Darshan Thoogudeepa: ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದ ದರ್ಶನ್ ತೂಗುದೀಪ್ ಮಾಡಿದ್ದು ಏನು?
ದರ್ಶನ್ ತೂಗುದೀಪ್ ಬದಲಾಗುತ್ತಿದ್ದು, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕೋಣೆಗಳಲ್ಲಿ ಈಗ ದಾಸ ದರ್ಶನ್‌ಗೆ ಜ್ಞಾನೋದಯ ಆಗುತ್ತಿರುವಂತೆ ಕಾಣುತ್ತಿದೆ. ಯಾಕಂದ್ರೆ ಪವಿತ್ರಾ ಗೌಡ ಮಾತು ಕೇಳಿ ದರ್ಶನ್ ಈಗ ದುಃಸ್ಥಿತಿಗೆ ಬಂದು ತಲುಪಿದ್ದಾರೆ ಎಂಬ ಗಂಭೀರ ಆರೋಪ ಇದೆ. ಅಲ್ಲದೆ, ಪವಿತ್ರಾ ಗೌಡ ಕಾರಣಕ್ಕೆ ದರ್ಶನ್ ತೂಗುದೀಪ್ ಜೈಲಿಗೆ ಕೂಡ ಹೋಗುವ ಪರಿಸ್ಥಿತಿ ಎದುರಾಗಿದೆ. ಹೀಗಿದ್ದಾಗಲೇ ಪವಿತ್ರಾ ಗೌಡ ವಿರುದ್ಧ ರೊಚ್ಚಿಗೆದ್ದಿರುವ ದರ್ಶನ್ ತೂಗುದೀಪ್ ಸಿಟ್ಟಲ್ಲಿ ಮಾಡಿದ ಆ ಕೆಲಸ ಏನು ಗೊತ್ತಾ?
ದರ್ಶನ್ ತೂಗುದೀಪ್ ಕೋಟಿ ಕೋಟಿ ಸಂಪಾದನೆ ಮಾಡಿದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ಗತ್ತು ಕಾಪಾಡಿಕೊಂಡು ಬಂದಿದ್ದರು. ಆದರೆ ಯಾರ ಯಾರದ್ದೋ ಮಾತು ಕೇಳಿ, ಸಹವಾಸ ದೋಷದಿಂದ ನಟ ದರ್ಶನ್ ತೂಗುದೀಪ್ ಹಾಳಾಗಿ ಹೋಗಿದ್ದಾರೆ ಎಂಬ ಆರೋಪ ಇದೆ. ಹೀಗೆ ಇಂತಹ ಆರೋಪಗಳ ನಡುವೆ ಇದೀಗ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ, ರೇಣುಕಾಸ್ವಾಮಿ ಎಂಬಾತನನ್ನ ಕೊಲೆ ಮಾಡಿರುವ ಆರೋಪ ದರ್ಶನ್ & ಗ್ಯಾಂಗ್‌ನ ವಿರುದ್ಧ ಕೇಳಿಬಂದಿದೆ. ಪರಿಸ್ಥಿತಿ ಹೀಗಿದ್ದಾಗಲೇ ಇಷ್ಟೆಲ್ಲಾ ಅವಾಂತರಕ್ಕೆ ಪವಿತ್ರಾ ಗೌಡ ಕಾರಣ ಎಂದು ರೊಚ್ಚಿಗೆದ್ದಿರುವ ದರ್ಶನ್ ತೂಗುದೀಪ್ ಮಾಡಿರುವ ಕೆಲಸ ಏನು ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಪವಿತ್ರಾ ಗೌಡ ವಿರುದ್ಧ ದರ್ಶನ್ ಸೇಡು?
ಹೌದು, ನಟ ದರ್ಶನ್ ಹಾಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿಕೊಂಡು & ದುಡ್ಡು ಮಾಡಿಕೊಂಡು ಇದ್ದರು ಇದರ ಜೊತೆ ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಲಾಭ ಮಾಡುವಷ್ಟು ದೊಡ್ಡ ದೊಡ್ಡ ಸಿನಿಮಾಗಳನ್ನು ದರ್ಶನ್ ತೂಗುದೀಪ್ ರೆಡಿ ಮಾಡ್ತಿದ್ರು. ಆದರೆ ಆಗಿದ್ದೆಲ್ಲಾ ಉಲ್ಟಾ, ಪವಿತ್ರಾ ಗೌಡ ಮಾತು ಕೇಳಿ ಹಾಳಾಗಿ ಹೋದೆ ಅನ್ನೋ ನೋವು & ಕೋಪ ಈಗ ನಟ ದರ್ಶನ್ ತೂಗುದೀಪ್ ಅವರಿಗೆ ಕಾಡುತ್ತಿದೆ ಎನ್ನಲಾಗಿದೆ. ಇದೇ ಕಾರಣದಿಂದ ಪವಿತ್ರಾ ಗೌಡ ಸಹವಾಸವೇ ಬೇಡ ಅನ್ನೋ ತೀರ್ಮಾನಕ್ಕೆ ನಟ ದರ್ಶನ್ ಬಂದಿದ್ದಾರೆ ಎನ್ನಲಾಗಿದೆ.
ದರ್ಶನ್ ತೂಗುದೀಪ್ ನರಳಾಟ
ಪವಿತ್ರಾ ಗೌಡ ಸಹವಾಸ ಬಿಟ್ಟು, ಭವಿಷ್ಯದಲ್ಲಿ ಪವಿತ್ರಾ ಜೊತೆಗೆ ಮಾತನಾಡುವುದು ಕೂಡ ಬೇಡ ಅಂತಾ ನಟ ದರ್ಶನ್ ತೂಗುದೀಪ್ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ನಟ ದರ್ಶನ್ ಹೀಗೆಲ್ಲಾ ಯಾಕೆ ನಿರ್ಧಾರ ಕೈಗೊಂಡಿದ್ದಾರೆ? ನಿಜವಾಗಿಯೂ ದರ್ಶನ್ ಪವಿತ್ರಾ ಗೌಡ ಜೊತೆಗೆ ಮಾತನ್ನೇ ಆಡಲ್ವಾ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜೈಲಿನಲ್ಲಿ ಮಾತ್ರ ನಟ ದರ್ಶನ್ ಇದೀಗ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದು, ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಟ ದರ್ಶನ್ ತೂಗುದೀಪ್ ವಿರೋಧಿಗಳ ಮಾತಾಗಿದೆ.
ದರ್ಶನ್ & ಗ್ಯಾಂಗ್‌ಗೆ ಬಿರಿಯಾನಿ?
ನಟ ದರ್ಶನ್ ತೂಗುದೀಪ್ ಸಾಕಷ್ಟು ಪ್ರಭಾವಿ ವ್ಯಕ್ತಿ, ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳಿಗೂ ಕೆಲಸ ಮಾಡಿಕೊಡುತ್ತಿದ್ದರು. ಚುನಾವಣೆಯ ವೇಳೆ ಪ್ರಚಾರ ನಡೆಸಿ, ಮತದಾರರ ಗಮನ ಸೆಳೆಯಲು ಸಾಹಯ ಮಾಡುತ್ತಿದ್ದರು ಎಂಬ ಮಾತು ಇದೆ. ಈಗ ಅದೇ ರಾಜಕಾರಣಿಗಳು ನಟ ದರ್ಶನ್ ನೆರವಿಗೆ ಬಂದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಏನು ವ್ಯವಸ್ಥೆ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಭಾರಿ ಗಂಭೀರ ಆರೋಪ ಮಾಡಲಾಗುತ್ತಿದೆ. ಬಿರಿಯಾನಿ ಊಟದ ಜೊತೆಗೆ, ಎಣ್ಣೆ ಕೂಡ ಸಪ್ಲೈ ಆಗುತ್ತಿದೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಆರೋಪಗಳಿಗೆ ಯಾವುದೇ ಸಾಕ್ಷಿ ಇಲ್ಲ.












Click it and Unblock the Notifications