Darshan Thoogudeepa: ದರ್ಶನ್ ತೂಗುದೀಪ್‌ಗೆ ಭೀಕರ ಆಘಾತ, ಪರಪ್ಪನ ಅಗ್ರಹಾರದಿಂದ ಔಟ್!
ದರ್ಶನ್ ತೂಗುದೀಪ್ & ಪವಿತ್ರಾ ಗೌಡಗೆ ಇಂದು ಆಘಾತ ಎದುರಾಗಿದೆ, ಒಂದೇ ಜೈಲಿನಲ್ಲಿ ಆರಾಮವಾಗಿ ಇದ್ದ ಇಬ್ಬರನ್ನೂ ಈಗ ಬೇರೆ ಬೇರೆ ಮಾಡಲಾಗಿದೆ. ಪರಪ್ಪನ ಅಗ್ರಹಾರದ ಒಳಗೆ ಸಿಗರೇಟು & ಟೀ ಅಂತಾ ಮೋಜು ಮಸ್ತಿ ಮಾಡ್ತಾ ಇದ್ದ ನಟ ದರ್ಶನ್ & ಗ್ಯಾಂಗ್‌ಗೆ ಈ ಮೂಲಕ ಭೀಕರ ಆಘಾತ ಎದುರಾಗಿದೆ. ಹಾಗಾದ್ರೆ ದರ್ಶನ್ & ಗ್ಯಾಂಗ್‌ನ ಯಾವ ಯಾವ ಸದಸ್ಯರು ಯಾವ ಯಾವ ಜೈಲಿಗೆ ಶಿಫ್ಟ್ ಆಗುತ್ತಾರೆ? ದರ್ಶನ್ ಬಳ್ಳಾರಿ ಜೈಲಿಗೆ ಹೋಗುವುದು ಯಾವಾಗ? ಪವಿತ್ರಾ ಗೌಡ ಬೆಂಗಳೂರು ಜೈಲಿನಲ್ಲೇ ಇರ್ತಾರಾ?
ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ದೊಡ್ಡ ಸೌಂಡ್ ಮಾಡುತ್ತಿದ್ದ ದರ್ಶನ್‌ಗೆ ಸಂಕಷ್ಟ. ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನ ಒಳಗೆ ನೆಮ್ಮದಿಯಾಗಿ ಊಟ & ತಿಂಡಿ ಮಾತ್ರವಲ್ಲ ಎಣ್ಣೆ ಹೊಡೆಯುತ್ತಾ, ಬಿರಿಯಾನಿ ತಿಂದು, ಟೀ ಕುಡಿದು ಸಿಗರೇಟು ಕೂಡ ಸೇದುತ್ತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹಾಗೇ ದರ್ಶನ್ ಜೈಲು ಒಳಗೆ ಕೂತು, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿಗರೇಟು ಸೇದುತ್ತಾ & ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಮಾತನಾಡುತ್ತಾ ಕುಳಿತಿದ್ದ ಫೋಟೋಸ್ ವೈರಲ್ ಆಗಿತ್ತು. ಆ ನಂತರ ಶುರುವಾಗಿದ್ದೇ ಹೊಸ ಸಂಕಷ್ಟ, ಅದು ಈಗ ದರ್ಶನ್ ಜೊತೆ ಇಡೀ ಗ್ಯಾಂಗ್ ಅನ್ನೇ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವ ಜೈಲುಗಳಿಗೆ ದಿಢೀರ್, ಎತ್ತಂಗಡಿ ಮಾಡುವಂತೆ ಮಾಡಿದೆ.

2 ಫೋಟೋ ಮತ್ತು 1 ವಿಡಿಯೋ!
ದರ್ಶನ್ ತೂಗುದೀಪ್ & ಗ್ಯಾಂಗ್ ದಿಕ್ಕಾಪಾಲಾಗಿ ಓಡಿ ಹೋಗುವ ಪರಿಸ್ಥಿತಿ ಬಂದಿದೆ. ಯಾಕೆ ಅಂದ್ರೆ ಒಂದು ಕಡೆ ದರ್ಶನ್ ತೂಗುದೀಪ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ, ಹಾಗೇ ಇನ್ನುಳಿದ ಹತ್ತಾರು ಆರೋಪಿಗಳನ್ನು ಕೂಡ ಬೇರೆ ಬೇರೆ ಜೈಲುಗಳಿಗೆ ಕಳುಹಿಸಿದ್ದಾರೆ ಪೊಲೀಸರು. ಆದರೆ ಪವಿತ್ರಾ ಗೌಡ ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ, ಠಿಕಾಣಿ ಹೂಡಲಿದ್ದಾರೆ.
ಇಡೀ ಕೊಲೆ ಕೇಸ್ ಶುರುವಾಗಿದ್ದೇ ಪವಿತ್ರಾ ಗೌಡಳಿಂದ ಎಂಬ ಆರೋಪ ಇದೆ. ಹೀಗಿದ್ದಾಗಲೇ ಪವಿತ್ರಾ ಗೌಡ ಮಾತ್ರ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು, ಪವಿತ್ರಾ ಗೌಡ ಬೆನ್ನಿಗೆ ನಿಂತ ಪುರುಷರೆಲ್ಲರೂ ತಮ್ಮ ತಮ್ಮ ಕುಟುಂಬಗಳನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವ ಪರಿಸ್ಥಿತಿ ಬಂದಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನರು ಕಮೆಂಟ್ ಹಾಕುತ್ತಿದ್ದಾರೆ.
ದರ್ಶನ್ & ಪವಿತ್ರಾ ಗೌಡ ಫೋಟೋ..?
ಈಗಾಗಲೇ ದರ್ಶನ್ ತೂಗುದೀಪ್ ತಮ್ಮ ಗ್ಯಾಂಗ್ ಜೊತೆಗೆ & ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟು ಸೇದಿರುವ & ವಿಡಿಯೋ ಕಾಲ್‌ನ ಮೂಲಕ ಮಾತನಾಡಿರುವ ಫೋಟೋ & ವಿಡಿಯೋ ವೈರಲ್ ಆಗಿದೆ. ಇದೇ ಸಮಯದಲ್ಲಿ, ಪವಿತ್ರಾ ಗೌಡ & ದರ್ಶನ್ ಅವರಿಗೆ ಸಂಬಂಧಿಸಿದ ಫೋಟೋ ಕೂಡ ಲೀಕ್ ಆಗಲಿದೆ ಎಂಬ ಮಾತು ಹಲ್‌ಚಲ್ ಎಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಮಾಹಿತಿಗಳು ಹರಿದಾಡುತ್ತಿರುವುದು ದುರದೃಷ್ಟದ ಸಂಗತಿ ಅಂತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರವಾಗಿ ಸರ್ಕಾರ & ಪೊಲೀಸರು ಕೂಡ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಾಲು ಸಾಲು ಸಿನಿಮಾ ರಿಲೀಸ್!
ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.












Click it and Unblock the Notifications