Darshan Thoogudeepa: ರೇಣುಕಾಸ್ವಾಮಿ ಮಗುವನ್ನು ನೋಡಲು ವಿಜಯಲಕ್ಷ್ಮಿ ದರ್ಶನ್ ಮಾಡಿರುವ ಪ್ಲಾನ್ ಏನು?
ಬಳ್ಳಾರಿ ಜೈಲಲ್ಲಿ ದರ್ಶನ್ ತೂಗುದೀಪ್ ಅವರು ಬೆನ್ನುನೋವು & ಸರಿಯಾಗಿ ಊಟ ಸೇರದೆ ಪರದಾಟ ಪಡುತ್ತಿದ್ದಾರೆ. ಒಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಗದೆ ನಟ ದರ್ಶನ್ ಅವರು ಪದಾಡುವ ಸಮಯಕ್ಕೆ, ಬಳ್ಳಾರಿ ಜೈಲಿನ ವಾತಾವರಣವೂ ಅವರಿಗೆ ಹೊಂದಾಣಿಕೆ ಕೂಡ ಆಗುತ್ತಿಲ್ಲ. ಇನ್ನೊಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಈ ವಿಚಾರ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ತಲೆನೋವು ತಂದಿದೆ. ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ರೇಣುಕಾಸ್ವಾಮಿ ಮಗುವನ್ನು ನೋಡಲು...
ದರ್ಶನ್ ತೂಗುದೀಪ್ ಅವರನ್ನು ಇದೀಗ ಬಳ್ಳಾರಿ ಜೈಲಿನಿಂದ ಹೊರಗೆ ಕರೆದುಕೊಂಡು ಬರೋದಕ್ಕೆ ರೇಣುಕಾಸ್ವಾಮಿ ಕುಟುಂಬ ಅಂದ್ರೆ, ರೇಣುಕಾಸ್ವಾಮಿ ಅಪ್ಪ & ಅಮ್ಮ ಹಾಗೆ ಹೆಂಡತಿ ಮನಸ್ಸು ಮಾಡಿದ್ರೆ ಮಾತ್ರ ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರ ವಿರುದ್ಧ ಪ್ರಬಲ ಸಾಕ್ಷ್ಯಗಳು ಸಿಕ್ಕಿದ್ದು, ಇದರಿಂದ ದರ್ಶನ್ ತೂಗುದೀಪ್ ಅವರನ್ನು ಹೊರಗೆ ಕರೆದುಕೊಂಡು ಬರಲು ಕಷ್ಟವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆಯೇ, ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ರೇಣುಕಾಸ್ವಾಮಿ ಮಗುವನ್ನು ನೋಡಲು...

ರೇಣುಕಾಸ್ವಾಮಿ ಮಗುವನ್ನು ನೋಡಲು ದರ್ಶನ್...
ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಸೇರಿದಂತೆ ಅವರ ಜೊತೆಗಾರರು ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆಗುವ ವೇಳೆ ರೇಣುಕಾಸ್ವಾಮಿ ಹೆಂಡತಿಗೆ 6 ತಿಂಗಳು ಆಗಿತ್ತು. ಕೆಲವು ದಿನಗಳ ಹಿಂದಷ್ಟೇ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೇ ಸಮಯವನ್ನ ಈಗ ಬಳಸಿಕೊಂಡು, ದರ್ಶನ್ ತೂಗುದೀಪ್ ರಿಲೀಸ್ ಮಾಡಿಸಲು ಹೊಸ ಪ್ಲಾನ್ ನಡೆದಿದೆ?
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ, ರೇಣುಕಾಸ್ವಾಮಿ ಹೆಂಡತಿ ಜನ್ಮ ನೀಡಿರುವ ಗಂಡು ಮಗುವನ್ನು ನೋಡಿಕೊಂಡು ಬರಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ದರ್ಶನ್ ತೂಗುದೀಪ್ ಅವರ ಅಭಿಮಾನಿ ಸಂಘದ ಮುಖಂಡರನ್ನು ಸಂಪರ್ಕಿಸಲಾಗಿದೆ. ಈ ಮೂಲಕ ರೇಣುಕಾಸ್ವಾಮಿ ಹೆಂಡತಿ ಜನ್ಮ ನೀಡಿರುವ ಗಂಡು ಮಗುವನ್ನು ನೋಡಿಕೊಂಡು ಬರಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪತ್ನಿ, ವಿಜಯಲಕ್ಷ್ಮೀ ಅವರು ಯೋಚಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಅಭಿಮಾನಿಗಳು ಉಸಿರು ಬಿಗಿ ಹಿಡಿದು...
ಒಟ್ನಲ್ಲಿ ಹೇಗಾದರೂ ಆಗಲಿ, ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಬಳ್ಳಾರಿ ಜೈಲಿನಿಂದ ಹೊರಗೆ ಬರಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ. ಈ ಕಾರಣಕ್ಕೆ, ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಅಲ್ಲದೆ ದರ್ಶನ್ ತೂಗುದೀಪ್ ಹೆಂಡತಿ, ತಮ್ಮ & ಅಮ್ಮ ಕೂಡ ದರ್ಶನ್ ರಿಲೀಸ್‌ಗೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೇ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವ ದಿನ ದೊಡ್ಡ ಹಬ್ಬ ಮಾಡಲು ಅಭಿಮಾನಿಗಳು ಇದೀಗ ತಯಾರಿ ಆರಂಭಿಸಿದ್ದಾರೆ.












Click it and Unblock the Notifications