ದರ್ಶನ್ ಹೇಳಿದ್ದ ‘ಜಲಗಾರ’ ಸಿಕ್ಕೇಬಿಟ್ಟ: ಅವನು ಯಾರು ಗೊತ್ತಾ?
ದರ್ಶನ್ ತೂಗುದೀಪ ಕೊಲೆ ಆರೋಪದಲ್ಲಿ ಮತ್ತೊಮ್ಮೆ ಪೊಲೀಸರ ವಶಕ್ಕೆ ಹೋಗಿದ್ದಾನೆ. ಹಾಗೇ ದರ್ಶನ್ ಆಪ್ತ ಸ್ನೇಹಿತೆ ಆಗಿದ್ದ ಪವಿತ್ರ ಗೌಡ ಈಗ, ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಹೋಗಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಇದೇ ಸಮಯದಲ್ಲಿ ಕೋಟಿ ಕೋಟಿ ಜನರ ತಲೆಯಲ್ಲಿ ಕಾಡುತ್ತಿದ್ದ & ದರ್ಶನ್ ಹೇಳಿದ್ದ 'ಜಲಗಾರ' ಯಾರಪ್ಪಾ? ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕೇಬಿಟ್ಟಿದೆ!
ದರ್ಶನ್ ತೂಗುದೀಪ ಕೆಟ್ಟದಾಗಿ ಮಾತನಾಡುತ್ತಾರೆ, ಅವರು ಕುಡಿದರೆ ಬಾಯಲ್ಲಿ ಕೆಟ್ಟ ಕೆಟ್ಟ ಪದಗಳ ಪುಂಜವೇ ಹೊರಗೆ ಬರುತ್ತದೆ ಎಂಬ ಆರೋಪ ಇದೆ. ಈ ಆರೋಪಕ್ಕೆ ಸಾಕ್ಷಿಯಾಗಿ, ಕೊಲೆ ಆರೋಪಿ ದರ್ಶನ್ ಆಡಿದ್ದ ಎನ್ನಲಾದ ಕೆಟ್ಟ ಪದಗಳ ಆಡಿಯೋ ವೈರಲ್ ಆಗಿತ್ತು. ದರ್ಶನ್ ತಮ್ಮ ಪತ್ನಿಗೆ ಫೋನ್ ಕಾಲ್ ಮಾಡಿ ಬೈದಿದ್ದ ಎಂಬ ಆರೋಪದ ಆಡಿಯೋ ಒಂದು ವೈರಲ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಇದೇ ಆಡಿಯೋದಲ್ಲಿ ದರ್ಶನ್ 'ಜಲಗಾರನ ಕೈಯಲ್ಲಿ...' ಅಂತಾ ಏನೋ ಕೆಟ್ಟದಾಗಿ ಮಾತನಾಡಿ ಸಂಚಲನ ಸೃಷ್ಟಿಸಿದ್ದರು. ಆದರೆ 'ಜಲಗಾರ...' ಅಂದ್ರೆ ಏನು? ಅನ್ನೋದೆ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಇದೀಗ 'ಜಲಗಾರ' ಸಿಕ್ಕಿದ್ದಾನೆ.

'ಜಲಗಾರ' ಅಂದ್ರೆ ಯಾರು?
ದರ್ಶನ್ ಯಾರ ಜೊತೆ ಜಗಳ ಮಾಡಿಕೊಂಡಿಲ್ಲ ಹೇಳಿ? ಆತನ ಗಂಟಲಿಗೆ ಎಣ್ಣೆ ಬಿದ್ದರೆ ಸಾಕು ಆತ ರಾಕ್ಷಸ ಆಗ್ತಾನೆ ಅಂತಾರೆ ನಟ ದರ್ಶನ್ ಅಲಿಯಾಸ್ ಕೊಲೆ ಆರೋಪಿ ಆಗಿರುವ ದರ್ಶನ್ ಪರಿಚಯಸ್ಥರು. ಕುಡಿದು ಮನಸ್ಸಿಗೆ ಬಂದಂತೆ ಆಡುವ ಈತ, ತನ್ನ ಜೊತೆಗೆ ಇರುವವರನ್ನು ಕೂಡ ಹಲ್ಲೆ ಮಾಡಿ ಥಳಿಸುತ್ತಾನೆ. ದರ್ಶನ್ ಒಬ್ಬ ಕುಡುಕ ಎಂಬ ಆರೋಪಗಳು ಇದ್ದು, ತನ್ನ ಪತ್ನಿ ಬಗ್ಗೆಯೂ ದರ್ಶನ್ ಕೆಟ್ಟದಾಗಿ ಮಾತನಾಡಿದ್ದ ಎಂಬ ಆರೋಪದ ಆಡಿಯೋ ವೈರಲ್ ಆಗಿತ್ತು. ಹಾಗಾದ್ರೆ 'ಜಲಗಾರ' ಅಂದ್ರೆ ಯಾರು?
ಹೆಂಡತಿ ಕುರಿತು ಅಶ್ಲೀಲ ಶಬ್ಧ?
ದರ್ಶನ್ ಈ ಆಡಿಯೋದಲ್ಲಿ ತಮ್ಮ ಹೆಂಡತಿಗೆ ವಿಕೃತವಾಗಿ ಬೈದು, ಬೇರೆಯವರ ಜೊತೆಗೆ ಮಗು ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ ಪತ್ನಿಗೆ ಪೊಲೀಸರ ಎದುರಲ್ಲೇ ನಿನಗೆ ಅದು ಮಾಡ್ತೀನಿ, ಇದು ಮಾಡ್ತೀನಿ, ಅಂತಾ ಕೆಟ್ಟದಾಗಿ ಪದಗಳ ಬಳಕೆ ಮಾಡಿದ್ದ ದರ್ಶನ್ ಎನ್ನಲಾಗಿತ್ತು. ಈ ಆಡಿಯೋ ಹಲವು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಇದ್ದು, ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲೂ ಈ ಆಡಿಯೋದಲ್ಲಿ ಬರುವ ಜಲಗಾರ ಅನ್ನೋ ಶಬ್ಧ ಫುಲ್ ಫೇಮಸ್ ಆಗಿತ್ತು. 'ಜಲಗಾರ' ಅಂದ್ರೆ ಮೈಸೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಬಳಸುವ ಶಬ್ಧ, ಸಫಾಯಿ ಕರ್ಮಚಾರಿಗಳಿಗೆ ಈ ಪದ ಬಳುಸತ್ತಾರೆ ಅಲ್ಲಿನ ಹಳ್ಳಿ ಜನ. ಈ ಶಬ್ಧ ಬಳಸಿ ಪತ್ನಿಗೆ ಬೈದಿದ್ದ ದರ್ಶನ್ ಎಂದು ಆರೋಪ ಮಾಡಲಾಗಿದೆ.
ಮುಂದೆ ಐತೆ ಮಾರಿ ಹಬ್ಬ?
ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.
ದರ್ಶನ್ ಬೆನ್ನಿಗೆ ನಾಗ & ಸೈಕಲ್ ರವಿ?
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ A2 ಆರೋಪಿ ಆಗಿದ್ದಾರೆ ಅಲ್ಲದೆ ಕಂಬಿ ಎಣಿಸುತ್ತಿದ್ದಾರೆ. ಹೀಗಿದ್ದಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ಗೆ ಸೇವೆ ಮಾಡಲು ಅಂದ್ರೆ ಆತಿಥ್ಯ ನೀಡಲು ಬೆಂಗಳೂರಿನ ರೌಡಿ ಶೀಟರ್ ನಾಗ & ಸೈಕಲ್ ರವಿ ನಡುವೆ ಇದೀಗ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸ್ಫೋಟಕ ಹಾಗೂ ಭಯಾನಕ ಮಾಹಿತಿಯನ್ನ ಕನ್ನಡದ ಟಿವಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಇದೇ ಸಮಯದಲ್ಲಿ ರೌಡಿ ಶೀಟರ್ ನಾಗ ಜೈಲಿನಲ್ಲೇ ಇದ್ದು, ಜೈಲಿನಿಂದ ಹೊರಗೆ ಇರುವ ಸೈಕಲ್ ರವಿ ತನ್ನ ಹುಡುಗರ ಮೂಲಕ ದರ್ಶನ್‌ಗೆ ಆತಿಥ್ಯ ನೀಡಲು ಮುಂದಾಗಿರುವ ಆರೋಪ ಕೇಳಿಬಂದಿದೆ. ಈ ಸುದ್ದಿ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ.












Click it and Unblock the Notifications