Darshan Thoogudeepa: ಡೆವಿಲ್ 2ನೇ ಶೂಟಿಂಗ್ ಶೆಡ್ಯೂಲ್ ಯಾವಾಗ? ಈ ಎಲ್ಲಾ ರಾಜ್ಯಗಳಿಗೆ ಡಿ-ಬಾಸ್ ಪ್ರಯಾಣ..

ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತರಾದ ದರ್ಶನ್ ತೂಗುದೀಪ ಕಿಲ್ಲಿಂಗ್ ಸ್ಟಾರ್ ಅಂತ ಕರೆಸಿಕೊಳ್ಳುವಂತಾಗಿದ್ದು ವಿಧಿಯಾಟವೇ ಸರಿ. ದರ್ಶನ್ ಜೈಲುಪಾಲಾದಾಗ ಡೆವಿಲ್ ಸಿನಿಮಾ ಬಗ್ಗೆ ಎಷ್ಟೋ ಜನ ಮಾತನಾಡಿಕೊಂಡಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ದರ್ಶನ್ ಬೇಲ್ ಮೇಲೆ ಹೊರಬಂದಿದ್ದಾರೆ. ಬೆನ್ನು ನೋವಿದ್ದರೂ ನಿರ್ಮಾಪಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ.

ಹೌದು.. ಅಂದಹಾಗೆ ಡೆವಿಲ್ ಹತ್ತು ತಿಂಗಳ ನಂತರ ಕಿಕ್ ಸ್ಟಾರ್ಟ್ ಆಗಿದೆ. ಈ ವರ್ಷದ ಆರಂಭದ ದಿನವೇ ದರ್ಶನ್ ಸಿನಿಮಾ ಡಬ್ಬಿಂಗ್ ಶುರು ಮಾಡಿದ್ದರು. ಇದೀಗ ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ. ಮಾರ್ಚ್ 12 ರಿಂದ ಮೂರು ದಿನ ಡೆವಿಲ್ ಶೂಟಿಂಗ್ ಮುಗಿಸಿದ್ದ ದಾಸ ಎರಡನೇ ಹಂತದ ಶೂಟಿಂಗ್ ಗಾಗಿ ತಯಾರಿ ಕೂಡ ನಡೆಸಿದ್ದಾರೆ. ಆಕ್ಷನ್ ಸೀನ್ ಬದಿಗಿಟ್ಟು ಬೇರೆ ಸಿನಿಮಾ ಭಾಗವನ್ನು ಒಂದೊಂದಾಗಿ ಪೂರ್ಣಗೊಳಿಸುತ್ತಿದ್ದಾರೆ.

Darshan Thoogudeepa will travel to all these states for the Devil Cinema Shooting

ಕನ್ನಡ ಅಭಿಮಾನಿಗಳ ನೆಚ್ಚಿನ ನಟ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ದರ್ಶನ್ ತೂಗುದೀಪ್. ಅವರ ವೈಯಕ್ತಿಕ ಜೀವನದಲ್ಲಿ ಏನೇ ನಡೆದಿದ್ದರೂ ಕೂಡ ಅಭಿಮಾನಿಗಳ ದರ್ಶನ್ ಮೇಲಿರುವ ಪ್ರೀತಿ ಮಾತ್ರ ಒಂದಿಷ್ಟು ಕೂಡ ಕಡಿಮೆ ಆಗಿಲ್ಲ. ಹೀಗಾಗಿ ದರ್ಶನ್ ಅವರ ಅಭಿಮಾನಿಗಳನ್ನು ರಂಜಿಸಲು ತಡ ಮಾಡಲು ಬಯಸುತ್ತಿಲ್ಲ. ಅರ್ಧಕ್ಕೆ ನಿಂತು ಹೋಗಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಅನ್ನು ಮತ್ತೆ ಆರಂಭಿಸಿದ್ದಾರೆ.

ಬೇರೆ ರಾಜ್ಯದಲ್ಲಿ ಡೆವಿಲ್ ಶೂಟಿಂಗ್

ಪ್ರಸ್ತುತ ದರ್ಶನ್ ಡೆವಿಲ್ ಸಿನಿಮಾದ ಎರಡನೇ ಹಂತದ ಶೂಟಿಂಗ್ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾದ ಸಾಧ್ಯತೆ ಕೂಡ ಇದೆ. ಡೆವಿಲ್ ಸಿನಿಮಾ ಶೂಟಿಂಗ್ ಶುರುಮಾಡಿದ ದರ್ಶನ್ ಈ ಹಿಂದೆ ಯಾವುದೇ ಸಿನಿಮಾ ಶೂಟಿಂಗ್ ಮಾಡಲು ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದರು.

ಆದರೀಗ ಭಾರತ ಬಿಟ್ಟು ದರ್ಶನ್ ಬೇರೆ ದೇಶಗಳಿಗೆ ಹೋಗುವಂತಿಲ್ಲ. ಒಂದು ವೇಳೆ ಹೋದರೂ ಕೂಡ ಅದಕ್ಕೆ ಕೋರ್ಟ್ ಅನುಮತಿ ನೀಡಬೇಕು. ಆದರೆ ಸದ್ಯ ಕೋರ್ಟ್ ಗೋಜಿಗೆ ಹೋಗದೆ ಭಾರತದಾದ್ಯಂತ ಶೂಟಿಂಗ್‌ಗಾಗಿ ತೆರಳು ಅನುಮತಿ ಪಡೆದಿದ್ದ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ಏಪ್ರಿಲ್ ತಿಂಗಳಲ್ಲಿ ಬೇರೆ ರಾಜ್ಯಗಳಿಗೆ ಹೋಗುವ ಸಾಧ್ಯತೆ ಇದೆ.

ದರ್ಶನ್ ಏಪ್ರಿಲ್ ನಂತರ ಹೊರ ರಾಜ್ಯಕ್ಕೆ ಫ್ಲೈಟ್ ಹತ್ತಲು ಕಾತುರರಾಗಿದ್ದಾರೆ. ಬಹುತೇಕ ದರ್ಶನ್ ಸಿನಿಮಾ ಸಾಂಗ್ ಹೊರ ದೇಶದಲ್ಲಿ ನಡೆಯುತ್ತಿದ್ದವು. ಇದೀಗ ಅದಕ್ಕೆ ಅವಕಾಶ ಇಲ್ಲ. ಹೀಗಾಗಿ ಭಾರತದಲ್ಲೇ ದರ್ಶನ್ ಸಿನಿಮಾ ಶೂಟ್ ನಡೆಯಲಿದೆ.

ಇನ್ನೂ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ದರ್ಶನ್ ರಾಜಸ್ಥಾನ, ಜೈಪುರಕ್ಕೆ ತೆರಳುವ ಸಾಧ್ಯತೆ ಇದೆ. ಇದಕ್ಕೆ ಪ್ರಕಾಶ್ ತಂಡ ಶೂಟಿಂಗ್ ಮಾಡಲು ತಯಾರಿ ನಡೆಸಿದೆಯಂತೆ. ಇದಕ್ಕಾಗಿ ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ದರ್ಶನ್ ಹೊರ ರಾಜ್ಯಕ್ಕೆ ಪ್ರಯಾಣ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷ ಅಂತ್ಯಕ್ಕೆ ಅಥವಾ ಮುಂದಿನ ಸಂಕ್ರಾಂತಿಗೆ ಡೆವಿಲ್ ಅರ್ಭಟ ಶುರುವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+