Darshan Thoogudeepa: ದರ್ಶನ್ ತೂಗುದೀಪ್ ‘ಡೆವಿಲ್’ ಸಿನಿಮಾ ಕ್ಯಾನ್ಸಲ್? ಜೈಲಿನಿಂದ ರಿಲೀಸ್ ಆದ ತಕ್ಷಣ ‘ಕಾಟೇರ-2’ ಶುರು?

ದರ್ಶನ್ ತೂಗುದೀಪ್ ಅವರ ಸಿನಿಮಾ ಕರಿಯರ್ ಇದೀಗ ಸಂಕಷ್ಟಕ್ಕೆ ಸಿಲುಕಿದೆ, ಯಾಕಂದ್ರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿ ಜೈಲಿಗೆ ಸೇರಿದ ದರ್ಶನ್‌ರ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಇದೇ ಸಮಯದಲ್ಲಿ ದರ್ಶನ್ ತೂಗುದೀಪ್ ಸಿನಿಮಾ ಜೀವನ ಕೂಡ ಇದೇ ರೀತಿ ಆಘಾತಕ್ಕೆ ಸಿಲುಕಿದ್ದು, ದರ್ಶನ್ ತೂಗುದೀಪ್ 'ಡೆವಿಲ್' ಸಿನಿಮಾ ನಿಂತೇ ಹೋಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಹಾಗೇ ಮತ್ತೊಂದು ಕಡೆ ದರ್ಶನ್ ಅವರು ಜೈಲಿನಿಂದ ಹೊರಗೆ ಬಂದ ತಕ್ಷಣ 'ಕಾಟೇರ-2' ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಗಳಿಗೂ ಹಬ್ಬುತ್ತಿದೆ!

ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಆವರಣವನ್ನ ರೆಸಾರ್ಟ್ ಮಾಡಿಕೊಂಡು ಎಣ್ಣೆ, ಸಿಗರೇಟ್, ಬಿಯರ್, ಬಿರಿಯಾನಿ ಅಂತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಫೋಟೋಗಳು ಸೇರಿದಂತೆ ದರ್ಶನ್ ತೂಗುದೀಪ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು.

Darshan Thoogudeepa May Start Kaatera Chapter 2 Shooting After Coming From The Parappana Agrahara

ಈ ಘಟನೆ ಭಾರತದ ಮೂಲೆ ಮೂಲೆಗೂ ತಲುಪಿ, ರಾಷ್ಟ್ರೀಯ ನ್ಯೂಸ್ ಚಾನೆಲ್ ಸೇರಿದಂತೆ ದೊಡ್ಡ ದೊಡ್ಡ ಮಾಧ್ಯಮಗಳಲ್ಲಿ ದರ್ಶನ್ & ಗ್ಯಾಂಗ್ ಅಟ್ಟಹಾಸದ ಕುರಿತಾಗಿ ಸುದ್ದಿ ಪ್ರಸಾರ ಆಗಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಸಿನಿಮಾ ಕರಿಯರ್ ಕೂಡ, ದೊಡ್ಡ ಕಂಟಕಕ್ಕೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ 'ಡೆವಿಲ್' ಸಿನಿಮಾ ನಿಂತೇ ಹೋಯ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

'ಡೆವಿಲ್' ಸಿನಿಮಾ ನಿಂತೇ ಹೋಯ್ತಾ?

ದರ್ಶನ್ ತೂಗುದೀಪ್ ಅವರ ಬಹುನಿರೀಕ್ಷಿತ ಸಿನಿಮಾ 'ಡೆವಿಲ್' ಆಗಿದ್ದು, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 'ಡೆವಿಲ್' ಸಿನಿಮಾ ಮಾಡಲಾಗುತ್ತಿದೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರು ಕೂಡ 'ಡೆವಿಲ್' ಸಿನಿಮಾವನ್ನ 2024ರ ಡಿಸೆಂಬರ್ ತಿಂಗಳ ಒಳಗಾಗಿ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದರು. ಈ ಸಮಯದಲ್ಲೇ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿರುವ ಆರೊಪದಲ್ಲಿ ದರ್ಶನ್ ತೂಗುದೀಪ್ & ಗ್ಯಾಂಗ್ ಅರೆಸ್ಟ್ ಕೂಡ ಆಗಿದೆ. ಹೀಗೆ 'ಡೆವಿಲ್' ಸಿನಿಮಾ ಶೂಟಿಂಗ್ ನಿಂತು ಹೋಗಿದ್ದು, ಈ ಸಿನಿಮಾ ರಿಲೀಸ್ ಆಗುವುದೇ ಇಲ್ಲ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜಾನಾ? ಅಥವಾ ಸುಳ್ಳಾ? ಮುಂದೆ ಓದಿ.

'ಕಾಟೇರ-2' ಸಿನಿಮಾ ಶೂಟಿಂಗ್ ಶುರು?

ಮತ್ತೊಂದ್ಕಡೆ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರ ಬರುತ್ತಿದ್ದಂತೆ 'ಕಾಟೇರ-2' ಸಿನಿಮಾ ಶೂಟಿಂಗ್ ಶುರು ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ. ಈ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಜೋರಾಗಿದೆ. ಮತ್ತೊಂದು ಕಡೆ, ದರ್ಶನ್ ತೂಗುದೀಪ್ ಅವರನ್ನು ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಅಂದ್ರೆ ರಾಜಧಾನಿ ಬೆಂಗಳೂರಿನಿಂದ ನೇರವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ. ದರ್ಶನ್ & ಜೊತೆಗಾರರನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ. ಆದರೆ 'ಕಾಟೇರ-2'ನ ಶೂಟಿಂಗ್ ಶುರು ಮಾಡುವ ಬಗ್ಗೆ ಹಾಗೂ 'ಡೆವಿಲ್' ಸಿನಿಮಾ ನಿಂತು ಹೋಗಿದೆ ಎಂಬುದರ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನ ಸಿನಿಮಾ ತಂಡದವರೇ ಆಗಲಿ ಅಥವಾ ಇದಕ್ಕೆ ಸಂಬಂಧಪಟ್ಟವರೇ ಆಗಲಿ ನೀಡಿಲ್ಲ. ಹೀಗಾಗಿ ಇದು ಸುಳ್ಳು ಸುದ್ದಿ ಎನ್ನಲಾಗಿದೆ.

ಸಾಲು ಸಾಲು ಸಿನಿಮಾ ರಿಲೀಸ್!

ಒಟ್ನಲ್ಲಿ, ದರ್ಶನ್ ಅವರು ಇದೀಗ ಜೈಲಿನಿಂದ ಹೊರಗೆ ಬರಲಿ ಅಂತಾ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ ಅವರ ಪರ ಅಭಿಮಾನಿಗಳ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ದರ್ಶನ್ ಅವರಿಗೆ ಸಪೋರ್ಟ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಕೂಡ ಇದೆ. ಹಾಗೇ ಸಾಲು & ಸಾಲು ಸಿನಿಮಾ ತೆರೆಗೆ ತರುವ ಪ್ಲಾನ್ ಕೂಡ ಹಾಕಿಕೊಂಡಿದ್ದಾರೆ ದರ್ಶನ್ ಪರ ನಿಂತಿರುವ ನಿರ್ದೇಶಕ ಮತ್ತು ನಿರ್ಮಾಪಕರು ಹಾಗೂ ಕಲಾವಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+