Darshan Thoogudeepa: ನಮ್ಮ ಅಣ್ಣ ಒಳ್ಳೆಯವನು, ಆದ್ರೆ ನೀವೇ... ಮೀಡಿಯಾ ವಿರುದ್ಧ ರೊಚ್ಚಿಗೆದ್ದ ಡಿ-ಬಾಸ್ ತಮ್ಮ!
ದರ್ಶನ್ ತೂಗುದೀಪ್ & ದಿನಕರ್ ತೂಗುದೀಪ್ ಇಬ್ಬರೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ದರ್ಶನ್ & ದಿನಕರ್ ಒಟ್ಟಿಗೆ ಮಾಡಿದ್ದ ಸಿನಿಮಾಗಳು ಬಾಕ್ಸ್ ಆಫಿಸ್ ಅಖಾಡದಲ್ಲಿ ಸಂಚಲನ ಸೃಷ್ಟಿ ಮಾಡಿದ್ದವು. ಇಷ್ಟೆಲ್ಲದರ ನಡುವೆ, ಇಬ್ಬರ ಮಧ್ಯೆ ಗ್ಯಾಪ್ ಆಗಿದ್ದು. ರೇಣುಕಾಸ್ವಾಮಿ ಕೊಲೆ ಕೇಸ್ ಸಮಯದಲ್ಲಿ ಮತ್ತೆ ಅಣ್ತಮ್ಮ ಒಂದಾಗಿದ್ದಾರೆ. ಹೀಗಿದ್ದಾಗಲೇ, ನಮ್ಮ ಅಣ್ಣ ಒಳ್ಳೆಯವನು ಆದ್ರೆ ನೀವೇ... ಮೀಡಿಯಾ ವಿರುದ್ಧ ರೊಚ್ಚಿಗೆದ್ದ ಡಿ-ಬಾಸ್ ತಮ್ಮ!
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ & ಮಾಧ್ಯಮಗಳ ನಡುವೆ ದೊಡ್ಡ ಗಲಾಟೆ ಆಗಿ ಕೊನೆಗೆ ದರ್ಶನ್ ತೂಗುದೀಪ್ ಅವರನ್ನು ಮಾಧ್ಯಮಗಳು ಬ್ಯಾನ್ ಕೂಡ ಮಾಡಿದ್ದವು. ಈ ರೀತಿ ಆಗಲು ಕಾರಣವಾಗಿದ್ದು, ಅದೊಂದು ಆಡಿಯೋ. ದರ್ಶನ್ ತೂಗುದೀಪ್ ಅವರು ಆ ಆಡಿಯೋದಲ್ಲಿ ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ಧ ಬಳಸಿ ಕೆಟ್ಟದಾಗಿ ಮಾತನಾಡಿದ್ದರೆಂಬ ಆರೋಪ ಕೇಳಿ ಬಂದಿತ್ತು.

ಮೀಡಿಯಾ ವಿರುದ್ಧ ದರ್ಶನ್ & ದಿನಕರ್....
ಇಷ್ಟೆಲ್ಲದರ ನಡುವೆ ಮತ್ತೆ ಡಿ-ಬಾಸ್ ದರ್ಶನ್ & ಮಾಧ್ಯಮಗಳ ನಡುವೆ ರಾಜಿ, ಸಂಧಾನ ನಡೆದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಬಳ್ಳಾರಿ ಜೈಲು ಸೇರಿದ ನಂತರ ಮತ್ತೆ ದರ್ಶನ್ ತೂಗುದೀಪ್ & ಮೀಡಿಯಾಗಳ ನಡುವೆ ಕಿಚ್ಚು ಹೊತ್ತಿ ಕೊಂಡಿದೆಯಾ? ಎಂಬ ಪ್ರಶ್ನೆ ಮೂಡಿದೆ.
ಯಾಕಪ್ಪಾ ಈ ಪ್ರಶ್ನೆ ಅಂದ್ರೆ ಇಷ್ಟು ದಿನ ಅಣ್ಣ ದರ್ಶನ್ ತೂಗುದೀಪ್ ಅವರು ಮೀಡಿಯಾಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕಿ ಕೋಪ ಮಾಡಿಕೊಳ್ಳುತ್ತಿದ್ದರು. ಆದ್ರೆ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ಕೂಡ ಮೀಡಿಯಾಗಳ ವಿರುದ್ಧ ರೊಚ್ಚಿಗೆದ್ದಿದ್ದಾರೆ! ಇದು ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದೆ.
ತೂಗುದೀಪ್ ಕುಟುಂಬ & ಮಾಧ್ಯಮಗಳ ತಿಕ್ಕಾಟ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಮ್ಮ ದಿನಕರ್ ತೂಗುದೀಪ್ ತಮ್ಮ ನಿರ್ದೇಶನದಲ್ಲಿ ಮೂಡಿ ಬಂದಿರುವ ಹೊಸ ಸಿನಿಮಾ ಪ್ರಮೋಷನ್ ಮಾಡ್ತಾ ಇದ್ದಾರೆ. ಈ ವೇಳೆ, ದಿನಕರ್ ತೂಗುದೀಪ್ ಅವರು ಟಿವಿ ಮಾಧ್ಯಮಗಳಿಗೆ ಚುಟುಕು ಸಂದರ್ಶನ ನೀಡಿದ್ದಾರೆ. ಆದರೆ ತಮ್ಮ ಅಣ್ಣನ ಬಗ್ಗೆ, ಮಾಧ್ಯಮಗಳು ರೊಚ್ಚಿಗೆಬ್ಬಿಸುವ ಕೆಲಸವನ್ನ ಮಾಡಿವೆ ಅಂತಾನೂ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ಸಮಯದಲ್ಲಿ, ದಿನಕರ್ ತೂಗುದೀಪ್ ಅವರ ಮಾತುಗಳಿಗೂ ಅತ್ತ ಟಿವಿ ಮಾಧ್ಯಮದ ಪ್ರತಿನಿಧಿಗಳು ತಿರುಗೇಟು ನೀಡುವ ಪ್ರಯತ್ನ ಮಾಡಿದ್ದು. ಈ ಮೂಲಕ ತೂಗುದೀಪ್ ಕುಟುಂಬ & ಮಾಧ್ಯಮಗಳ ನಡುವೆ ಮತ್ತೊಂದು ಸುತ್ತಿನ ಫೈಟ್ ಶುರುವಾಯ್ತಾ? ಅನ್ನೋ ಅನುಮಾನ ಮೂಡಿ ಸೋಷಿಯಲ್ ಮೀಡಿಯಾದಲ್ಲಿ ಈಗ ಚರ್ಚೆ ಜೋರಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ.












Click it and Unblock the Notifications