Darshan: ದರ್ಶನ್ ಭೇಟಿ ಮಾಡಲು ನಾನು ಜೈಲಿಗೆ ಹೊಗಲ್ಲ ಅಂತಿದ್ದಾರೆ ಸೋನಾಲ್: ಸಂಚಲನ ಸೃಷ್ಟಿಸಿದ ದರ್ಶನ್ ತಂಗಿ ಹೇಳಿಕೆ!
ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುವ ಸಮಯದಲ್ಲೇ, ದರ್ಶನ್‌ರ ತಂಗಿ ಮದುವೆಗೆ ರೆಡಿಯಾಗಿದ್ದಾರೆ. ಲವ್ ಮಾಡಿ ಮದುವೆ ಆಗುತ್ತಿರುವ ದರ್ಶನ್ ತೂಗುದೀಪ್ ತಂಗಿ ಅಣ್ಣನ ಆಗಮನಕ್ಕೆ ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ದರ್ಶನ್ ಅವರ ತಂಗಿ ಸೋನಾಲ್ ಮೊಂಟೇರಿಯೋ ಅವರು ದರ್ಶನ್ ಅವರನ್ನ ನೋಡಲು ನಾನು ಜೈಲಿಗೆ ಹೋಗಲ್ಲ ಎಂದಿದ್ದಾರೆ. ದರ್ಶನ್ ತೂಗುದೀಪ್ ಬಗ್ಗೆ ಸೋನಾಲ್ ಮೊಂಟೇರಿಯೋ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಸೋನಾಲ್ ಮೊಂಟೇರಿಯೋ ಹೀಗೆ ಹೇಳಿದ್ದು ಏಕೆ? ಬನ್ನಿ ತಿಳಿಯೋಣ.
ದರ್ಶನ್ ತೂಗುದೀಪ್ ಅವರು, ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ 2ನೇ ಆರೋಪಿ ಆಗಿರುವ ನಟ ದರ್ಶನ್‌ಗೆ, ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ಇಂತಹ ನೋವಿನ ಪರಿಸ್ಥಿತಿಯಲ್ಲೇ ದರ್ಶನ್ ತೂಗುದೀಪ್ ಅವರ ತಂಗಿ ಸೋನಾಲ್ ಮೊಂಟೇರಿಯೋ ಮದುವೆ ಆಗುತ್ತಿದ್ದಾರೆ. ಹೀಗಿದ್ದಾಗ ನೀವು ಮದುವೆ ಆಮಂತ್ರಣ ಪತ್ರಿಕೆ ನೀಡಲು, ದರ್ಶನ್ ತೂಗುದೀಪ್ ಅವರು ಇರುವ ಪರಪ್ಪನ ಅಗ್ರಹಾರ ಜೈಲಿಗೆ ಹೋಗುತ್ತೀರಾ? ಅಂತ ಪ್ರಶ್ನೆ ಕೇಳಿದಾಗ ಸ್ಫೋಟಕ ಉತ್ತರ ನೀಡಿದ್ದಾರೆ ಸೋನಾಲ್ ಮೊಂಟೇರಿಯೋ ಇದೀಗ.

ದರ್ಶನ್ ತೂಗುದೀಪ್ ತಂಗಿ ಹೇಳಿದ್ದೇನು?
ಹೌದು ಸೋನಾಲ್ ಮೊಂಟೇರಿಯೋ ಕನ್ನಡ ಸಿನಿಮಾ ಫ್ಯಾನ್ಸ್ ಕಂಡ ಅದ್ಭುತ ನಟಿ. ಕೆಲವೇ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ರೂ, ಕೋಟ್ಯಂತರ ಅಭಿಮಾನಿಗಳನ್ನ ಸೋನಾಲ್ ಮೊಂಟೇರಿಯೋ ಸಂಪಾದಿಸಿದ್ದಾರೆ. ತರುಣ್ ನಿರ್ದೇಶಿಸಿದ್ದ 'ರಾಬರ್ಟ್' ಸಿನಿಮಾ ಸೋನಾಲ್ ಮೊಂಟೇರಿಯೋರ ಕರಿಯರ್‌ಗೆ ದೊಡ್ಡ ತಿರುವು ನೀಡಿತ್ತು. 2021ರಲ್ಲಿ ರಿಲೀಸ್ ಆಗಿದ್ದ 'ರಾಬರ್ಟ್' ಬಳಿಕ ಸೋನಾಲ್ ಮೊಂಟೇರಿಯೋ ಅವರಿಗೆ ಹತ್ತಾರು ಸಿನಿಮಾ ಆಫರ್ ಹುಡುಕಿಕೊಂಡು ಬಂದವು.
ಇದೇ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತರುಣ್ ಸುಧೀರ್ & ಸೋನಾಲ್ ನಡುವೆ ಲವ್ ಆಗಿತ್ತು. ಈ ಕಾರಣಕ್ಕೆ ಇದೀಗ ಇಬ್ಬರೂ ಮದುವೆ ಆಗುತ್ತಿದ್ದಾರೆ. ಆದರೆ ಸೋನಾಲ್ ಅವರು ದರ್ಶನ್ ಅವರನ್ನ ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಲ್ಲ ಅಂತಿದ್ದಾರೆ. ಅರೆ ಇಂತಹ ಹೇಳಿಕೆ ನೀಡಿದ್ದು ಯಾಕೆ ಸೋನಾಲ್ ಅವರು? ದರ್ಶನ್ ತೂಗುದೀಪ್ ತಂಗಿ ಹಿಂಗೆಲ್ಲಾ ಹೇಳಿಕೆ ನೀಡಲು ಕಾರಣ ಏನು? ಮುಂದೆ ಓದಿ!
ಜೈಲಲ್ಲಿ ದರ್ಶನ್ ಅಣ್ಣನ ನೋಡಲು ಆಗಲ್ಲ!
ದರ್ಶನ್ ತೂಗುದೀಪ್ ಭೇಟಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲ್ಲ ಅಂತಾ ಸೋನಾಲ್ ಅವರು ಈಗ ಹೇಳಿರುವುದು ಯಾಕೆ ಅಂದ್ರೆ, ನಾವು ತೆರೆ ಮೇಲೆ ಮತ್ತು ಸಿನಿಮಾಗಳಲ್ಲಿ ದರ್ಶನ್ ಅಣ್ಣನ ಹೀರೋ ರೀತಿ ನೋಡಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ದರ್ಶನ್ ತೂಗುದೀಪ್ ಅವರನ್ನು, ಜೈಲಿನ ಕಂಬಿ ಹಿಂದೆ ನೋಡಲು ಕಣ್ಣೀರು ಬರುತ್ತದೆ. ಇದೇ ಕಾರಣಕ್ಕೆ ಅವರನ್ನು ನಾನು ಹಾಗೆ ನೋಡಲು ಇಷ್ಟ ಪಡಲ್ಲ. ದರ್ಶನ್ ತೂಗುದೀಪ್ ಅವರು ಜೈಲಿನಿಂದ ಬಿಡುಗಡೆ ಆಗಿ ಹೊರಗಡೆ ಬಂದ ನಂತರ ಅವರನ್ನ ನೇರವಾಗಿ ಭೇಟಿ ಮಾಡುತ್ತೇನೆ ಎಂದಿದ್ದಾರೆ ಸೋನಾಲ್ ಮೊಂಟೇರಿಯೋ ಅವರು.
ಮದುವೆಗೆ ಮುಹೂರ್ತ ಯಾವಾಗ ಫಿಕ್ಸ್?
ತರುಣ್ ಮತ್ತು ಸೋನಾಲ್ ಮದುವೆಗೆ ಸಿದ್ಧತೆ ಸಾಗಿದೆ. ಕೆಲವು ದಿನಗಳ ಹಿಂದಷ್ಟೇ ವಿಶೇಷವಾದ ವಿಡಿಯೋ ಮೂಲಕ ತರುಣ್ & ಸೋನಾಲ್ ಮದುವೆ ಆಗುತ್ತಿರುವ ಬಗ್ಗೆ ಸಂದೇಶ ನೀಡಿದ್ದರು. ಆಗಸ್ಟ್ 10 & 11ಕ್ಕೆ ಇಬ್ಬರೂ ಮದುವೆ ಆಗುತ್ತಿದ್ದಾರೆ. ಹೀಗಾಗಿ ಇಬ್ಬರ ಮದುವೆ ಸುದ್ದಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ. ಮತ್ತೊಂದು ಕಡೆ ನಟ ದರ್ಶನ್ ಅವರು ಕೂಡ ತರುಣ್ & ಸೋನಾಲ್ ಅವರ ಮದುವೆಗೆ ಬರೋದು ಪಕ್ಕಾ ಅಂತಾ ಹೇಳಲಾಗುತ್ತಿದೆ. ಕೋರ್ಟ್ ಮೂಲಕ ವಿಶೇಷ ಅನುಮತಿ ಪಡೆದು, ತಂಗಿಯ ಮದುವೆಗೆ ದರ್ಶನ್ ತೂಗುದೀಪ್ ಅವರು ಬರಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ, ಕೋಟಿ ಕೋಟಿ ಅಭಿಮಾನಿಗಳು ದರ್ಶನ್ ಅವರನ್ನ ತರುಣ್ ಸುಧೀರ್ ಮದುವೆಯಲ್ಲಿ ನೋಡಲು ಕಾಯುತ್ತಿದ್ದಾರೆ.












Click it and Unblock the Notifications