Darshan Thoogudeepa: ಸೊರಗಿ ಸೊರಗಿ ರೇಣುಕಾಸ್ವಾಮಿಯಂತೆ ಸಣ್ಣಗೆ ಆದ ಡಿ-ಬಾಸ್ ದರ್ಶನ್ ತೂಗುದೀಪ್ ದೇಹ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಈ ಸುದ್ದಿಯನ್ನ ಕೇಳಿ ಭಾರಿ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಎಲ್ಲಾ ರೋಗಗಳಿಂದ ಗುಣಮುಖರಾಗಿ ರಿಲೀಸ್ ಆಗಿ ಬರಲಿ ಅಂತಾ ಅಭಿಮಾನಿಗಳು ಇದೀಗ ದೇವರ ಬಳಿ ಬೇಡುತ್ತಿದ್ದಾರೆ. ಇಂಥ ಸಮಯದಲ್ಲೇ, ಸೊರಗಿ ಸೊರಗಿ ರೇಣುಕಾಸ್ವಾಮಿಯಂತೆ ಸಣ್ಣಗೆ ಆದ ಡಿ-ಬಾಸ್ ದರ್ಶನ್ ತೂಗುದೀಪ್ ದೇಹ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆ ಭಾರಿ ಚಿಕಿತ್ಸೆಯ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಏರುಪೇರು ಕಾಣುತ್ತಿದೆ. ಇಂತಹ ಸಮಯದಲ್ಲೇ ಸ್ಫೋಟಕ ಸುದ್ದಿಯೊಂದು ಈಗ ಹೊರಬಿದ್ದು ಅಭಿಮಾನಿಗಳಿಗೆ ಇನ್ನಷ್ಟು ಟೆನ್ಷನ್ ಕೊಡುವ ಜೊತೆಗೆ, ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಏನೆಲ್ಲಾ ಸೈಡ್ ಎಫೆಕ್ಟ್ ಆಗ್ತಿದೆ? ಮುಂದೆ ಓದಿ.

Darshan Thoogudeepa Weight Continuously Reducing For This Reason

ಶೀಘ್ರದಲ್ಲೇ ಡಿ-ಬಾಸ್ ಬೆನ್ನಿಗೆ ಸರ್ಜರಿ?

ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ವೈದ್ಯರು ಇದೀಗ ಬೆನ್ನು ನೋವಿಗೆ ಚಿಕಿತ್ಸೆಯನ್ನ ನೀಡುತ್ತಾ, ಫಿಸಿಯೋಥೆರಪಿ ಮಾಡುತ್ತಿರುವ ಕಾರಣ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತೂಕ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ ಎನ್ನಲಾಗಿದೆ. ಅಲ್ಲದೆ ಶೀಘ್ರದಲ್ಲೇ ಸರ್ಜರಿ, ಅಂದ್ರೆ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಕೂಡ ವೈದ್ಯರು ಇದೀಗ ಚಿಂತನೆ ನಡೆಸಿದ್ದಾರೆ. ಹೀಗಾಗಿ ಸಾಕಷ್ಟು ಆತಂಕ ಅಭಿಮಾನಿಗಳ ಎದೆಯಲ್ಲಿ ಮನೆ ಮಾಡಿದೆ.

ಡಿ-ಬಾಸ್ ದರ್ಶನ್ ಆರೋಗ್ಯದಲ್ಲೂ ಏರುಪೇರು?

ಬೆನ್ನು ನೋವಿನ ಸಮಸ್ಯೆ ಸರಿಯಾಗದ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಲ್ಲಿ ನಾನಾ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ. ಹೀಗಾಗಿ ಮುಂದಿನ ಚಿಕಿತ್ಸೆಯ ಬಗ್ಗೆ ಕೂಡ ಗಂಭೀರ ಚಿಂತನೆ ನಡೆದಿದೆ. ಮತ್ತೊಂದು ಕಡೆ ತೂಕ ಕಡಿಮೆ ಆಗುತ್ತಿರುವ ಈ ಸಮಯದಲ್ಲಿ, ಇನ್ನಷ್ಟು ಎಚ್ಚರಿಕೆಯಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಗಮನಿಸುತ್ತಿದ್ದಾರೆ ವೈದ್ಯರು.

ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಚಿಕಿತ್ಸೆ ನೀಡಲು ಹಿರಿಯ ವೈದ್ಯ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಚಿಕಿತ್ಸೆ ಚನ್ನಾಗಿ ನಡೆಯುತ್ತಿದೆ. ಹೀಗಾಗಿ ಶೀಘ್ರದಲ್ಲಿಯೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಿಂದ ರಿಲೀಸ್ ಆಗುವ ನಿರೀಕ್ಷೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನಷ್ಟು ದಿನಗಳ ಕಾಲ ಕಾದು ನೋಡಬೇಕಿದೆ.

ಡಿ-ಬಾಸ್ ಮತ್ತೆ ಬಳ್ಳಾರಿ ಜೈಲಿಗೆ?

ಅಷ್ಟಕ್ಕೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕಿರುವುದು ಅನಾರೋಗ್ಯದ ಕಾರಣಕ್ಕೆ. ಹೀಗಾಗಿ, ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ದರ್ಶನ್ ತೂಗುದೀಪ್ ಅವರಿಗೆ ಕಠಿಣ ರೂಲ್ಸ್‌ ಹಾಕಲಾಗಿದೆ. ನಿಯಮ ಮೀರಬಾರದು, ಅಂತಾ ಎಚ್ಚರಿಕೆ ಕೂಡ ನೀಡಲಾಗಿದೆ. ಇದು ಮಾತ್ರವಲ್ಲ ದರ್ಶನ್ ತೂಗುದೀಪ್ ಬೇಗ ಚಿಕಿತ್ಸೆ ಪಡೆದು ಮತ್ತೆ ಜೈಲಿಗೆ ಹೋಗಲು ಖಡಕ್ ಸೂಚನೆ ನೀಡಲಾಗಿತ್ತು. ಆದರೆ ಇದೇ ವಿಚಾರದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈಗ ದೊಡ್ಡ ಎಡವಟ್ಟು ಮಾಡಿಕೊಂಡ್ರಾ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಇದರ ಜೊತೆ ಅಭಿಮಾನಿಗಳಿಗೆ ಕೂಡ ಭಯ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+