Darshan Thoogudeepa: ಜೈಲಿನಲ್ಲಿದ್ದರೂ ಆ ವಿಚಾರದಲ್ಲಿ ಬದಲಾಗಿಲ್ಲ ದರ್ಶನ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡು ತಿಂಗಳಾಗುತ್ತಾ ಬಂದಿದೆ. ಹೊರಗೆ ಅಭಿಮಾನಿಗಳು ಮಾತ್ರ ಪಟ್ಟು ಬಿಡದೆ ದರ್ಶನ್ ಆಚೆ ಬರಲಿ ಎಂದು ಸಿಕ್ಕ ಸಿಕ್ಕ ದೇವರಿಗೆ ಹರಕೆ ಹೊರುತ್ತಿದ್ದಾರೆ. ಮತ್ತೊಂದು ಕಡೆ ಪೊಲೀಸರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲು ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ.

ಹೊರಗಡೆ ಇದ್ದಾಗ ಯಾರಿಗೂ ಡೋಂಟ್ ಕೇರ್ ಎನ್ನದಂತೆ ಇರುತ್ತಿದ್ದ ನಟ ದರ್ಶನ್‌ ಜೈಲಿನಲ್ಲಿ ಹಲವು ವಿಚಾರಗಳಲ್ಲಿ ಬದಲಾಗಿದ್ದಾರೆ ಎಂದು ಹೇಳಲಾಗಿದೆ. ಕೋಪದಲ್ಲಿ ಮಾಡಿದ ತಪ್ಪಿಗೆ ದೊಡ್ಡ ಬೆಲೆ ತೆರಬೇಕಾಗಿದೆ ಎಂದು ಗೊತ್ತಾಗಿದೆ. ನಟ ದರ್ಶನ್‌ ಜೈಲಿನಲ್ಲಿ ಧ್ಯಾನ ಮಾಡುತ್ತಾ, ಪುಸ್ತಕಗಳನ್ನು ಓದುತ್ತಾ ಕಾಲೆ ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.

Darshan Thoogudeepa Remains Unchanged on This Matter While in Jail

ದರ್ಶನ್‌ರನ್ನು ಭೇಟಿ ಮಾಡಲು ಈಗಾಗಲೇ ಸಾಕಷ್ಟು ಮಂದ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ದರ್ಶನ್ ಆಪ್ತರು, ರಾಜಕೀಯದವರು, ಸಿನಿಮಾ ನಟ, ನಟಿಯರು ಕೂಡ ದರ್ಶನ್‌ರನ್ನು ಭೇಟಿ ಮಾಡಿ ಧೈರ್ಯ ಹೇಳಿ ಬಂದಿದ್ದಾರೆ.

ದರ್ಶನ್‌ ಜೈಲಿನಲ್ಲಿ ಸಾಕಷ್ಟು ಬದಲಾವಣೆಯಾದರೂ ಅದೊಂದು ವಿಚಾರದಲ್ಲಿ ಮಾತ್ರ ಅವರು ಬದಲಾಗಿಲ್ಲ! ಅವರು ಆ ವಿಚಾರದಲ್ಲಿ ಮಾತ್ರ ಯಾವತ್ತಿದರೂ ಬದಲಾಗಲ್ಲ ಎನ್ನುವುದು ಜೈಲಿಗೆ ಹೋಗಿ ಬಂದವರ ಮಾತು.

ಜೈಲಿನಲ್ಲಿದ್ದರೂ ಸೆಲೆಬ್ರಿಟಿಗಳದ್ದೇ ಚಿಂತೆ!

ಹೌದು, ನಟ ದರ್ಶನ್‌ ತೂಗುದೀಪ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರಬಹುದು. ಕೋಪದಲ್ಲಿ ತಪ್ಪೇ ಮಾಡಿರಬಹುದು. ಆದರೆ ಅಭಿಮಾನಿಗಳ ವಿಚಾರದಲ್ಲಿ ನಟ ದರ್ಶನ್ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದಕ್ಕೇ ಅವರು ಅಭಿಮಾನಿಗಳನ್ನು ನನ್ನ ಪ್ರೀತಿಯ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ.

ಜೈಲಿನಲ್ಲಿದ್ದರೂ ನಟ ದರ್ಶನ್‌ಗೆ ಅಭಿಮಾನಿಗಳದ್ದೇ ಚಿಂತೆ ಕಾಡುತ್ತಿದೆ. ಅವರನ್ನು ಬೇಟಿಯಾಗಲು ಹೋದವರ ಬಳಿ ಕೂಡ ಅಭಿಮಾನಿಗಳು ಹೇಗಿದ್ದಾರೆ ಎಂದು ಕೂಡ ಕೇಳುತ್ತಾರೆ ಎಂದು ಮಾತನಾಡಿಸಿಕೊಂಡು ಬಂದವರು ಹೇಳಿದ್ದಾರೆ.

ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ದರ್ಶನ್ ತೂಗುದೀಪ, ಕಾಟೇರ ಸಿನಿಮಾ ಮೂಲಕ ತಮ್ಮ ಸೂಪರ್ ಸ್ಟಾರ್ ಪಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದರು. ಕಾಟೇರ ಸಿನಿಮಾ ಮೆಗಾ ಹಿಟ್ ಆದ ಬಳಿಕ ಸಂಭಾವನೆಯನ್ನು ಕೂಡ ಡಬಲ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಿನಿ ಕೆರಿಯರ್ ನಲ್ಲಿ ಮತ್ತಷ್ಟು ದಾಖಲೆ ನಿರ್ಮಾಣ ಮಾಡುವ ಹೊತ್ತಿನಲ್ಲೇ ಅವರು ಜೈಲು ಸೇರಿದ್ದು ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ದರ್ಶನ್‌ ಜೈಲಿಗೆ ಹೋದರೂ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಖೈದಿ ನಂ 6106 ಎನ್ನುವ ಸಂಖ್ಯೆಯನ್ನು ಕೂಡ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸಿಕೊಂಡಿದ್ದಾರೆ. ಇನ್ನೂ ಕೆಲವರು ಹಚ್ಚೆಯನ್ನು ಕೂಡ ಹಾಕಿಸಿಕೊಂಡು ಅಭಿಮಾನ ತೋರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+