Darshan Thoogudeepa: ‘ಡಿ-ಬಾಸ್’ ದರ್ಶನ್ ತೂಗುದೀಪ್‌ಗೆ ಸಿಗಲ್ಲ ಜಾಮೀನು?

ದರ್ಶನ್ ತೂಗುದೀಪ್ ತೀವ್ರ ಆಘಾತ ಎದುರಾಗಿದೆ, ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ನರಳಾಡುತ್ತಿರುವ ಸಮಯದಲ್ಲೇ ಇದೀಗ ಮತ್ತೊಂದು ಆಘಾತವೂ ಎದುರಾಗಿದೆ. ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ನಂಬರ್ 2 ಅಂದ್ರೆ, ಎ-2 ಆಗಿರುವ ದರ್ಶನ್ ತೂಗುದೀಪ್ ಇನ್ನೇನು ಜೈಲಿನಿಂದ ರಿಲೀಸ್ ಆಗಿ ಬರುತ್ತಾರೆ ಅಂತಾ ಅಭಿಮಾನಿಗಳು ಇದೀಗ ಕಾಯುತ್ತಿದ್ದರು. ಆದರೆ ಕೋಟಿ ಕೋಟಿ ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಆಘಾತವೇ ಎದುರಾಗಿದ್ದು, ಬಳ್ಳಾರಿ ಜೈಲಿನಲ್ಲಿ ಸಂಚಲನ ಸೃಷ್ಟಿಯಾಗಿದೆ.

ದರ್ಶನ್ ತೂಗುದೀಪ್ ತಮ್ಮ ಸಿನಿಮಾಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದರು. ಈ ಕಾರಣಕ್ಕೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಗೆ ಕೂಡ ವಾಯ್ಸ್ ಡಬ್ಬಿಂಗ್ ಆಗುತ್ತಿತ್ತು. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್ ಅವರ ವಿಚಾರ ಈಗ ಭಾರತದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಈ ವಿಚಾರವಾಗಿ ಚರ್ಚೆ ನಡೆಸುತ್ತಿವೆ. ಮತ್ತೊಂದು ಕಡೆ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿ, ನಟ ದರ್ಶನ್ ತೂಗುದೀಪ್ ಅವರು ಹೊರಗೆ ಬರುತ್ತಾರೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಆಘಾತವೇ ಎದುರಾಗಿದೆ.

Darshan Thoogudeepa May Not Get Bail Till Dasara Festival End

ಯಾಕೆ ಜಾಮೀನು ಕೊಡಬಾರದು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ನರಳಾಡುತ್ತಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಇಂದು ಕೂಡ ಜಾಮೀನು ಸಿಗಲೇ ಇಲ್ಲ. ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ಮತ್ತೊಮ್ಮೆ ವಿಚಾರಣೆಯನ್ನ ಮುಂದೂಡಿದೆ.

ಈಗಾಗಲೇ ದರ್ಶನ್ ತೂಗುದೀಪ್ ಪರ ವಕೀಲರು ವಾದ ಮಂಡಿಸಿದ್ದರು, ಆ ನಂತರ ದರ್ಶನ್ ಅವರಿಗೆ ಯಾಕೆ ಜಾಮೀನು ಕೊಡಬಾರದು? ಎಂದು ಕೂಡ ವಾದ ನಡೆದಿದೆ. ಇಂದು ಈ ಕುರಿತು ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿರುದ್ಧ ಎಸ್‌ಪಿಪಿ ವಾದ ಮಂಡನೆಯನ್ನ ಮಾಡಿದ್ದಾರೆ.

ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಲ್ವಾ?

ಹೀಗೆ ಎರಡೂ ಕಡೆಯ ವಾದ ಆಲಿಸಿದ ಮಾನ್ಯ ನ್ಯಾಯಾಲಯ ಇದೀಗ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ನಾಳೆಗೆ, ದರ್ಶನ್ ತೂಗುದೀಪ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಹೀಗಾಗಿ ನಾಳೆ ದರ್ಶನ್ ತೂಗುದೀಪ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಗುತ್ತಾ? ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ಆದರೆ ಮತ್ತೊಂದು ಕಡೆಯಲ್ಲಿ ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ಚಿಂತಿತರಾಗಿದ್ದು, ದಸರಾ ಹಬ್ಬದ ಒಳಗಾಗಿ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವುದಿಲ್ವಾ? ಎಂಬ ಚಿಂತೆಯಲ್ಲಿ ಇದ್ದಾರೆ.

ದರ್ಶನ್ ತೂಗುದೀಪ್ ದೂರ.. ದೂರ..?

ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.

ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರವೇ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದ್ದು, ಜಾಮೀನು ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+