Darshan Thoogudeepa: ಗೆಳೆಯನ ಸಾವಿನ ನೋವಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅದ್ಧೂರಿಯಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಿದ್ದರು. ನಮ್ಮ ಡಿ-ಬಾಸ್ ದರ್ಶನ್ ಅವರ ಎಲ್ಲಾ ಸಂಕಷ್ಟಗಳು ದೂರವಾಗಲಿ ಅಂತಾ ಅಭಿಮಾನಿಗಳು ವಿಶೇಷ ಪೂಜೆ ಕೂಡ ಆಯೋಜನೆ ಮಾಡಿದ್ದಾರೆ. ಹೀಗಿದ್ದಾಗಲೇ, ಗೆಳೆಯನ ಸಾವಿನ ನೋವಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ...
ಎಲ್ಲೇ ಹೋದರೂ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್ ಅಂತಾ ಹೇಳ್ತಾರೆ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ದಾಖಲೆ ಬರೆದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ಅವರ ಜರ್ನಿ 'ಮೆಜೆಸ್ಟಿಕ್' ಮೂಲಕ ಶುರುವಾಗಿತ್ತು. ಆ ನಂತರ ಕರಿಯ, ಕಲಾಸಿಪಾಳ್ಯ, ದತ್ತ ಹೀಗೆ ಸಾಲು ಸಾಲು ಹಿಟ್ ಸಿನಿಮಾ ನೀಡಿ ಮಿಂಚಿದರು.

ಗೆಳೆಯನ ಸಾವಿನ ನೋವಲ್ಲೇ ಡಿ-ಬಾಸ್....
2023 ರಲ್ಲಿ ರಿಲೀಸ್ ಆಗಿದ್ದ 'ಕಾಟೇರ' ಸಿನಿಮಾ ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲಿ ಹೊಸ ದಾಖಲೆ ಬರೆದಿತ್ತು. ಆದ್ರೆ ಡಿ-ಬಾಸ್ ಅವರ ಜೀವನದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಕೊನೆಗೆ ಎಲ್ಲವನ್ನು ಎದುರಿಸಿದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇನ್ನೇನು ನೆಮ್ಮದಿಯಾಗಿ ಇರಲಿದ್ದಾರೆ ಎನ್ನುವಾಗಲೇ ಮತ್ತೊಂದು ಆಘಾತ ಇದೀಗ ಎದುರಾಗಿದೆ. ಗೆಳೆಯನ ಸಾವಿನ ನೋವಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ...
ಡಿ-ಬಾಸ್ ದರ್ಶನ್ ಅವರಿಂದ ಮಹತ್ವದ ನಿರ್ಧಾರ...
ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋದ ಸಮಯದಲ್ಲಿ ಕೂಡ ಅವರ ಬಗ್ಗೆ ರಚಿತಾ ರಾಮ್ ಅವರು ಮುಕ್ತವಾಗಿ & ಹೆಮ್ಮೆಯಿಂದ ಮಾತನಾಡಿದ್ದರು. ಹಾಗೇ ರಕ್ಷಿತಾ ಕೂಡ ಈ ಬಗ್ಗೆ ಮಾತನಾಡಿ ಡಿ-ಬಾಸ್ ದರ್ಶನ್ ಅವರ ಪರ ನಿಂತಿದ್ದರು, ಧನ್ವೀರ್ ಅವರು ದರ್ಶನ್ ಅವರಿಗೆ ಸ್ವಂತ ತಮ್ಮನ ರೀತಿ ನಿಂತು ಕಷ್ಟದ ಸಮಯದಲ್ಲಿ ಹೋರಾಡಿದ್ದರು.
ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಮೂವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇಷ್ಟೆಲ್ಲದರ ನಡುವೆ ನವಗ್ರಹ ಸಿನಿಮಾದಲ್ಲಿ ನಟಿಸಿದ್ದ ಗಿರಿ ದಿನೇಶ್ ಅವರು ಮೃತಪಟ್ಟ ಕಾರಣಕ್ಕೆ ಇಂಥ ನಿರ್ಧಾರ ಕೈಗೊಂಡಿದ್ದಾರಾ? ಗೆಳೆಯನ ಸಾವಿನ ನೋವಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರಾ? ಅನ್ನೋ ಚರ್ಚೆ ಕೂಡ ಶುರುವಾಗಿದೆ. ಆದರೆ ಡಿ-ಬಾಸ್ ದರ್ಶನ್ ಅವರು ತಮ್ಮ ಆರೋಗ್ಯದ ಸಮಸ್ಯೆ ಕಾರಣಕ್ಕೆ ಹುಟ್ಟುಹಬ್ಬ ಆಚರಣೆ ಬೇಡ ಎನ್ನುತ್ತಿರುವ ಮಾಹಿತಿ ಇದೆ.












Click it and Unblock the Notifications