Darshan Thoogudeepa: ಪವಿತ್ರಾ ಗೌಡ ಭೇಟಿ ಮಾಡುತ್ತಾರಾ ನಟ ದರ್ಶನ್ ತೂಗುದೀಪ್?

ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಒಬ್ಬರನ್ನ ಮತ್ತೊಬ್ಬರು ಬಿಟ್ಟು ಇರುತ್ತಿರಲಿಲ್ಲ ಎಂಬ ಸತ್ಯ ಇಡೀ ಜಗತ್ತಿಗೇ ಗೊತ್ತಾಗಿದೆ. ಆದರೆ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಹೀಗೆ ಜೈಲು ಸೇರಲು ಪರೋಕ್ಷವಾಗಿ ಪವಿತ್ರಾ ಗೌಡ ಕಾರಣ ಎಂಬ ಆಕ್ರೋಶ ಕೂಡ ಮೊಳಗಿದೆ. ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ಪವಿತ್ರಾ ಗೌಡ ವಿರುದ್ಧವೇ ರೊಚ್ಚಿಗೆದ್ದು, ನಮ್ಮ ಡಿ-ಬಾಸ್ ಜೈಲಿಗೆ ಹೋಗಲು ನೀನೇ ಕಾರಣ ಅಂತಾ ಪವಿತ್ರಾ ಗೌಡ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ದರ್ಶನ್ ಅವರ ಅಭಿಮಾನಿಗಳು. ಪರಿಸ್ಥಿತಿ ಹೀಗೆ ಇದ್ದಾಗಲೇ, ಪವಿತ್ರಾ ಗೌಡ ಭೇಟಿ ಮಾಡುತ್ತಾರಾ ನಟ ದರ್ಶನ್ ತೂಗುದೀಪ್?...

ಹೌದು, ದರ್ಶನ್ ತೂಗುದೀಪ್ ಇದೀಗ ಜಾಮೀನು ಸಿಗದ ಬೇಸರದಲ್ಲಿ ಬಳ್ಳಾರಿ ಜೈಲಿನಲ್ಲೇ ನರಳುತ್ತಿದ್ದಾರೆ. ಅಭಿಮಾನಿಗಳು ಕೂಡ ಇದೀಗ ಬೇಸರಗೊಂಡಿದ್ದು, ತಮ್ಮ ನೆಚ್ಚಿನ ನಾಯಕ ನಟ ಹೊರಗೆ ಬರುವುದು ಮಿಸ್ ಆಗಿದೆ ಅನ್ನೋ ಚಿಂತೆಯಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ 2ನೇ ಆರೋಪಿ ಆಗಿರುವ ನಟ ದರ್ಶನ್ ತೂಗುದೀಪ್ ಬೇಲ್ ಪಡೆಯಲು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಭೇಟಿ ಮಾಡುತ್ತಾರಾ ನಟ ದರ್ಶನ್ ತೂಗುದೀಪ್? ಎಂಬ ಪ್ರಶ್ನೆ ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎದ್ದಿದೆ! ಹಾಗಾದ್ರೆ ಈ ಪ್ರಶ್ನೆ ದಿಢೀರ್ ಹುಟ್ಟಿಕೊಂಡಿದ್ದು ಏಕೆ? ಮುಂದೆ ಓದಿ.

Darshan Thoogudeepa May Be Meet Pavithra Gowda After Coming Out Of Ballari

ಪವಿತ್ರಾ & ದರ್ಶನ್ ತೂಗುದೀಪ್ ಭೇಟಿ?

ಈ ಪ್ರಶ್ನೆ ಇದೀಗ ಯಾಕೆ ಮೂಡಿರುವುದು ಅಂದ್ರೆ, ಇತ್ತೀಚೆಗಷ್ಟೇ ಪವಿತ್ರಾ ಗೌಡ ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಹತ್ತಾರು ಫೋಟೋಗಳು ಸಿಕ್ಕಿವೆ. ಇದರಲ್ಲಿ ನಟ ದರ್ಶನ್ ತೂಗುದೀಪ್ ಹಾಗೂ ಪವಿತ್ರಾ ಗೌಡ ಜೊತೆಯಾಗಿ ತೆಗೆಸಿಕೊಂಡ ಫೋಟೋ ಹೆಚ್ಚಾಗಿ ಇವೆ. ಹೀಗೆ ಇಬ್ಬರೂ ಪ್ರೀತಿಯಿಂದ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ. ಹೀಗಾಗಿ ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ, ಪವಿತ್ರಾ ಗೌಡ ಅವರನ್ನು ಭೇಟಿ ಮಾಡುತ್ತಾರೆ ಅಂತಾ ಕೆಲವರು ಸುದ್ದಿ ಹಬ್ಬಿಸಿದ್ದರು. ಆದರೆ ಇದಕ್ಕೆ ಇಲ್ಲ.. ಇಲ್ಲ.. ಎಂಬ ಉತ್ತರವನ್ನು ಇನ್ನೂ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ನೀಡುತ್ತಿದ್ದಾರೆ.

ದರ್ಶನ್ ತೂಗುದೀಪ್‌ಗೆ ತೀವ್ರ ಆಘಾತ!

ಅಂದಹಾಗೆ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ರಿಲೀಸ್ ಆಗುವ & ಈ ಮೂಲಕ ಅದ್ಧೂರಿಯಾಗಿ ಹೊರಗೆ ಬರುವ ನಿರೀಕ್ಷೆ ಹುಸಿಯಾಗಿದೆ. ನಟ ದರ್ಶನ್ ಅವರ ಜಾಮೀನು ಅರ್ಜಿ ಇದೀಗ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಆಗಿರುವ ಜಾಮೀನು ಅರ್ಜಿಯ ವಿಚಾರವನ್ನ ತಿಳಿದು ಈಗ ದರ್ಶನ್ ತೂಗುದೀಪ್ ಅವರಿಗೆ ಆಘಾತವೇ ಎದುರಾಗಿದೆ ಎನ್ನಲಾಗಿದೆ. ಬಳ್ಳಾರಿ ಜೈಲಿನಲ್ಲಿ ಈ ಸುದ್ದಿಯನ್ನು ಕೇಳಿದ ದರ್ಶನ್ ಅವರು ಬೆಚ್ಚಿ ಬಿದ್ದಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+