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಈ ಸಿನಿಮಾದ 'ನಾನು ಮೌನಿ' ಎಂಬ ಮೆಲೋಡಿ ಸಾಂಗ್ ಈಗ ಬಿಡುಗಡೆ ಆಗಿದೆ. ಕವಿರಾಜ್ ಸಾಹಿತ್ಯದ ಈ ಹಾಡಿಗೆ, ಸಾಯಿ ವಿಘ್ನೇಶ್ ಧ್ವನಿಯಾಗಿದ್ದರೆ. ಯುಎಂ ಸ್ಟೀವನ್ ಸತೀಶ್ ಸಂಗೀತ ನೀಡಿದ್ದರೆ. ನಾನು ಮೌನಿ ಅಂತಾ ವಿನಯ್ ಹಾಗೂ ದಿಶಾ ರಮೇಶ್ ಸಾಂಗ್‌ನಲ್ಲಿ ಮಿಂಚಿದ್ದಾರೆ.

ಸಿನಿಮಾದ ತಾರಾಬಳಗ ಹೇಗಿದೆ?
ಅಂದಹಾಗೆ 'ದಿ' ಸಿನಿಮಾ ತನ್ನ ಟೈಟಲ್ ಮೂಲಕ ಗಮನ ಸೆಳೆದಿತ್ತು. ಇದರ ಜತೆಗೆ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ದಿ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿ ಖ್ಯಾತಿ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾ ಬಳಗ ಈ ಚಿತ್ರದಲ್ಲಿದೆ. ಹೀಗಾಗಿ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈಗ ಹಾಡಿನ ಮೂಲಕ ಶುಭಾರಂಭ ಮಾಡೋಕೆ ಚಿತ್ರತಂಡ ಸಿದ್ಧತೆ ನಡೆಸಿದೆ.
ರಾಜ್ಯದ ವಿವಿಧೆಡೆ ಶೂಟಿಂಗ್
ವಿಡಿಕೆ ಸಿನಿಮಾಸ್ ಬ್ಯಾನರ್ ಅಡಿ 'ವಿಡಿಕೆ' ಗ್ರೂಪ್ 'ದಿ' ಚಿತ್ರ ನಿರ್ಮಾಣ ಮಾಡಿದೆ. ಹಾಗೇ ತುಮಕೂರು, ಮೈಸೂರು, ಮೂಡಿಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ & ಬೆಂಗಳೂರು, ಕೇರಳದಲ್ಲಿ 'ದಿ' ಶೂಟಿಂಗ್ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ, ಕವಿರಾಜ್ & ವಿನಯ್ ಸಾಹಿತ್ಯ, ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಈ ಸಿನಿಮಾಗೆ ಇದೆ.

ದಿ ಸಿನಿಮಾಗೆ ವಿನಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ರೆ ಸಿಂಪಲ್ ಸುನಿ ಈ ಹಿಂದೆ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದರು. ಸದ್ಯ ಪ್ರಚಾರದ ಅಖಾಡಕ್ಕೆ ಧುಮುಕಿರುವ ಚಿತ್ರತಂಡ ಶೀಘ್ರದಲ್ಲೇ ದಿ ಸಿನಿಮಾವನ್ನ ತೆರೆಗೆ ತರಲಿದೆ. ಇದರ ಭಾಗವಾಗಿಯೇ ಇದೀಗ ಸಾಂಗ್ ರಿಲೀಸ್ ಮಾಡಿದೆ ಸಿನಿಮಾ ತಂಡ.












Click it and Unblock the Notifications