Darshan Thoogudeepa: ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ ತೂಗುದೀಪ್ ಬಾಳಲ್ಲಿ ಬಿರುಗಾಳಿ, ಡಿವೋರ್ಸ್...
ದರ್ಶನ್ ತೂಗುದೀಪ್ ಅವರು ನೂರಾರು ಕೋಟಿ ರೂಪಾಯಿ ಆಸ್ತಿ ಇಟ್ಟುಕೊಂಡಿದ್ದಾರೆ, ತಮ್ಮ ಮನೆ ಮುಂದೆ ಬರುವ ಜನರಿಗೆ ದರ್ಶನ್ ತೂಗುದೀಪ್ ಕೋಟಿ ಕೋಟಿ ರೂಪಾಯಿ ಸಹಾಯ ಕೂಡ ಮಾಡುತ್ತಾರೆ ಎಂಬುದು ಅಭಿಮಾನಿಗಳ ಮಾತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ನರಳುವಂತಹ ಸ್ಥಿತಿ ಎದುರಾಗಿದ್ದು, ಅಭಿಮಾನಿಗಳು ಕೂಡ ನೋವು ತಿನ್ನುತ್ತಿದ್ದಾರೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ ತೂಗುದೀಪ್ ಬಾಳಲ್ಲಿ ಬಿರುಗಾಳಿ, ಡಿವೋರ್ಸ್...
ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಬಿರುಗಾಳಿಯೇ ಎದ್ದಿದೆ, ಯಾಕೆ ಅಂದ್ರೆ ನೂರಾರು ಕೋಟಿ ರೂಪಾಯಿ ಆಸ್ತಿ ಇದ್ದರೂ ಅದನ್ನ ಅನುಭವಿಸಲು ಆಗ್ತಿಲ್ಲ. ಒಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ತಪ್ಪು ಮಾಡದೇ ಇದ್ದರೂ ಅವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ ಎಂಬುದು ಅಭಿಮಾನಿಗಳ ಮಾತು. ಇದು ಮಾತ್ರವಲ್ಲ ದರ್ಶನ್ ತೂಗುದೀಪ್ ಅವರಿಗೆ ಬಳ್ಳಾರಿ ಜೈಲಿನಲ್ಲಿ ತುಂಬಾನೇ ಸಮಸ್ಯೆ ಉಂಟಾಗುತ್ತಿದೆ. ಇಷ್ಟೆಲ್ಲದರ ನಡುವೆ ಈಗ ಮತ್ತೊಂದು ಸ್ಫೋಟಕ ಸುದ್ದಿ ಓಡಾಡುತ್ತಿದೆ. ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ ತೂಗುದೀಪ್ ಬಾಳಲ್ಲಿ ಬಿರುಗಾಳಿ, ಡಿವೋರ್ಸ್...

ದರ್ಶನ್ ತೂಗುದೀಪ್ ಡಿವೋರ್ಸ್...
ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್ ಅವರು ಮಾಡದೇ ಇರುವ ಪಾತ್ರಗಳೇ ಇಲ್ಲ. ಕರಿಯ, ಕಲಾಸಿಪಾಳ್ಯ, ಗಜ, ಸಂಗೊಳ್ಳಿ ರಾಯಣ್ಣ, ರಾಬರ್ಟ್, ಕಾಟೇರ.. ಹೀಗೆ ನಟ ದರ್ಶನ್ ತೂಗುದೀಪ್ ಅವರು ಕೋಟ್ಯಂತರ ಅಭಿಮಾನಿಗಳಿಗೆ ಸಿನಿಮಾಗಳ ಹಬ್ಬವನ್ನೇ ಮುಂದಿಟ್ಟು, ತಮ್ಮ ನಟನಾ ತಾಕತ್ತು ತೋರಿಸಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಡಿ-ಬಾಸ್, ಬಾಕ್ಸ್ ಆಫಿಸ್ ಸುಲ್ತಾನ, ದಾಸ, ಕಾಟೇರ, ಹೀಗೆ ಪ್ರೀತಿಯಿಂದ ನೂರಾರು ಬಿರುದು ನೀಡಿದ್ದಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಬಿರುಗಾಳಿ ಎದ್ದು ಡಿವೊರ್ಸ್ ಮಾತುಗಳು ಬರುತ್ತಿವೆ.
ದರ್ಶನ್ ತೂಗುದೀಪ್ & ವಿಜಯಲಕ್ಷ್ಮೀ ದರ್ಶನ್ ಅವರು ಲವ್ ಮಾಡಿ ಮದುವೆ ಆಗಿದ್ದವರು. ಅವರ ಜೀವನ ತುಂಬಾ ಚನ್ನಾಗಿ ಇತ್ತು. ಆದರೆ ದರ್ಶನ್ ತೂಗುದೀಪ್ ಅವರ ವೈಯಕ್ತಿಕ ಜೀವನವೇ ಅವರಿಗೆ ಮುಳುವಾಗಿ ಹೋಯಿತು ಎಂಬ ಆರೋಪ ಇದೆ. 2008ಕ್ಕೂ ಹಿಂದೆ ದರ್ಶನ್ ತೂಗುದೀಪ್ & ಅವರ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ನಡುವೆ ಸಣ್ಣಪುಟ್ಟ ಗಲಾಟೆ ಆಗಿದ್ದವು. ಆದ್ರೆ ಯಾವಾಗ 2011 ರಲ್ಲಿ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರೋ, ಆ ನಂತರ ದೊಡ್ಡ ಬಿರುಗಾಳಿ ಎದ್ದಿತ್ತು. ಹೀಗಿದ್ದಾಗ ಸದ್ಯಕ್ಕೆ ಡಿವೋರ್ಸ್ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಅಯ್ಯಯ್ಯೋ ಡಿ-ಬಾಸ್ ಬದುಕಿನಲ್ಲಿ ಬಿರುಗಾಳಿ?
ಅಂದಹಾಗೆ ದರ್ಶನ್ ತೂಗುದೀಪ್ ಅವರು ಇದೀಗ ಡಿವೋರ್ಸ್ ನೀಡಲಿದ್ದಾರೆ, ಈ ಮೂಲಕ ನಟ ದರ್ಶನ್ ತೂಗುದೀಪ್ ನಿರಾಳ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ದರ್ಶನ್ ತೂಗುದೀಪ್ ಅವರು ಡಿವೋರ್ಸ್ ಕೊಡ್ತಾ ಇರೋದು ವಿಜಯಲಕ್ಷ್ಮೀ ದರ್ಶನ್ ಅವರಿಗೆ ಅಲ್ಲ, ಬದಲಾಗಿ ಈ ಸಮಯದಲ್ಲಿ ಪವಿತ್ರಾ ಗೌಡ ಅವರಿಗೆ ದರ್ಶನ್ ತೂಗುದೀಪ್ ಮದುವೆ ಆಗದೇ ಡಿವೋರ್ಸ್ ಅನ್ನ ಕೊಡಲು ಸಜ್ಜಾಗಿದ್ದಾರೆ ಎಂಬ ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಈಗ ಹಬ್ಬಿಸುತ್ತಿದ್ದಾರೆ. ಅಷ್ಟಕ್ಕೂ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಲಿವ್ ಇನ್ ರಿಲೇಷನ್‌ಶಿಪ್ ಅಂದ್ರೆ ಮದುವೆ ಆಗದೇ ಒಟ್ಟಿಗೆ ಇರುವ ಸಂಬಂಧದಲ್ಲಿ ಇದ್ದರು. ಆದರೆ ಇದೀಗ ನಟ ದರ್ಶನ್ ತೂಗುದೀಪ್ ಅವರು, ಪವಿತ್ರಾ ಗೌಡ ಸಹವಾಸ ಬಿಟ್ಟು ತುಂಬಾ ದೂರ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ತೂಗುದೀಪ್ ನಾಳೆಯೇ ರಿಲೀಸ್?
ರೇಣುಕಾಸ್ವಾಮಿ ಒಬ್ಬ ಕಾಮುಕ, ಹೀಗಾಗಿಯೇ ದರ್ಶನ್ ತೂಗುದೀಪ್ ಮಾಡಿದ್ದು ಸರಿ ಅಂತಾ ಇಷ್ಟು ದಿನಗಳ ಕಾಲ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ತಾ ಇದ್ದರು. ಹೀಗಿದ್ದಾಗ ದಿಢೀರ್ ದರ್ಶನ್ ತೂಗುದೀಪ್ ಕೊಲೆ ಮಾಡಿಲ್ಲ ಮೋಸ ಆಗುತ್ತಿದೆ ಎಂಬ ಮಾತನ್ನೂ ದರ್ಶನ್ ತೂಗುದೀಪ್ ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಿದ್ದಾಗಲೇ ಇಂದು ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕರೆ ನಾಳೆಯೇ ರಿಲೀಸ್ ಆಗುತ್ತಾರಾ? ಎನ್ನುವ ಕುತೂಹಲ ಡಬಲ್ ಆಗುತ್ತಿದೆ.
ಬಳ್ಳಾರಿ ಜೈಲಿನಿಂದ ರಿಲೀಸ್ ಆದ ತಕ್ಷಣ...
ದರ್ಶನ್ ತೂಗುದೀಪ್ ಅವರ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಖುದ್ದು ವೈದ್ಯರೇ ಸ್ಫೋಟಕ ಮಾಹಿತಿ ಕೂಡ ನೀಡಿದ್ದಾರೆ. ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಅಂತಾ ಅಭಿಮಾನಿಗಳಿಂದ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಈಗ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಆರೋಗ್ಯ ಕೈಕೊಟ್ಟಿದ್ದು, ಜೀವಕ್ಕೆ ಕೂಡ ಕಂಟಕ ಎದುರಾಗುತ್ತಿದೆ ಎಂಬ ಆರೋಪ ಓಡಾಡುತ್ತಿದೆ. ಈ ಕಾರಣಕ್ಕೆ ಇಂದು ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಕ್ಕರೆ ನಾಳೆಯೇ ರಿಲೀಸ್ ಆಗೋದು ಬಹುತೇಕ ಗ್ಯಾರಂಟಿ ಎಂಬ ಮಾತುಗಳು ಓಡಾಡುತ್ತಿವೆ. ಮತ್ತೊಂದು ಕಡೆ ಕರ್ನಾಟಕ ಬಂದ್ ಕೂಡ ಮಾಡ್ತಾರಾ ಅಭಿಮಾನಿಗಳು ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.












Click it and Unblock the Notifications