Darshan Thoogudeepa: ದರ್ಶನ್ ಅದೊಂದು ಎಡವಟ್ಟು ಮಾಡಿಕೊಳ್ಳದೆ ಇದ್ದಿದ್ದರೆ ಎಂಎಲ್‌ಎ ಆಗಿರುತ್ತಿದ್ದರು! ಮುಂದೆ ಏನು ಕಥೆ?
ದರ್ಶನ್ ತೂಗುದೀಪ್ ಅವರು ಕರ್ನಾಟಕ ರಾಜಕೀಯ ಅಖಾಡದಲ್ಲಿ ಸಾಕಷ್ಟು ಹಿಡಿತವನ್ನ ಹೊಂದಿದ್ದರು. ಹೀಗಾಗಿ ನಟ ದರ್ಶನ್ ತೂಗುದೀಪ್ ರಾಜಕೀಯಕ್ಕೆ ಬಂದು ಕರ್ನಾಟಕದಲ್ಲಿ ಶಾಸಕರಾಗಿ ಕೂಡ ಆಯ್ಕೆ ಆಗ್ತಾರೆ, ಮುಂದೆ ಮಿನಿಸ್ಟರ್ ಕೂಡ ಆಗ್ತಾರೆ ಎಂಬ ನಿರೀಕ್ಷೆಗಳು ಇದ್ದವು. ಅದ್ರಲ್ಲೂ ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ದರ್ಶನ್ ಅವರು ಜೈಲು ಸೇರದೆ ಇದ್ದರೆ, ಬೆಂಗಳೂರು ಪಕ್ಕದಲ್ಲೇ ಇರುವ ಕ್ಷೇತ್ರ ಒಂದಕ್ಕೆ ಎಂಎಲ್ಎ ಆಗುವ ಎಲ್ಲಾ ಅವಕಾಶ ದರ್ಶನ್ ಅವರಿಗೆ ಒದಗಿ ಬಂದಿತ್ತು! ಹಾಗಾದರೆ ಮುಂದೇನು ಕಥೆ?
ದರ್ಶನ್ ತೂಗುದೀಪ್ ಸಿನಿಮಾ ಸ್ಕ್ರೀನ್ ಮೇಲೆ ಮಾತ್ರವಲ್ಲ, ಕರ್ನಾಟಕದಲ್ಲಿ ಚುನಾವಣೆಗೆ ಕ್ಯಾಂಪೇನ್ ಮಾಡಲು ಬಂದಾಗ ಕೂಡ ಲಕ್ಷ ಲಕ್ಷ ಜನ ಸೇರುತ್ತಿದ್ದರು. ದರ್ಶನ್ ತೂಗುದೀಪ್ ಚುನಾವಣಾ ಪ್ರಚಾರದ ಗತ್ತು ನೋಡಿ ಅದೆಷ್ಟೋ ಜನರು, ದರ್ಶನ್ ತೂಗುದೀಪ್ ಅವರು ಯಾಕೆ ಚುನಾವಣೆಗೆ ನಿಲ್ಲಬಾರದು? ಎಂಬ ಪ್ರಶ್ನೆ ಕೂಡ ಕೇಳುತ್ತಿದ್ದರು. ಯಾಕಂದ್ರೆ ಅಷ್ಟು ದೊಡ್ಡ ಮಟ್ಟದಲ್ಲಿ ದರ್ಶನ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಜನ ಸೇರಿ, ಶಿಳ್ಳೆ & ಚಪ್ಪಾಳೆ ಹಾಕುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಬೇರೆಯೇ ಆಗಿ ಹೋಗಿದ್ದು, ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಹಾಗಾದ್ರೆ ದರ್ಶನ್ ಅವರು ಮುಂದೆ ಕರ್ನಾಟಕದ ಶಾಸಕರಾಗಿ, ಅಂದ್ರೆ ಎಂಎಲ್‌ಎ ಆಗಿ ಆಯ್ಕೆ ಆಗುತ್ತಾರಾ?

ಕರ್ನಾಟಕದ ವಿಧಾನಸಭೆಗೆ ದರ್ಶನ್ ಎಂಟ್ರಿ?
ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಒಂದು ಕಡೆ ಸಿನಿಮಾ ಹಾಗೂ ಮತ್ತೊಂದು ಕಡೆ ರಾಜಕೀಯ ಅಖಾಡದಲ್ಲೂ ದರ್ಶನ್ ಅವರು ಹವಾ ಇಟ್ಟಿದ್ದರು. ಇದೇ ಕಾರಣಕ್ಕೆ ಮುಂದೆ ಬರಲಿರುವ ಚನ್ನಪಟ್ಟಣ ಕ್ಷೇತ್ರದ ವಿಧಾನಸಭೆ ಉಪಚುನಾವಣೆಗೆ ದರ್ಶನ್ ಅವರನ್ನ ಕಾಂಗ್ರೆಸ್ ಪಕ್ಷದಿಂದ, ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಲು ಕಾಂಗ್ರೆಸ್‌ನ ನಾಯಕರು ಚಿಂತನೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಅಷ್ಟರಲ್ಲೇ ಘೋರ ದುರಂತ ಕೂಡ ನಡೆದು ಹೋಗಿತ್ತು. ನಟ ದರ್ಶನ್ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಜೈಲಿನಿಂದ ಹೊರಗೆ ಬಂದ ನಂತರ...
ಹೀಗೆ ನಟ ದರ್ಶನ್ ಅವರು ಜೈಲಿಗೆ ಹೋದ ನಂತರ ಅವರಿಗೆ ಎಂಎಲ್‌ಎ ಆಗುವ ಅವಕಾಶ ಸಿಗೋದೆ ಇಲ್ವಾ? ಅನ್ನೋ ಪ್ರಶ್ನೆ ಕಾಡುತ್ತಿದೆ. ಆದರೆ ಇದಕ್ಕೆ ಉತ್ತರ ಕೂಡ ಇದೆ. ಏನಂದ್ರೆ ನಟ ದರ್ಶನ್ ತೂಗುದೀಪ್ ಕೊಲೆ ಪ್ರಕರಣದಲ್ಲಿ ಇನ್ನೂ ಆರೋಪಿ ಮಾತ್ರ ಆಗಿದ್ದಾರೆ. ಈ ಹಿನ್ನೆಲೆ ದರ್ಶನ್ ತೂಗುದೀಪ್ ಅವರ ವಿರುದ್ಧ ಕೊಲೆ ಆರೋಪ ಇನ್ನೂ ಸಾಬೀತು ಆಗಿಲ್ಲ. ಹೀಗಾಗಿ ದರ್ಶನ್ ಅವರು ಜೈಲಿನಿಂದ ಹೊರಗೆ ಬಂದ ನಂತರ ಚುನಾವಣೆಗೆ ನಿಂತು ನಮ್ಮ ರಾಜ್ಯದಲ್ಲಿ ಶಾಸಕರಾಗಿ ಕೂಡ ಆಯ್ಕೆ ಆಗುತ್ತಾರೆ ಎಂಬುದು ದರ್ಶನ್ ಅಭಿಮಾನಿಗಳ ನಿರೀಕ್ಷೆ.












Click it and Unblock the Notifications